ಗೃಹರಕ್ಷಕರಿಗೆ ಹೋಮಿಯೋಪಥಿ ಔಷಧಿ ವಿತರಣೆ(ಚಿತ್ರಇದೆ)
ಮಂಗಳೂರು ಮೇ 04(ಕರ್ನಾಟಕ ವಾರ್ತೆ):-ಕೋವಿಡ್-19 ಹಿನ್ನೆಲೆಯಲ್ಲಿ ಭಾರತೀಯ ಹೋಮಿಯೋಪತಿ ಅಸೋಸಿಯೇಷನ್ ವತಿಯಿಂದ ದಕ್ಷಿಣಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಉಚಿತವಾಗಿ ಹೋಮಿಯೋಪತಿ ಔಷಧಿಗಳನ್ನು ಗೃಹರಕ್ಷಕರಿಗೆ ವಿತರಣೆ ಮಾಡಲಾಯಿತು. ಔಷಧಿ ವಿತರಣೆ ಮಾಡಿದಶಾಸಕ ವೇದವ್ಯಾಸಕಾಮತ್ ಮಾತನಾಡುತ್ತಾ ಸಮಾಜವನ್ನು ಮುಂದೆ ನಿಂತು ರಕ್ಷಿಸುವ ಗೃಹರಕ್ಷಕರ ಜವಾಬ್ದಾರಿ ಸಮಾಜಕ್ಕಿದೆ.ಗೃಹರಕ್ಷಕರ ಬೆನ್ನ ಹಿಂದೆ ಸಮಾಜಯಾವಾಗಲೂ ಗಟ್ಟಿಯಾಗಿ ನಿಲ್ಲಬೇಕು ,ಅವರಿಗೆ ಕೋವಿಡ್-19 ಎದುರಿಸಲು ನೈತಿಕವಾದಧೈರ್ಯ ನೀಡಬೇಕು ಎಂದುಕರೆ ನೀಡಿದರು.
ಮೇಯರ್ ದಿವಾಕರ್, ಜಿಲ್ಲಾ ಸಮಾದೇಷ್ಟಡಾ: ಮುರಲೀ ಮೋಹನ್‍ಚೂಂತಾರು, ಐಎಚ್‍ಎಂಎಅಧ್ಯಕ್ಷಡಾ: ಪ್ರವೀಣ್‍ಕುಮಾರ್, ಕಾರ್ಯದರ್ಶಿ ಡಾ: ಅವಿನಾಶ್.ವಿ.ಎಸ್, ಆಳ್ವಾಸ್ ಹೋಮಿಯೋಪಥಿಕ್‍ಕಾಲೇಜಿನಪ್ರಾಂಶುಪಾಲ ಡಾ: ಪ್ರವೀಣ್‍ರಾಜ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. 200 ಮಂದಿ ಗೃಹರಕ್ಷಕರಿಗೆ ಔಷಧಿಗಳನ್ನು ವಿತರಿಸಲಾಯಿತು.