ಹಿಂದಿ ಶಿಕ್ಷಕರ ಐದು ದಿನಗಳ ಆನ್‍ಲೈನ್ ಕಾರ್ಯಾಗಾರಕ್ಕೆ ಚಾಲನೆ

Share

ಹಿಂದಿ ಶಿಕ್ಷಕರ ಐದು ದಿನಗಳ ಆನ್‍ಲೈನ್ ಕಾರ್ಯಾಗಾರಕ್ಕೆ ಚಾಲನೆ
ಮೈಸೂರು, ಮೈಸೂರಿನಲ್ಲಿರುವ ರಾಷ್ಟ್ರೀಯ ಪರೀಕ್ಷಣಾ ಸೇವಾ-ಭಾರತ (ಎನ್.ಟಿ.ಎಸ್.-ಐ), ಭಾರತೀಯ ಭಾμÁ ಸಂಸ್ಥಾನದಲ್ಲಿ ಸೋಮವಾರ ಹಿಂದಿ ಶಿಕ್ಷಕರಿಗಾಗಿ ಐದು ದಿನಗಳ ಆನ್ ಲೈನ್ ಪರೀಕ್ಷಣೆ ಮತ್ತು ಮೌಲ್ಯಮಾಪನ ಹಾಗೂ ಅಂಶ ಬರವಣಿಗೆಯ ಕುರಿತಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.
ಹಿಂದಿ ಮತ್ತು ಭಾμÁಶಾಸ್ತ್ರ ಬೋಧನೆಯಲ್ಲಿ ನಿರತರಾಗಿರುವ ಭಾರತದಾದ್ಯಂತದವಿರುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸುಮಾರು 20 ಶಿಕ್ಷಕರು ಈ ಆನ್‍ಲೈನ್ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ.
ಈ ತರಬೇತಿ ಕಾರ್ಯಾಗಾರದಲ್ಲಿ ಭಾರತದಾದ್ಯಂತವಿರುವ ಹಿಂದಿ ಭಾμÉ, ಸಾಹಿತ್ಯ ವಿಷಯದಲ್ಲಿ ಬೋಧನಾ ನಿರತ ಸಹಾಯಕ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
ಭಾರತೀಯ ಭಾμÁ ಸಂಸ್ಥಾನದ ಪ್ರಾಧ್ಯಾಪಕರು ಹಾಗೂ ಉಪ ನಿರ್ದೇಶಕರಾದ ಪೆÇ್ರ. ಪಿ.ಆರ್. ಧರ್ಮೇಶ್ ಫನಾರ್ಂಡೀಜ್ ಅವರು ಮಾತನಾಡಿ, ಭಾರತೀಯ ಭಾμÁ ಸಂಸ್ಥಾನದ ಕಾರ್ಯ ವೈಖರಿಗಳು ಹಾಗೂ ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಶಿಬಿರಾರ್ಥಿಗಳಿಗೆ ವಿವರಣೆಯನ್ನು ನೀಡಿದರು. ಹಾಗೂ ಶಿಕ್ಷಣ, ಕಲಿಕೆ ಹಾಗೂ ಪರೀಕ್ಷಣೆಗಳ ಗುಣಮಟ್ಟವನ್ನು ಉನ್ನತೀಕರಿಸಲು ಕೈ ಜೋಡಿಸುವಂತೆ ಕರೆ ನೀಡಿದರು.
ಭಾರತದ ಎಲ್ಲಾ ಭಾμÉಗಳಲ್ಲಿ ಶಿಕ್ಷಕರಿಗೆ ಗುಣಮಟ್ಟದ ತರಬೇತಿಯನ್ನು ನೀಡಲು ಎನ್.ಟಿ.ಎಸ್-ಐ ಬದ್ಧವಾಗಿದೆ. ಮುಂಬರುವ ದಿನಗಳಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಉರ್ದು ಭಾμÉಗಳ ತರಬೇತಿ ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಎನ್.ಟಿ.ಎಸ್.ಐ ನ ಪ್ರಭಾರ ಅಧಿಕಾರಿ ಡಾ. ಪಂಕಜ್ ದ್ವಿವೇದಿ ಅವರು ಮಾತನಾಡಿ, ಈ ಕಾರ್ಯಾಗಾರದ ಧೆಯ್ಯೋದ್ದೇಶಗಳ ಬಗ್ಗೆ ವಿವರಣೆಯನ್ನು ನೀಡಿದರು. ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗಗಳಂತೆ, ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ವಿಭಾಗಗಳೂ ಸಹ ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಪರೀಕ್ಷಣೆ ಮತ್ತು ಅವರ ಸಮಗ್ರ ಮೌಲ್ಯಮಾಪನಕ್ಕಾಗಿ ಉಪಕರಣಗಳು, ತಂತ್ರಗಳು, ವಿಧಾನಗಳು, ಪರಿಮಾಣ ಹಾಗೂ ಮಾದರಿ ಇತ್ಯಾದಿಗಳ ಅಳವಡಿಕೆಯ ಅಗತ್ಯವಿದೆ ಎಂದರು.
ಎನ್.ಟಿ.ಎಸ್-ಐ, ಈ ರೀತಿಯ ತರಬೇತಿ ಶಿಬಿರಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳಿಗೆ ಆಯೋಜಿಸುವ ಮೂಲಕ, ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಅಗತ್ಯವಾದ ಉಪಕರಣಗಳು, ತಂತ್ರಗಳು, ವಿಧಾನಗಳು, ಪರಿಮಾಣಗಳ ಬಗ್ಗೆ ಅವರಿಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಿದ್ದು, ಆ ಮೂಲಕ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯ ನಡುವಿನ ಅಂತರವನ್ನು ತುಂಬುವ ಗುರಿಯನ್ನು ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್.ಟಿ.ಎಸ್-ಐ ನ ಶೈಕ್ಷಣಿಕ ಮತ್ತು ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಭಾರತೀಯ ಭಾμÁ ಸಂಸ್ಥಾನದ ಪ್ರಾಧ್ಯಾಪಕರು ಹಾಗೂ ಉಪ ನಿರ್ದೇಶಕರಾದ ಪೆÇ್ರ. ಪಿ.ಆರ್. ಧರ್ಮೇಶ್ ಫನಾರ್ಂಡೀಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share