ಹೂಗಳನ್ನು ಮರು ಎರೆಚುತ್ತಿದ್ದ ದೃಶ್ಯ ಅಮೋಘಗ

Share

ಇಂದು ಮೈಸೂರು ಬೆಂಗಳೂರು ನಡುವಣ ದಶಪಥ ರಸ್ತೆ ಅನಾವರಣಗೊಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಮೋದಿಯವರು ಮಂಡ್ಯಕ್ಕೆ ಆಗಮಿಸಿದ್ದೇನೋ ಸರಿ. ಆದರೆ ಮೋದಿ ಅವರ ರೋಡ್ ಶೋ ವೇಳೆ ಅವರ ವಾಹನದತ್ತ ಹೂಳೆಯನ್ನೇ ಸುರಿಸಲಾಗುತ್ತಿತ್ತು, ಸಂಪೂರ್ಣ ಕಾರು ಹಾಗೂ ರಸ್ತೆ ಹಳದಿಮಯವಾಗಿತ್ತು. ಹೂಗಳಿಂದ ಜನರು ಮೋದಿ ಎತ್ತ ಎಸೆಯುತ್ತಿದ್ದರೆ ಇದರಿಂದ ಉತ್ತೇಜಿತಗೊಂಡ ಮೋದಿಯವರು ಕಾರಿನ ಬಾಗಿಲು ಹಿಡಿದು ಎದ್ದು ನಿಂತು ಪ್ರಜೆಗಳತ್ತ ತಾವು ಕೂಡ ಕಾರಿನ ಮೇಲೆ ಬಿದ್ದ ಹೂಗಳನ್ನು ಮರು ಎರೆಚುತ್ತಿದ್ದ ದೃಶ್ಯ ಅಮೋಘವಾಗಿತ್ತು. ಇಷ್ಟಪಡುವರಿಗೆ ಇದು ಅತ್ಯಂತ ಸಂತಸದ ಕ್ಷಣಗಳಾಗಿತ್ತು. ಆದರೆ ಪ್ರಧಾನಿಗಳಂತಹ ಒಬ್ಬ ಪ್ರಮುಖ ದೇಶದ ನಾಯಕರಿಗೆ ಇದು ಅಪಾ ಯಕ್ಕೆ ಆಹ್ವಾನ ನೀಡುವಂತಹ ವಿಷಯವಾಗಿತ್ತು.
ಕಳೆದ ಹಲವು ತಿಂಗಳ ಹಿಂದೆ ಇಂಗ್ಲೆಂಡಿನ ದೊರೆ ಚಾರ್ಲ್ಸ್ ರವರು ಕಾರಿನಿಂದ ಇಳಿದು ನಡೆದು ಹೋಗುತ್ತಿದ್ದಾಗ ಎಷ್ಟೇ ಬೇಹುಗಾರಿಕೆ ಇದ್ದರೂ ಅವರತ್ತ ಮೊಟ್ಟೆಗಳನ್ನು ಎಸೆಯಲಾಯಿತು ಆದರೆ ಇಂದು ಮೋದಿ ಅವರ ರೋಡ್ ಶೋ ವೇಳೆ ಹೂ ಮಳೆಯನ್ನು ಪರಸ್ಪರ ಎರಚಾಡುತ್ತಿದ್ದದು ಅಪಾಯಕಾರಿ ಸನ್ನಿವೇಶದಂತೆ ಕಂಡುಬರುತ್ತಿತ್ತು ಪೊಲೀಸರಿಗೂ ಎಸ್ಜಿಪಿ ಅವರಿಗೂ ಬಹಳ ತ್ರಾಸದ ಕೆಲಸವಾಗಿತ್ತು ಯಾವುದಾದರೂ ಒಬ್ಬ ಕಿಡಿಗೇಡಿ ಯಾವುದಾದರೂ ಒಂದು ರೀತಿಯಲ್ಲಿ ಅನಾಹುತಕ್ಕೆ ಎಡೆ ಮಾಡಿದ್ದರೆ ಇದಕ್ಕೆ ಹೊಣೆ ಯಾರು ಹೊರುತ್ತಿದ್ದರು ? ಇಂತಹ ರೋಡ್ ಶೋ ಬೇಕಿತ್ತೆ ,? ಭದ್ರತಾ ದೃಷ್ಟಿಯಿಂದ ಇಂತಹ ಶೋಗಳ ಗಳನ್ನು ಮಾಡುವ ಮುನ್ನೇ ಅಧಿಕಾರಿಗಳು ಒಮ್ಮೆ ಯೋಚಿಸುವುದು ಸರಿ ಎಂದು ರಸ್ತೆಯ ಇಕ್ಕಡೆಗಳಲ್ಲಿ ತುಂಬಿದ್ದ ಜನಸಾಗರದ ಅಭಿ ಮತವಾಗಿತ್ತು.


Share