ಹುಲಿಗಳನ್ನು ರಕ್ಷಿಸಲು ಕಾಡು ಉಳಿಸಿ

 

*ಹುಲಿಗಳನ್ನು ರಕ್ಷಿಸಲು ಕಾಡು ಉಳಿಸಿ ಎಂದ ಶ್ರೀ ಚಾಮರಾಜೇಂದ್ರ ಮೃಗಾಲಯದ ಶಿಕ್ಷಣ ಅಧಿಕಾರಿ ಸುಜೋಷ ಎಂ ಎಸ್*

ಮೈಸೂರು :ಕಾಡು ಉಳಿಸಿ ಇಡೀ ದೇಶದಲ್ಲಿ ಹುಲಿಗಳು ವಾಸವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಹುಲಿ ಸಂತತಿಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಶಿಕ್ಷಣ ಅಧಿಕಾರಿ ಸುಜೋಷ ಎಂ ಎಸ್ ಹೇಳಿದರು

ಸರಸ್ವತಿಪುರಂನಲ್ಲಿರುವ ಬಿಟಿಎಲ್ ಕಾಲೇಜ್ ಆವರಣದಲ್ಲಿ ಡಿಟಿಎಲ್ ಟ್ರಸ್ಟ್ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಡಿಪಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು ಮತ್ತು ಬಿಪಿಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ಅಂತರರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ನಡೆದ ಉಳಿ ಸಂರಕ್ಷಣ ಹಾಗೂ ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನಂತೆ ಪ್ರಾಣಿಗಳಲ್ಲಿ ಸಹ ಜೀವನಶೈಲಿಯ ಒಂದು ಕೌತುಕ ಸಾಮಾನ್ಯ ಕಾಡು ವಾಸ ಮಾಡುವ ಮೃಗಗಳು ಹುಲಿ ಸಿಂಹ ಅವುಗಳ ಜೀವನಶೈಲಿ ಹೇಗೆ ಎಂಬುದರ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು.ವಿದ್ಯಾರ್ಥಿಗಳಿಗೆ ಹುಲಿಗಳ ಜೀವನಶೈಲಿಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಇನ್ನು ಕಾಡಿನಲ್ಲಿ ಮತ್ತು ನಾಡಿನಲ್ಲಿ ಹುಲಿಗಳನ್ನ ಪತ್ತೆಹಚ್ಚವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ತಿಳಿಸಲಾಯಿತು.ಪ್ರಮುಖವಾಗಿ ಹುಲಿಗಳನ್ನು ಪತ್ತೆ ಹಚ್ಚಲು ಹೆಜ್ಜೆ ಗುರುತು ಲದ್ದಿ ಕ್ಯಾಮೆರಾ ಟ್ರಾಫಿಂಗ್ ಮೂಲಕ ಹುಲಿಗಳನ್ನು ಪತ್ತೆ ಹಚ್ಚುವಲಾಗುವುದು ಎಂದು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು

ಇದೇ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾಕ್ಟರ್ ಬಿ ವಿ ಪ್ರಶಾಂತ್, ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ
ಬ್ರಮರಾಂಭ ಎಸ್, ಮುಖ್ಯಸ್ಥರಾದ ಪ್ರೀತಿ , ಹಾಗೂ ಯುವ ರೆಡ್ ಕ್ರಾಸ್ ಘಟಕದ ಗಿರೀಶ್ ಹಾಗೂ ಇನ್ನಿತರರು ಹಾಜರಿದ್ದರು