*ತ್ರಿಮತಸ್ಥ ಬ್ರಾಹ್ಮಣರ ಐಕ್ಯತೆ- ಏಕತೆಗೆ ಎಲ್ಲರೂ ಒಗ್ಗೂಡಬೇಕು: ಶ್ರೀ ವಿಶ್ವ ಪ್ರಸನ್ನ ತೀರ್ಥ*
ಬ್ರಾಹ್ಮಣ ಸಮುದಾಯ ಬಲಯುತ ಆಗಬೇಕಾದರೆ ತಮ್ಮ ಸಮುದಾಯದ ಬಗ್ಗೆ ಸ್ವಾಭಿಮಾನ, ಒಗ್ಗಟ್ಟು ಏರ್ಪಡುವಂತ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ಹೇಳಿದರು
ಸರಸ್ವತಿಪುರಂನಲ್ಲಿರುವ ಕೃಷ್ಣ ದಾಮದಲ್ಲಿ ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ರವರ ಆಶೀರ್ವಾದ ಪಡೆದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ನಂತರ ಬ್ರಾಹ್ಮಣರ ಸಂಘಟನೆ ಮತ್ತು ಐಕ್ಯತೆ ಹಾಗೂ ಅಭಿವೃದ್ಧಿ ಕುರಿತು ಸಮಾಲೋಚನಾ ಮಾಡಿದರು ಬಲಿಕ ಮಾತನಾಡಿದ ಶ್ರೀಗಳು
ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಮುಂದಿನ 50 ವರ್ಷ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕಿದೆ. ಅದಕ್ಕೆ ಪೂರ್ವದಲ್ಲಿ ಬ್ರಾಹ್ಮಣ ಸಮುದಾಯದ ಸಂಸ್ಕೃತಿ, ಮೌಲ್ಯ ಉಳಸಲು, ಸ್ವಾಭಿಮಾನ ಹಾಗೂ ಒಗ್ಗಟ್ಟು ಹೆಚ್ಚಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು
ನಂತರ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಿ ಆರ್ ನಟರಾಜ್ ಜೋಯಿಸ್ ಸಮಾಜಕ್ಕೆ ಬ್ರಾಹ್ಮಣರ ಕೊಡುಗೆ ಅಪಾರ, ಬ್ರಾಹ್ಮಣ ಸಮಾಜ ಎಲ್ಲರ ಒಳಿತನ್ನು ಸರ್ವೇ ಜನ ಸುಖೀನೋ ಭವಂತು ಎಂದು ಹೇಳುವ ಸಮಾಜ. ಅಂತಹ ಸಮಾಜದಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬ್ರಾಹ್ಮಣ ಸಮಾಜ ಬಂದಿದೆ. ಎಂದು ಹೇಳಿದರು
ಇದೇ ಸಂದರ್ಭದಲ್ಲಿ ನಿವೃತ್ತಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪುಷ್ಪ ಅಯ್ಯಂಗಾರ್, ಹಿರಿಯ ಸಮಾಜ ಸೇವಕರಾದ ಡಾಕ್ಟರ್ ಕೆ ರಘುರಾಮ್ ವಾಜಪೇಯಿ, ಕೇಂದ್ರ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಎಂ ಎಸ್ ರವೀಂದ್ರ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು