ಸೇನಾ ಹೆಲಿಕಾಪ್ಟರ್ ‘ ಚಿತಾ ‘ ಪತನ: ಇಬ್ಬರು ಪೈಲೆಟ್ ನಾಪತ್ತೆ

Share

ಗುವಾಹಟಿ : ಭಾರತೀಯ ಸೇನೆಯ ಹೆಲಿಕಾಪ್ಟರ್ ‘ ಚೀತಾ ‘ ಇಂದು ಬೆಳಿಗ್ಗೆ ಅರುಣಾಚಲ ಪ್ರದೇಶದ ಮಂಡಲ್ ಬಳಿ ಪತನಗೊಂಡ ಬಗ್ಗೆ ವರದಿಯಾಗಿದೆ.
ಓರ್ವ ಲೆಫ್ಟಿನೆಂಟ್ ಕರ್ನಲ್ ಮತ್ತು ಇನ್ನೋರ್ವ ಮೇಜರ್ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಹೆಲಿಕಾಪ್ಟರ್ ಬೆಳಗ್ಗೆ 9:15ಕ್ಕೆ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕ ಕಳೆದುಕೊಂಡಿತು ಎಂದು ಸೇನೆ ತಿಳಿಸಿದೆ. ಸೇನೆಯ ಏವಿಯೇಷನ್ ​​ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಕಾರ್ಯಾಚರಣೆಯ ವಿಹಾರಕ್ಕೆ ಹಾರಾಟ ನಡೆಸುತ್ತಿದಾಗ ದುರಂತಕ್ಕೆ ಈಡಾಗಿರಬಹುದೆಂದು ಶಂಕಿಸಲಾಗಿದೆ.
ಟಿ ಮಂಡಲದ ಬಳಿ, ಬೊಮ್ಡಿಲಾ ಪಶ್ಚಿಮ ಭಾಗದಲ್ಲಿ ಅಪಘಾತಕ್ಕೀಡಾಗಿದೆ ಎಂದು ಶೋಧ ಕಾರ್ಯಗಳನ್ನು ಆರಂಭಿಸಲಾಗಿದೆ.


Share