ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಸ್ಪರ್ಧೆಗೆ ಆಹ್ವಾನ
ಮೈಸೂರು, – ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೈಸೂರು ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ವತಿಯಿಂದ `ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಸ್ಪರ್ಧೆ’ ಆಯೋಜಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದು.
ಸಾಂಸ್ಥಿಕ ಮತ್ತು ಗೃಹೋತ್ಪಾದಿತ ತ್ಯಾಜ್ಯ, ನೀರಿನ ಸೂಕ್ತ ವಿಲೇವಾರಿ ಕುರಿತಂತೆ ಕಿರುಚಿತ್ರ, ಯಶೋಗಾಥೆ, ಮಾದರಿ ಇವುಗಳಲ್ಲಿ ಯಾವುದಾದರೊಂದನ್ನು ಕಳುಹಿಸಿ ಬಹುಮಾನ ಗೆಲ್ಲಬಹುದಾಗಿದೆ. ದ್ರವ ತ್ಯಾಜ್ಯ ವಿಲೇವಾರಿ, ಕನಿಷ್ಠ ಯಾಂತ್ರಿಕ ಬಳಕೆ, ಕಡಿಮೆ ವೆಚ್ಚ, ಸರಳ ಹಾಗೂ ಗ್ರಾಮೀಣ ಸ್ನೇಹಿ ಅಂಶಗಳನ್ನು ಒಳಗೊಂಡಿರಬೇಕು.
ಈ ಮೇಲಿನ ಯಾವುದಾದರೂ ಒಂದನ್ನು zpmysurucontest@gmail.com ಕಳುಹಿಸಬಹುದು. ಅರ್ಜಿ ನಮೂನೆಗಾಗಿ ಮೈಸೂರು ಜಿಲ್ಲಾ ಪಂಚಾಯತ್ ವೆಬ್‌ಸೈಟ್ ಐಡಿ https://mysore.nic.in ಸಂಪರ್ಕಿಸಬಹುದಾಗಿದೆ.
ಪರಿಹಾರೋಪಾಯಗಳನ್ನು ಕಳುಹಿಸಲು ಜೂನ್ 19 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ ಅಧಿಕೃತ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಬಹುದು ಅಥವಾ ಸ್ವಚ್ಛ ಭಾರತ್ ಮಿಷನ್ (ಗ್ರಾ), ಜಿಲ್ಲಾ ನೆರವು ಘಟಕದ ಮೊ.ಸಂ.0821- 2526347 ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.