ಹೊರರಾಜ್ಯದಿಂದ ಬರುವವರಿಗೆ ಹೊಸ ನಿಯಮಾವಳಿ ಪ್ರಕಟ

Share

ಹೊರ ರಾಜ್ಯದಿಂದ ಬರುವವರಿಗೆ ಹೊಸ ಕ್ವಾರಂಟೈನ್ ನಿಯಮಾವಳಿ –ರಾಜ್ಯ ಸರ್ಕಾರವು ಇಂದು ಹೊಸ ಸುತ್ತೋಲೆಯೊಂದನ್ನು ಹೊರಡಿಸಿದ್ದು ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ನಿಯಮಾವಳಿಯನ್ನು ಜಾರಿಗೆ ತಂದಿದೆ.ಮಹಾರಾಷ್ಟ್ರದಿಂದ ಬರುವವರಿಗೆ ಏಳು ದಿನಗಳು ನಿಗದಿತ ಕ್ವಾರಂಟೈನ್ ಹೌಸ್ ಮತ್ತೆ ಇನ್ನು ಏಳು ದಿನ ಅವರ ವಾಸದ ಗೃಹದಲ್ಲಿ ಕ್ವಾರಂಟೈನ್ ಆಗಲೇಬೇಕು. ದೆಹಲಿ ಮತ್ತು ತಮಿಳುನಾಡು ಕಡೆಯಿಂದ ಬರುವವರಿಗೆ ಇದೇ ರೀತಿ 3+11 ,ಮಹಾರಾಷ್ಟ್ರ ದೆಹಲಿ ಮತ್ತು ತಮಿಳುನಾಡು ಹೊರತುಪಡಿಸಿದಂತೆ ಅನ್ಯ ರಾಜ್ಯಗಳಿಂದ ಬರುವವರಿಗೆ 14 ದಿನಗಳ ಹೋಂ ಕ್ವಾರಂಟೈನ್ ಆಗಲೇ ಬೇಕೆಂದು ತಿಳಿಸಿದೆ .ಹೊರರಾಜ್ಯದಿಂದ ಬಂದವರು ಸೇರಿದಂತೆ ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರ್ಕಾರದ ಇಲಾಖೆಗಳು , ಸಂಘ ಸಂಸ್ಥೆಗಳು “ಆರೋಗ್ಯ ಸೇತು ಆ್ಯಪ್” ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲೇ ಬೇಕು ಇಲ್ಲದಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ .


Share