ಬೆಂಗಳೂರು ರಾಜ್ಯದಲ್ಲಿ ಪೂರ್ಣಪ್ರಮಾಣದಲ್ಲಿ ಹೋಟೆಲ್ಗಳನ್ನು ಷರತ್ತು ಬದ್ಧವಾಗಿ ತೆಗೆಯುವ ಬಗ್ಗೆ ಮುಖ್ಯಮಂತ್ರಿಗಳು ತಮ್ಮನ್ನು ಭೇಟಿಯಾದ ಹೋಟೆಲ್ ಮಾಲೀಕರು ಹಾಗೂ ಬ್ರಾಹ್ಮಣ ಸಂಘದ ಅಧ್ಯಕ್ಷರಿಗೆ ಭರವಸೆಯನ್ನು ನೀಡಿದ್ದಾರೆ
ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಬಿ.ಚಂದ್ರಶೇಖರ ಹೆಬ್ಬಾರ್, ನಿಸರ್ಗ ಹೋಟೆಲ್ ಮಾಲೀಕರಾದ ಶ್ರೀ ಕೃಷ್ಣರಾಜು, ಹೋಟೆಲ್ ವಿಧ್ಯಾರ್ಥಿ ಭವನದ ಮಾಲೀಕರಾದ ಶ್ರೀ ಅರುಣ್ ಅಡಿಗಾ ಮತ್ತು ಶ್ರೀ ಮಧುಕರ್ ಶೆಟ್ಟಿ ರವರೊಂದಿಗೆ ಗೃಹ ಕಛೇರಿ “ಕೃಷ್ಣ” ದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ನವರನ್ನು ಮತ್ತು ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ ರವರನ್ನೂ ಬೇಟಿಯಾಗಿ ಸಂಕಷ್ಟದಲ್ಲಿರುವ ಹೋಟೆಲ್ ಉದ್ಯಮದ ಬಗ್ಗೆ, ನಿರ್ಗತಿಕರಾಗಿರುವ ಹೋಟೆಲ್ ಕಾರ್ಮಿಕ ವರ್ಗದ ಬಗ್ಗೆ ಹಾಗೂ ದಿನನಿತ್ಯ ಬದುಕಿಗೆ ತಿಂಡಿ, ಊಟಕ್ಕೆ ಹೋಟೆಲನ್ನೇ ಅವಲಂಬಿಸಿದ್ದ ಲಕ್ಷಾಂತರ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಸವಿಸ್ತಾರವಾಗಿ ವಿವರಿಸಿದಾಗ ಮುಖ್ಯಮಂತ್ರಿಗಳು ಇದೇ ತಿಂಗಳ 31ರೊಳಗೆ ಷರತ್ತು ಬದ್ದವಾಗಿ ಹೋಟೆಲ್ ತೆರೆಯುವ ಬಗ್ಗೆ ಬರವಸೆ ನೀಡಿದರು.
ಅಧ್ಯಕ್ಷರು
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
ಕರ್ನಾಟಕ ಸರ್ಕಾರ
ಬೆಂಗಳೂರು. ಸಚ್ಚಿದಾನಂದ ಮೂರ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ