ಸ್ವಾತಂತ್ರ್ಯ ದಿನಾಚರಣೆ-ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ದೇಣಿಗೆ

 

ಸ್ವಾತಂತ್ರ್ಯೋತ್ಸವ ಅಂಗವಾಗಿ
ಲಯನ್ಸ್ ಕ್ಲಬ್ ಗಂಗೋತ್ರಿ ವತಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ದೇಣಿಗೆ

ನಗರದ ಬೃಂದಾವನ ಬಡಾವಣೆಯಲ್ಲಿರುವ ಚಾಮುಂಡಿ ಚಿಲ್ಡ್ರನ್ಸ್ ಹೋಂ ಶಿಕ್ಷಣ ಸಂಸ್ಥೆ ಯಲ್ಲಿ
77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಗಂಗೋತ್ರಿಯ ಸದಸ್ಯೆಯರು ನಡೆದ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ಮಾಡಿ ಮಕ್ಕಳಿಗೆ ಸಿಹಿ ವಿಚರಿಸಿ ನಂತರ ಮಕ್ಕಳ ಶಿಕ್ಷಣಕ್ಕಾಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ರಘೋತ್ತಮ ರಾವ್ ರವರಿಗೆ 5,000 ರೂಗಳ ದೇಣಿಗೆಯನ್ನು ಸಂಸ್ಥೆಯ ಅಧ್ಯಕ್ಷೆಯಾದ ಲಯನ್ ಮಾಲಾ ಚಂದ್ರಶೇಖರ್ ರವರು ನಗದು ಮೂಲಕ ನೀಡಿದರು
ಈ ಸಮಾರಂಭದಲ್ಲಿ ಕ್ಲಬ್ ನ ಸದಸ್ಯರಾದ ಗಾಯತ್ರಿ ಜಗದೀಶ್,
ಉಮಾ ಬಾಬು, ಕಲಾವತಿ ಮತ್ತು ಪ್ರೀತಿ ಹಾಗೂ ಇನ್ನಿತರರು ಭಾಗವಹಿಸಿದ್ದರು.