ಸೇಬಿನ ಹಾರ ಹಾಕಿ ಸ್ವಾಗತಿಸಿದ ಗ್ರಾಮಸ್ಥರು

Share

ದಿನವೀಡಿ ಹಲವಾರು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭರ್ಜರಿ ಪ್ರಚಾರ
*ಲಲಿತಾದ್ರಿಪುರದಲ್ಲಿ ಕ್ರೇನ್ ಮೂಲಕ ಭಾರಿ ತೂಕದ ಸೇಬಿನ ಹಾರ ಹಾಕಿ ಸ್ವಾಗತಿಸಿದ ಗ್ರಾಮಸ್ಥರು
ಮೈಸೂರು; ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳಲ್ಲಿ ಮಂಗಳವಾರ ದಿನವೀಡಿ ಬಿಜೆಪಿ ಅಭ್ಯರ್ಥಿಯಾದ ಸಚಿವ ವಿ.ಸೋಮಣ್ಣ ಭರ್ಜರಿ ಚುನಾವಣಾ ಪ್ರಚಾರವನ್ನು ನಡೆಸಿದರು.
ಮೊದಲಿಗೆ ಲಿಲಿತಾದ್ರಿಪುರದಲ್ಲಿ ವಿ,ಸೋಮಣ್ಣ ಮತಯಾಚನೆ ಪ್ರಾರಂಭಿಸಿದರು.
ಗ್ರಾಮಕ್ಕೆ ಆಗಮಿಸಿದ ಅವರನ್ನು ಸುಮಾರು 25 ಅಡಿ ಎತ್ತರವಿದ್ದ ಭಾರೀ ಗಾತ್ರದ ಸೇಬಿನ ಹಾರವನ್ನು ಕ್ರೇನ್ ಮೂಲಕ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗ್ರಾಮದಲ್ಲಿರುವ ಬಸವೇಶ್ವರರ ದೇವಸ್ಥಾನಕ್ಕೆ ಭೇಟಿ ನೀಡಿದ ವಿ.ಸೋಮಣ್ಣ ಪೂಜೆ ಸಲ್ಲಿಸಿದರು. ಬಳಿಕ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ಗ್ರಾಮದಲ್ಲಿರುವ ದಲಿತರ ಬಡಾವಣೆಗೆ ಭೇಟಿ ನೀಡಿ, ಅಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಚುನಾವಣಾ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು. ಒಕ್ಕಲಿಗರ ರಾಮಮಂದಿರಕ್ಕೆ ಭೇಟಿ ನೀಡಿ, ಮತಯಾಚನೆ ಮಾಡಿದರು. ವಿಶ್ವಕರ್ಮರ ಬಡಾವಣೆ ಭೇಟಿ ನೀಡಿ, ಅಲ್ಲೂ ಕೂಡ ಮತಯಾಚನೆ ಮಾಡಿದರು. ಬಳಿಕ ಗ್ರಾಮದಲ್ಲಿ ರೋಡ್ ಶೋ ನಡೆಸಿದರು. ನಂತರ ಮಾತನಾಡಿದ ಅವರು,ಲಲಿತಾದ್ರಿಪುರ ಗ್ರಾಮವನ್ನು ಮೈಸೂರಿನ ಮಹಾರಾಜರು ಬಹಳ ಸುಂದರವಾಗಿ ನಿರ್ಮಿಸಿದ್ದಾರೆ. ಇಲ್ಲಿ ಎಲ್ಲಾ ಜಾತಿಯ ಜನರು ಸೌಹಾರ್ಧತೆಯಿಂದ ಬಾಳ್ವೆ ನಡೆಸುತ್ತಿದ್ದಾರೆ. ಈ ಗ್ರಾಮದಲ್ಲಿ ಹಲವುವಾರು ಅಭಿವೃದ್ಧಿ ಕೆಲಸಗಳು ನಡೆದಿವೆ. ಇನ್ನೂ ನಡೆಯಬೇಕಾಗಿದೆ. ಇಲ್ಲಿ ಬಸವ ಭವನವನ್ನು ನಿರ್ಮಿಸುವುದಕ್ಕಾಗಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಮೂರು ಕೋಟಿರೂಗಳನ್ನು ನೀಡಿದ್ದಾರೆ. ಮೈಸೂರು ನಗರಕ್ಕೆ ಬಹಳ ಹತ್ತಿರವಾಗಿರುವ ಈ ಗ್ರಾಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಇಲ್ಲಿ ವಾಸಿಸುತ್ತಿರುವ ಜನರಿಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಹಾಗಾಗಿ ಗ್ರಾಮದ ಜನರು ಈ ಬಾರಿಯ ಚುನಾವಣೆಯಲ್ಲಿ ನನಗೆ ಸಾಮೂಹಿಕವಾಗಿ ಬೆಂಬಲ ನೀಡಿ, ಮತದಾನ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಲಲಿತಾದ್ರಿಪುರ ಮೈಸೂರು ನಗರದಲ್ಲಿಯೇ ಇದೆ. ಆದರೆ ಇನ್ನೂ ಕೂಡ ನಗರಪಾಲಿಕೆಯ ವ್ಯಾಪ್ತಿಗೆ ಸೇರಿಲ್ಲ, ಇದನ್ನು ಸೇರಿಸಿ, ಸಮಗ್ರವಾಗಿ ಅಭಿವೃದ್ಧಿ ಮಾಡಿ, ಇಲ್ಲಿನ ಜನರಿಗೆ ಅಗತ್ಯವಿರುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಹಾಗಾಗಿ ಗ್ರಾಮದ ಜನರು ಬಿಜೆಪಿ ಅಭ್ಯರ್ಥಿಯಾದ ವಿ.ಸೋಮಣ್ಣರಿಗೆ ಸಂಪೂರ್ಣವಾಗಿ ಬೆಂಬಲ ನೀಡಿ, ಮತವನ್ನು ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡ ಕಾ.ಪು.ಸಿದ್ದಲಿಂಗಸ್ವಾಮಿ ಮಾತನಾಡಿ ನಾನು ಈ ಹಿಂದೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ 2 ಸಾವಿರ ಮತಗಳನ್ನು ನನಗೆ ಈ ಗ್ರಾಮದ ಜನರು ನೀಡುವ ಮೂಲಕ ಬೆಂಬಲಿಸಿದ್ದರು. ಈಗ ಬಿಜೆಪಿ ಅಭ್ಯರ್ಥಿಯಾದ ವಿ.ಸೋಮಣ್ಣನವರಿಗೆ ಗ್ರಾಮದ ಎಲ್ಲಾ ಕೋಮಿನ ಜನರು ಸಾಮೂಹಿಕವಾಗಿ ಮತನೀಡುವ ಮೂಲಕ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.
ಗ್ರಾಮದ ಮುಖಂಡರಾದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ನೇತೃತ್ವದಲ್ಲಿ ನಡೆದ ಈ ಭರ್ಜರಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಲಿಂಗಾಯಿತರು, ಒಕ್ಕಲಿಗ, ದಲಿತರ, ವಿಶ್ವಕರ್ಮ ಜನಾಂಗದ ಯುವ ಸಂಘ, ಸಂಸ್ಥೆಗಳ ನೂರಾರು ಮಂದಿ ಯುವಕರು, ಗ್ರಾಮದ ವಿವಿಧ ಕೋಮಿನ ಯಜಮಾನರುಗಳು, ಮುಖಂಡರುಗಳು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಯುವಕರು, ಮಹಿಳೆಯರು ಭಾಗವಹಿಸಿದ್ದರು. ರೋಡ್ ಶೋ ವೇಳೆ ತೆರೆದ ವಾಹನದಲ್ಲಿ ಸಾಗುತ್ತಿದ್ದ ವಿ.ಸೋಮಣ್ಣ, ಸಂಸದ ಪ್ರತಾಪ್‌ಸಿಂಹರಿಗೆ ಹೂವಿನ ಸುರಿಮಳೆಗೈದರು.
ಬಳಿಕ ವಿ.ಸೋಮಣ್ಣನವರು ಅಹಲ್ಯಗ್ರಾಮ, ಗೌಡರಹುಂಡಿ, ಶ್ರೀರಾಂಪುರ, ಕೆಂಬಾಲು, ಬಿದರಗೂಡು, ಹಳ್ಳಿಕೆರೆಹುಂಡಿ, ಮರಳೂರು ಗೊದ್ದನಪುರ, ಏಚಗಳ್ಳಿ, ಹಳ್ಳಿದಿಡ್ಡಿ, ತಾಂಡವಾಪುರ, ಅಡಕನಹಳ್ಳಿಹುಂಡಿ, ಬಂಚಹಳ್ಳಿಹುAಡಿ, ಚಿಕ್ಕಯ್ಯನಛತ್ರ, ಬಸವನಪುರ, ಕೆಂಪಿಸಿದ್ದನಹುAಡಿ, ಹೆಜ್ಜಿಗೆ, ತೊರೆಮಾವು, ಇಮ್ಮಾವು, ಜಕ್ಕಳ್ಳಿ, ಹುಳಿಮಾವು ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿ, ಗ್ರಾಮದ ಜನರಲ್ಲಿ ಮತಯಾಚನೆ ಮಾಡಿದರು.


Share