ಮೈಸೂರು . ಅವಧೂತ ದತ್ತಪೀಠ ಗಣಪತಿ ಸಚ್ಚಿದ್ದಾನಂದ ಆಶ್ರಮ ಮತ್ತು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಮೈಸೂರು ನಗರದಲ್ಲಿ ವಾಸವಾಗಿರುವ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ನೀಡಲಾಗುತ್ತಿರುವ ಆಹಾರಕಿಟ್ ಗಳನ್ನು ಇಟ್ಟಿಗೆಗೂಡಿನಲ್ಲಿರುವ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ವಿತರಿಸಿದರು, ನಂತರ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ರವರು ಮಾತನಾಡಿ ಕೊರೊನೊ ಸೊಂಕಿನಿಂದ ದೇಶವೇ ಲಾಕ್ ಡೌನ್ ಆಗಿದ್ದು 2ತಿಂಗಳಿನಿಂದ ದೇವಸ್ಥಾನಗಳು ಬಂದ್ ಸೇರಿದಂತೆ ಸಮಾರಂಭಗಳು ನಿಷೇಧವಾಗಿದೆ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರು ಸಹ ಮೈಸೂರು ಭಾಗದಲ್ಲಿ ಬಹಳ ಕಷ್ಟದ ಪರಿಸ್ಥಿಯಲ್ಲಿದ್ದಾರೆ, ಇದರ ಕಡೆ ಗಮನ ಹರಿಸುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಮಂದಗತಿಯಾಗಿರುವುದು ಬೇಸರದ ಸಂಗತಿ, ಅರ್ಚಕರಿಗೆ ಪುರೋಹಿತರಿಗೆ ಪ್ರತಿವರ್ಷ ನೀಡುವಂತೆ ತ್ವಸ್ಥಿಕ್ ಹಣ ಬಂದಿದೆಯೇ ಹೊರೆತು ಕೊರೋನಾ ಪರಿಹಾರ ನಿಧಿ ಪುರೋಹಿತರಿಗೆ ಅರ್ಚಕರಿಗೆ ಬಿಡುಗಡೆಯಾಗಿಲ್ಲ ಇದರ ಬಗ್ಗೆ ಮುಜರಾಯಿ ಇಲಾಖೆ ಸಹಾಯಧನ ನೀಡಲು ಮುಂದಾಗಬೇಕು, ಈಗಾಗಲೇ ಮೈಸೂರು ಬ್ರಾಹ್ಮಣ ಸಂಘ ಅವಧೂತ ದತ್ತಪೀಠ ಗಣಪತಿ ಆಶ್ರಮ, ಟಿವಿಎಸ್ ಕಂಪನಿ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕು ಮಟ್ಟದಲ್ಲಿ 6ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಾಗ್ರಿ ಮೆಡಿಕಲ್ ಕಿಟ್ ನೀಡಲಾಗಿದೆ, ಅಡುಗೆಯವರು ಅಸಂಘಟಿತ ವಲಯಕ್ಕೆ ಬರುತ್ತಾರೆ ತರಕಾರಿ ಹೆಚ್ಚುವದರಿಂದ ಅಡುಗೆ ತಯಾರಿಸಿ ಊಟ ಬಡಿಸುವವರೆಗೂ ಬಾಣಸಿಗರು 5ಸಾವಿರಕ್ಕೂ ಹೆಚ್ಚು ಮಂದಿ ಅವಲಂಭಿತರಾಗಿದ್ದಾರೆ, ಆದರಿಂದ ಕಾರ್ಮಿಕ ಇಲಾಖೆ ಅಡುಗೆಯವರಿಗೆ ಮತ್ತು ಮುಜರಾಯಿ ಇಲಾಖೆಯಿಂದ ಸಣ್ಣಪುಟ್ಟ ಶುಭ ಅಶುಭ ಕೆಲಸಗಳಲ್ಲಿ ತೊಡಗುವ ಅರ್ಚಕರಿಗೆ ಗುರುತಿಸಿ ಸಹಾಯಧನ ನೀಡಲು ಸೇವಾಸಿಂಧೂ ಮೂಲಕ ನೊಂದಣಿಯಗಲೂ ಅವಕಾಶ ಕಲ್ಪಿಸುವಂತೆ ಯೋಜನೆ ರೂಪಿಸಬೇಕು ಎಂದರು,
ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್, ಗ್ರಾಮಾಂತರ ಅಧ್ಯಕ್ಷರಾದ ಎಸ್ . ಆರ್ ಗೋಪಾಲ ರಾವ್, ವಿನಯ್ ಬಾಬು, ಬೋಸ್ಲೆ, ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ಸುಚೀಂದ್ರ ಇನ್ನಿತರರು ಇದ್ದರು