ಮೈಸೂರು ವಿವಿ:ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

269
Share

 

ಮೈಸೂರು ಇತ್ತೀಚಿಗೆ ಮೈಸೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ 2022-23 ಜನಪ್ರಿಯ ಹಿನ್ನೆಲೆ ಗಾಯಕಿ-ನಟಿ ಡಾ. ಪ್ರಿಯದರ್ಶಿನಿ ಅವರ ಉದ್ಘಾಟನೆಯೊಂದಿಗೆ ವರ್ಣರಂಜಿತ ಆರಂಭಕ್ಕೆ ತೆರೆದುಕೊಂಡಿತು. ವಿಶ್ವವಿದ್ಯಾನಿಲಯದ ಕುಲಸಚಿವರಾದ ವಿ.ಆರ್.ಶೈಲಜಾ, ಮುಖ್ಯ ಅತಿಥಿ ನಟ ಧರ್ಮ ಕೀರ್ತಿರಾಜ್, ಗೌರವ ಅತಿಥಿಗಳಾದ  ಸಂಗೀತ ನಿರ್ದೇಶಕ ಮಹೇಶ್ ಮಹದೇವ್, ನಟ ಮಂಜು ಮಿಲನ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಪ್ರೊ.ಬಿ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರೊ.ಬಿ.ಎಸ್.ಚಂದ್ರಶೇಖರ್ ನೆರೆದಿದ್ದ ಸಭಿಕರನ್ನು ಸ್ವಾಗತಿಸಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಹಂಚಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ಡಾ.ಪ್ರಿಯದರ್ಶಿನಿ , ‘ಸ್ಪರ್ಧೆಗಳು ಕಲಿಕಾ ಪ್ರಕ್ರಿಯೆಯ ಭಾಗ. ಇದು ಗೆಲ್ಲುವುದು ಮತ್ತು ಸೋಲುವುದು ಅಲ್ಲ, ಆದರೆ ಅವರು ಅನುಭವವನ್ನು ಪಡೆಯಲು ಸಹಾಯ ಮಾಡುತ್ತದೆ . ಜ್ಞಾನವೇ ಪರಮ ಸಂಪತ್ತಾಗಿದ್ದು, ಶೈಕ್ಷಣಿಕವಾಗಿ ಮೀರಿದ ಪ್ರತಿಭೆಯನ್ನು ಅನ್ವೇಷಿಸಲು ಪಠ್ಯೇತರ ಚಟುವಟಿಕೆಗಳು ಮುಖ್ಯ ಎಂದು ಹೇಳಿದರು. ಅವರು ಕಳೆದ ವರ್ಷ ಇದೇ ವಿಶ್ವವಿದ್ಯಾನಿಲಯದಿಂದ ಸಿನಿಮಾ ಸಂಗೀತಕ್ಕೆ ಪಿಹೆಚ್ ಡಿ ಡಾಕ್ಟರೇಟ್ ಪಡೆಡಿದ್ದು  ಈ ವರ್ಷ ಮುಖ್ಯ ಅತಿಥಿಯಾಗಿ ಸಮಾರಂಭವನ್ನು ಉದ್ಘಾಟಿಸಲು ಬಂದಿರುವುದು ನನಗೆ ಅತ್ಯಂತ ಸಂತೋಷ ತಂದಿದೆ ಎಂದರು.

ನಟ ಧರ್ಮ ಕೀರ್ತಿರಾಜ್ ಮಾತನಾಡಿ  ಮೈಸೂರಿನಲ್ಲಿ ತಮ್ಮ ಮೊದಲ ಚಿತ್ರದ ಚಿತ್ರೀಕರಣದ ನೆನಪುಗಳನ್ನು ಮೆಲುಕು ಹಾಕಿದರು ಮತ್ತು ವಿದ್ಯಾರ್ಥಿಗಳು ತಮ್ಮ ಗುರಿಗಳತ್ತ ಗಮನ ಹರಿಸುವಂತೆ ಪ್ರೇರೇಪಿಸಿದರು.

ಮೊದಲಿಗೆ ಡಾ.ಪ್ರಿಯದರ್ಶಿನಿ ವಿಷುವರ್ಧನ್ ಅಭಿನಯದ  ಚಿತ್ರಗೀತೆ ‘ಕಣಕಣದೆ ಶಾರದೆ’ ಹಾಡಿದರು. ಇತ್ತೀಚೆಗೆ ಇದೇ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ನಟ ದಿ. ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು. ‘ಬೊಂಬೆ ಹೇಳುತೈತೆ’ ಹಾಡನ್ನು ಸಂಗೀತ ನಿರ್ದೇಶಕ ಮಹೇಶ್ ಮಹದೇವ್,  ಪ್ರಿಯದರ್ಶಿನಿ ಮತ್ತು ನಟ ಧರ್ಮ ಕೀರ್ತಿರಾಜ್ ಪ್ರಸ್ತುತಪಡಿಸುತ್ತಿದ್ದಂತೆ ಪ್ರೇಕ್ಷಕರು ತಮ್ಮ ಮೊಬೈಲ್ ಟಾರ್ಚ್‌ಲೈಟ್‌ನಿಂದ ಸಭಾಂಗಣವನ್ನು ಬೆಳಗಿಸಿದರು. ನಂತರ ಮುಂಬರುವ ಚಲನಚಿತ್ರ ರಿದಮ್‌ ನಿಂದ ‘ನೀನೇ ನನ್ನಲು’ ಹಾಡನ್ನು ಮಹೇಶ್ ಮಹದೇವ್ ಹಾಗೂ ಪ್ರಿಯದರ್ಶಿನಿ ಪ್ರಸ್ತುತಪಡಿಸಿದರು, ಪ್ರೇಕ್ಷಕರ ಒತ್ತಾಯದ ಮೇರೆಗೆ ನವಗ್ರಹ ಚಿತ್ರದ  ‘ಕಣ್ಣ್ ಕಣ್ಣ ಸಲಿಗೆ ’ಹಾಡನ್ನು ನಟ ಧರ್ಮ ಕೀರ್ತಿರಾಜ್ ಮತ್ತು ಪ್ರಿಯದರ್ಶಿನಿ ಹಾಡಿ ನೆರೆದಿದ್ದವರನ್ನು ರಂಜಿಸಿದರು .

ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯವು ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು  ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಶಾಸ್ತ್ರೀಯ ಸಂಗೀತ, ಚಲನಚಿತ್ರ ನಿರ್ಮಾಣ, ಜಾನಪದ ನೃತ್ಯ, ರಸಪ್ರಶ್ನೆ, ಪಾಶ್ಚಾತ್ಯ ಸಂಗೀತ, ಸಮೂಹ ಗಾಯನ, ಜಾನಪದ ಗೀತೆ, ಲಘು ಸಂಗೀತ ವಿಭಾಗಗಳ ಸ್ಪರ್ಧೆಗಳು ಮುಂದಿನ ಮೂರು ದಿನಗಳ ಕಾಲ ನಡೆಯಿತು.

 

Share