*ಸ್ವಾತಂತ್ರ್ಯ ಹೋರಾಟಗಾರರ ಸಂಘದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಒಂದು ನೆನಪು*
ಇಂದು ಸುಬ್ಬರಾಯನಕೆರೆ ಆವರಣದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸಂಘದಲ್ಲಿ ಸಂಘದ ಅಧ್ಯಕ್ಷರಾದ ವೈ ಸಿ ರೇವಣ್ಣ ಹಾಗೂ ಸ್ಥಳೀಯ ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್ ರವರ ನೇತೃತ್ವದಲ್ಲಿ 81ನೇವರ್ಷದ ಕ್ವಿಟ್ ಇಂಡಿಯಾ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) ಚಳುವಳಿಯ ದಿನಾಚರಣೆ ನೆರವೇರಿತು, ಅಧ್ಯಕ್ಷರಾದ ವೈ ಸಿ ರೇವಣ್ಣ ಧ್ವಜಾರೋಹಣವನ್ನು ನೆರವೇರಿಸಿ ಹಾಗೂ ರಾಷ್ಟ್ರ ಗೀತೆಯನ್ನು ಹೇಳಿದರು, ನಂತರ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು, ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹೋರಾಟದ ಕಿಚ್ಚು ಹಚ್ಚಲು ಗಾಂಧೀಜಿಯವರು ನೀಡಿದ ಈ ಘೋಷ ವಾಕ್ಯದ ಪರಿಣಾಮ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿ ದೇಶ ವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಮಹತ್ವದ ಹಂತವಾಯಿತು ಎಂದೇ ವಿಶ್ಲೇಷಿಸಿದ್ದಾರೆ.
ಅನೇಕ ಮಾಹಿತಿಗಳನ್ನು ಅಧ್ಯಕ್ಷರಾದ ವೈ ಸಿ ರೇವಣ್ಣ ಅವರ ಭಾಷಣದಲ್ಲಿ ತಿಳಿಸಿದರು ಮತ್ತು ಹೋರಾಟಗಾರರಿಗೆ ನೀಡುತ್ತಿರುವ ಗೌರವ ದಾನದಲ್ಲಿ ತೋರುತ್ತಿರುವ ಅಗೌರವ ಬಗ್ಗೆ ಮಾತನಾಡಿದರು,
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು ಹಾಜರಿದ್ದರು
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪರಮೇಶ್ ಗೌಡ, ಸುರೇಂದ್ರ, ಪಾಪಣ್ಣ, ರಾಜೇಂದ್ರ, ಸುದರ್ಶನ್, ಶ್ರೀನಿವಾಸ್, ವಿಜ್ಞೇಶ್ವರ ಭಟ್, ರಾಜೇಂದ್ರ ಸುಕನ್ಯ, ಎಸ್ ಎನ್ ರಾಜೇಶ್ , ರಾಕೇಶ್, ಪವನ್ ಸಿದ್ದರಾಮು ಹಾಗೂ ಇನ್ನಿತರರು ಹಾಜರಿದ್ದರು