ಹಿರಿಯ ವಕೀಲ, ಬಿಜೆಪಿ ಮುಖಂಡ ಎಂ.ನಂಜುಂಡಸ್ವಾಮಿ, ನಿಧನ

Share

ನಿಧನ
ಹಿರಿಯ ವಕೀಲ, ಬಿಜೆಪಿ ಮುಖಂಡ ಎಂ.ನಂಜುಂಡಸ್ವಾಮಿ
ಮೈಸೂರು, ಸೆ.೧೪-ಮೈಸೂರು ತಾಲೂಕು ವಾಜಮಂಗಲ ನಿವಾಸಿ, ಹಿರಿಯ ವಕೀಲ ಎಂ. ನಂಜುಂಡಸ್ವಾಮಿ(೬೧) ಸೋಮವಾರ ರಾತ್ರಿ ನಿಧನರಾದರು.
ಮೃತರು, ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಬಂದು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ(ಸೆ.೧೫) ಮಧ್ಯಾಹ್ನ ಸ್ವ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರು ಹಲವು ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಗೂ ವೀರ ವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು


Share