ಹೆಚ್ ಡಿ ಕೆ V/S ರೇವಣ್ಣ: ಕವಲು ದಾರಿಯಲ್ಲಿ ಗೌಡರ ಕುಟುಂಬ

Share

ದೇವೇಗೌಡರಿಗೆ ರೇವಣ್ಣ ಕುಟುಂಬವನ್ನು ಮನವೊಯಿಸಲು ಆಗುತ್ತಿಲ್ಲ ,ಹಾಸನದಲ್ಲಿ ಶಕುನಿಗಳ ಮಾತು ಕೇಳಿಕೊಂಡು ರೇವಣ್ಣ ಮತ್ತು ಭವಾನಿ ರೇವಣ್ಣ ಮುಂಬರುವ ಚುನಾವಣೆಯ ಸೀಟಿಗಾಗಿ ಹಠ ಹಿಡಿದು ಕುಳಿತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ .ಈಗಾಗಲೇ ಕಾರ್ಯಕರ್ತರಿಗೆ ಅಲ್ಲಿ ಸ್ಥಾನ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದ್ದೇನೆ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಕುಟುಂಬದೊಳಗಿನ ಒಳ ಜಗಳವನ್ನ ಸಾರ್ವಜನಿಕವಾಗಿ ತೆರೆದಿಟ್ಟಿದ್ದಾರೆ. ಸಾರ್ವಜನಿಕರ ಕಾರ್ಯಕರ್ತರ ಅಭಿಪ್ರಾಯದಿಂದ ಭವಾನಿ ರೇವಣ್ಣ ಟಿಕೆಟ್ ಗಿಟ್ಟಿಸಿಕೊಂಡರೆ ಅವರು ಸೋಲುವುದು ಗ್ಯಾರಂಟಿ. ಆದುದರಿಂದ ಕಾರ್ಯಕರ್ತರಿಗಷ್ಟೇ ಸೀಟು ಕೊಡಬೇಕೆಂದು ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ, ಅವರು ಪ್ರಶ್ನೆ ಒಂದಕ್ಕೆ ಉತ್ತರಿಸುತ್ತಾ ಕುರುಕ್ಷೇತ್ರವು ಅಂದು ಇತ್ತು , ಇಂದೂ ಇದೆ. ಅಂತೆಯೇ ನಮ್ಮ ಕುಟುಂಬದಲ್ಲೂ ಇದೆ. ಇದಕ್ಕೇನು ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ತಮ್ಮ ಮನೆಯೊಳಗಿನ ಜಗಳವನ್ನು ಕುಮಾರಸ್ವಾಮಿ ಜರ್ಜರಿತಗೊಳಿಸಿದ್ದಾರೆ. ಈ ಮಧ್ಯೆ ರೇವಣ್ಣ ರವರು ಭವಾನಿ ರೇವಣ್ಣ ರವರಿಗೆ ಟಿಕೆಟ್ ಕೊಡುವುದಿಲ್ಲ ಎಂಬುದೇ ಆದರೆ ತಮಗೆ ಹಾಸನ ಮತ್ತು ಹೊಳೆನರಸೀಪುರ ಎರಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟು, ತಾವು ಎರಡು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ರೇವಣ್ಣ ಪಟ್ಟು ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಎರಡರಲ್ಲೂ ಗೆದ್ದರೆ ಒಂದನ್ನು ಉಳಿಸಿಕೊಂಡು ಮತ್ತೊಂದನ್ನು ತಮ್ಮದೇ ಕುಟುಂಬಕ್ಕೆ ಮೀಸಲಿಟ್ಟು ಕೊಳ್ಳಬೇಕೆಂಬುದು ರೇವಣ್ಣರ ಹುನ್ನಾರ, ಹೆಚ್ ಡಿ ಕುಮಾರಸ್ವಾಮಿ ಅವರು ಈ ಹಿಂದೆ ರಾಮನಗರದಲ್ಲಿ ನಡೆದುಕೊಂಡ ರೀತಿಯಲ್ಲೇ ರೇವಣ್ಣ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದನ್ನು ಮರುಕಳಿಸಲು ಕುಮಾರಸ್ವಾಮಿ ಅಡ್ಡವಾಗಿದ್ದಾರೆ.
ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವು ಚಿತ್ರಗೊಳ್ಳುವ ಲಕ್ಷಣಗಳು ಕಂಡು ಬರುತ್ತಿದೆ ಎಂದು ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.


Share