ಸೆ. 14 ರಿಂದ 16ರವರೆಗೆ ಕೆರೆಗಳ ಸಂರಕ್ಷಣೆ ಕುರಿತು “ವೆಬಿನಾರ್” ಕಾರ್ಯಕ್ರಮ.

Share

ಸೆ. 14 ರಿಂದ 16ರವರೆಗೆ ಕೆರೆಗಳ ಸಂರಕ್ಷಣೆ ಕುರಿತು “ವೆಬಿನಾರ್” ಕಾರ್ಯಕ್ರಮ
ಮೈಸೂರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, water Institute, Department of Civil Engineering, UVCE,, ಬೆಂಗಳೂರು ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ಸೆಪ್ಟೆಂಬರ್ 14 ರಿಂದ ಸೆಪ್ಟೆಂಬರ್ 16 ರವರೆಗೆ ಪ್ರತಿದಿನ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ “ಮೈಸೂರು ಜಿಲ್ಲೆಯ ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಜವಾಬ್ದಾರಿ (Public Response on the Lake in Mysuru District) ಕುರಿತು “ವೆಬಿನಾರ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾಡುವರು. ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ನ್ಯಾಯಾಧಿಶರಾದ ಹೆಚ್.ಶಶಿಧರ್ ಶೆಟ್ಟಿ, ಬೆಂಗಳೂರಿನ ಇಸ್ರೋ ಮಾಜಿ ಅಧ್ಯಕ್ಷರರಾದ ಡಾ.ಎ.ಎಸ್.ಕಿರಣ್‍ಕುಮಾರ್ ಹಾಗೂ ಇತರೆ ಗಣ್ಯರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ.
ಈ ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವವರು Zoom id 77425111150 ಮತ್ತು passcode: 12345 ಅನ್ನು ಬಳಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಪಿ.ದೇವಮಾನೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share