ಸೈಬರ್ ಕ್ರೈಂ ಕಡಿವಾಣ ಇಲ್ಲವೇ?

Share

ಸೈಬರ್ ಕ್ರೈಮ್ ಕಡಿವಾಣ ಇಲ್ಲವೇ?. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ಕ್ರೈಮ್ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಇದೆಯೋ? ಇಲ್ಲವೋ? ಎಂಬ ಯುಟ್ಯೂಬ್ ಎಂಪಿ ಟಾಕ್ ಚರ್ಚೆಯ ಕಾರ್ಯಕ್ರಮವನ್ನು ಇದೀಗ ನಿಮ್ಮ ಮುಂದೆ ಇಡುತ್ತಿದ್ದೇವೆ— ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಪ್ರಸಂಗವೊಂದರಲ್ಲಿ ಅಲ್ಲಿಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದರೆಂದು ಹೇಳಲಾದ ಕೆಲವು ವಿಷಯಗಳನ್ನು ಅಲ್ಲಿಯ ಜಾಲತಾಣ ಮೇಲ್ವಿಚಾರಣಾ ಸಂಸ್ಥೆ ಯಾವುದೇ ಮುಲಾಜಿಲದೆ ಕಿತ್ತುಹಾಕಿ ತೆಂದು ಹೇಳಲಾಗಿದ್ದು, ಭಾರತದಲ್ಲಿ ಇದು ಸಾಧ್ಯವಿಲ್ಲವೇ?…… ಯಥೇಚ್ಛವಾಗಿ ಉಚಿತವಾಗಿ ದೊರೆಯುತ್ತಿರುವ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಬಳಸಿಕೊಂಡು ಭಾರತದಲ್ಲಿ ಇತ್ತೀಚೆಗೆ ಅಪರಾಧಗಳು ಹೆಚ್ಚುತ್ತಿದೆ, ಇವುಗಳನ್ನು ಹೇಗೆ ತಡೆಯಲು ಸಾಧ್ಯ? ಇದಕ್ಕೆಂದೇ ಕಾಯಿದೆ ಕಟ್ಟಳೆಗಳು ಇವೆಯೇ?……… ಭಾರತದಲ್ಲೂ ಇನ್ಫಾರ್ಮೇಶನ್ ಟೆಕ್ನಾಲಜಿ ಆಕ್ಟ್ 2000 ಜಾರಿಯಲ್ಲಿದ್ದು ಇದಕ್ಕೆ ಹೆಚ್ಚಿನ ಪ್ರಚಾರವಿಲ್ಲದೆ ಅಪರಾಧಗಳು ಹೆಚ್ಚುತ್ತಿವೆ. ಕೇಂದ್ರ ಸರ್ಕಾರವು ಸೈಬರ್ ಕ್ರೈಮ್ ದೂರುಗಳು ನೀಡಲು ಟಾಲ್ ಫ್ರೀ ಫೋನ್ ಸಂಖ್ಯೆ100 ಹೆಂಗಸರು ಮಕ್ಕಳ ಮೇಲೆ ನಡೆಸುವ ಅಪರಾಧಗಳಿಗಾಗಿ 181 , ಗೃಹ ಸಚಿವಾಲಯದಿಂದ ದೂರವಾಣಿ 155260 ಸಂಖ್ಯೆಗಳು ಜಾರಿಯಲ್ಲಿದ್ದು ಇದನ್ನು ಜನತೆ ಹೆಚ್ಚಾಗಿ ಬಳಸಬೇಕಾಗಿದೆ . ಎಲ್ಲದಕ್ಕಿಂತ ಹೆಚ್ಚಾಗಿ ಹತ್ತಿರದ ಪೊಲೀಸ್ ಸ್ಟೇಷನ್ ನಲ್ಲಿ ಇದರ ಬಗ್ಗೆ ನಿಖರ ಮಾಹಿತಿ /ದೂರು ಸಲ್ಲಿಸಬಹುದಾಗಿದೆ. ಎಂಬ ಮಾಹಿತಿಗಳನ್ನು ಈ ಚರ್ಚೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.


Share