ರೈಲ್ವೆ ಸರಕು ಸಾಗಣೆ-ರೂ.877 ಕೋಟಿ ಆದಾಯ

120
Share

 

ನೈಋತ್ಯ ರೈಲ್ವೆ
ಮೈಸೂರು – ವಿಭಾಗಭಾರತೀಯ ರೈಲ್ವೆಯ ‘ಹಂಗ್ರಿ ಫಾರ್ ಕಾರ್ಗೋ’ ಉಪಕ್ರಮದ ಕರೆಗೆ ಓಗೊಟ್ಟ ಮೈಸೂರು ವಿಭಾಗವು ಇತಿಹಾಸವನ್ನು ಪುನಃ ಪುನಃ ಬರೆದಿದೆ. ಆರ್ಥಿಕ ವರ್ಷ 2023 ರಲ್ಲಿ (ಮಾರ್ಚ್ 28, 2023 ರವರೆಗೆ) ವಿಭಾಗದಿಂದ ಸಾಗಾಣೆಯಾಗುವ ಸರಕ್ಕಿನ ಆಧಾರದ ಮೇಲೆ ಸರಕು ಸಾಗಣೆಯು 9.378 ಮಿಲಿಯನ್ ಟನ್‌ಗಳಷ್ಟಿದೆ.

ವಿಭಾಗವು ಸರಕು ಸಾಗಣೆಯಲ್ಲಿ 2023ರ 27ನೆಯ ಮಾರ್ಚ್ ತನಕ ರೂ.877 ಕೋಟಿಗಳಷ್ಟು ಅದಾಯ ಗಳಿಸಿದ್ದೂ, ಇದು ಇಲ್ಲಿಯವರೆಗೆ ವಿಭಾಗದಲ್ಲಿ ದಾಖಲಾದ ಅತ್ಯಧಿಕ ಸರಕು ಸಾಗಣೆ ಆದಾಯವಾಗಿದೆ. ಇದು 2021-22ರಲ್ಲಿ ಒಟ್ಟು ಸರಕು ಸಾಗಣೆ ಆದಾಯಕ್ಕಿಂತ ಶೇ. 27.43 ರಷ್ಟು ಮತ್ತು ಪ್ರಸಕ್ತ ಹಣಕಾಸು ವರ್ಷಕ್ಕೆ ನೈಋತ್ಯ ರೈಲ್ವೆ ಪ್ರಧಾನ ಕಾರ್ಯಾಲಯ ನಿಗದಿಪಡಿಸಿದ ಗುರಿಗಿಂತ ಶೇ. 18.52% ಹೆಚ್ಚಾಗಿದೆ. ಪ್ರಸಕ್ತ ವರ್ಷದ ಸಂಪೂರ್ಣ ಗುರಿಯಾದ 739.99 ಕೋಟಿ ರೂಪಾಯಿಗಳನ್ನು ವಿಭಾಗವು 329 ದಿನಗಳಲ್ಲಿಯೇ ಮೀರಿದೆ.

ಆರ್ಥಿಕ ವರ್ಷ 21- 22 ರ ಸಾಗಾಣೆಗೆ ಹೋಲಿಸಿದಂತೆ ಸರಕು ಸಾಗಣೆ ಆದಾಯವು ಪ್ರಸ್ತುತ ಹಣಕಾಸು ವರ್ಷದಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದ್ದು, ವಲಯದ ಪ್ರಧಾನ ಕಾರ್ಯಾಲಯ ನಿಗದಿಪಡಿಸಿದ ಗುರಿಯನ್ನು ಮೀರಿದೆ. ಆರ್ಥಿಕ ವರ್ಷ 22-23 ಕ್ಕೆ ವಿಭಾಗಕ್ಕೆ ನಿಗದಿಪಡಿಸಿದ ಗುರಿಯನ್ನು ಕೇವಲ 329 ದಿನಗಳಲ್ಲಿಯೇ ಸಾಧಿಸಲಾಗಿದ್ದೂ, ಹೊಸ ಮೈಲಿಗಲ್ಲಿನ ಆರಂಭಕ್ಕೆ ನಾಂದಿ ಹಾಡಿದೆ.

ಪ್ರಾಸಂಗಿಕವಾಗಿ ಹೇಳಬೇಕಾದರೆ, 9.230 ಮಿಲಿಯನ್ ಟನ್‌ಗಳಷ್ಟು ಇದ್ದ ಗುರಿಯನ್ನು ಮೀರಿಸಿ 9.378 ಮಿಲಿಯನ್ ಟನ್‌ಗಳಷ್ಟು ಸರಕ್ಕನು ಸಾಗಿಸಲಾಗಿದ್ದೂ, ಇದು ಮೈಸೂರು ವಿಭಾಗದಲ್ಲಿ ದಾಖಲಾದ ಅತ್ಯಧಿಕ ‘ಮೂಲದಿಂದ ಹೊರಟ’ ಸರಕು ಸಾಗಾಣೆಯಾಗಿದೆ.

ಸರಕು ಸಾಗಾಣೆ ವಿಭಾಗದಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮೂಲಗಳಿಂದ ವಿಭಾಗಕ್ಕೆ ಬರುವ ಹೊಸ ಸರಕುಗಳ ಸಾಗಾಟವನ್ನು ಸುಧಾರಿಸಲು ಗಮನ ಕೇಂದ್ರೀಕರಿಸಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಯಿಂದ ಬರುವ ಆದಾಯವು ಆರ್ಥಿಕ ವರ್ಷ 2022 ರಲ್ಲಿ ಸಾಧಿಸಲಾಗಿದ್ದ ರೂ.122 ಕೋಟಿಗಳಿಗೆ ಹೋಲಿಸಿದರೆ 51% – ಅಂದರೆ ರೂ.185 ಕೋಟಿಗಳಷ್ಟು ಹೆಚ್ಚಳವಾಗಿದ್ದೂ, ಇತರ ಸರಕ್ಕುಗಳಾದ ಆಹಾರ ಧಾನ್ಯಗಳು, ಸಕ್ಕರೆ, ಸಿಮೆಂಟ್ ಮತ್ತು ದ್ವಿಚಕ್ರ ವಾಹನಗಳು ಸಹ ಪ್ರಶಂಸನೀಯವಾಗಿ ಏರಿಕೆಯನ್ನು ಕಂಡಿವೆ.

ಗ್ರಾಹಕ-ಕೇಂದ್ರಿತ ವಿಧಾನಗಳ ಅಳವಡಿಕೆ, ವ್ಯಾಪಾರ ಅಭಿವೃದ್ಧಿ ಘಟಕಗಳ (BDUs) ಪರಿಶ್ರಮ, ಸಮರ್ಪಕ ನೀತಿ ಅಳವಡಿಕೆ, ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಸುಧಾರಿಸಲು ನಿರಂತರ ಪ್ರಯತ್ನಗಳು ಹಾಗು ಸ್ಪರ್ಧಾತ್ಮಕ ಬೆಲೆಗಳಲ್ಲಿ ವರ್ಧಿತ ಸೇವೆ ವಿತರಣೆ – ಇವೆಲ್ಲವೂ ಈ ಹೆಗ್ಗುರುತಿನ ಸಾಧನೆಗೆ ಕೊಡುಗೆ ನೀಡಿವೆ.

ಕಬ್ಬಿಣದ ಅದಿರಿನ ಸಾಗಣೆಯಿಂದ ಬಂದ ಆದಾಯವಾದ ಸರಿಸುಮಾರು 646.55 ಕೋಟಿಯು ಆರ್ಥಿಕ ವರ್ಷ 2022 ರಲ್ಲಿನ ಸಂಪೂರ್ಣ ಸರಕು ಸಾಗಣೆ ಆದಾಯಕ್ಕೆ ಸಮನಾಗಿದೆ. ಕರ್ನಾಟಕ ರಾಜ್ಯದ ಗಣಿಗಳಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಅನುಮತಿಸಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಅನುಮೋದನೆಯು, ಗೋವಾ ಮತ್ತು ಆಂಧ್ರಪ್ರದೇಶದ ಬಂದರುಗಳಿಗೆ ದೀರ್ಘ ಹಾದಿಯ ಸಂಚಾರವನ್ನು ಸುಗಮಗೊಳಿಸಿ, ಸರಕು ಸಾಗಣೆ ಆದಾಯವನ್ನು ಕ್ರೋಢೀಕರಿಸಲು ಅನುಕೂಲವಾಗುವಂತೆ ಮಾಡಿತು.

ಹಳಿ ದ್ವಿಗುಣಗೊಳಿಸುವಿಕೆ, ಮುಖ್ಯ ಮಾರ್ಗಗಳ ವಿದ್ಯುದೀಕರಣ, ಸರಕು ಸಾಗಣೆ ನಿರ್ವಹಣೆಯ ಟರ್ಮಿನಲ್‌ಗಳ ಉನ್ನತೀಕರಣ ಮತ್ತು ‘ರೌಂಡ್-ದಿ-ಕ್ಲಾಕ್ ಲೋಡಿಂಗ್‌’ನ ಸೌಲಭ್ಯದಂತಹ ನಿರ್ಣಯಗಳು ಮತ್ತು ಮೂಲಸೌಕರ್ಯ ಸಾಮರ್ಥ್ಯ-ನಿರ್ಮಾಣ ಯೋಜನೆಗಳ ತ್ವರಿತ ಕಾರ್ಯಗತಗೊಳಿಸುವಿಕೆ – ಮುಂತಾದ ಕಾರಣಗಳಿಂದಾಗಿ ವಿಭಾಗವು, ಸರಕು ಸಾಗಾಣೆಯ ಕಾರ್ಯಕ್ಷಮತೆಯನ್ನು ಮುಂಬರುವ ವರ್ಷಗಳಲ್ಲಿಯೂ ಮತ್ತಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ಹೊಂದಿದೆ. ರೈಲ್ವೆಯು ಸಾರಿಗೆ ಕ್ಷೇತ್ರದಲ್ಲಿನ ತನ್ನ ಪಾಲನ್ನು ಹೆಚ್ಚಿಸಲು ದೇಶಾದ್ಯಂತ ‘ಖನಿಜ ಜಿಲ್ಲೆ’ಗಳನ್ನು ಗುರುತ್ತಿಸುತ್ತಿರುವುದರಿಂದ ಮೈಸೂರು ವಿಭಾಗವು ಸದ್ಯದ ಭವಿಷ್ಯದಲ್ಲಿ ಸರಕು ಸಾಗಣೆಯ ವಿಭಾಗದಲ್ಲಿ ತನ್ನ ಪಾತ್ರವನ್ನು ದೊಡ್ಡದಾಗಿ ವಿಸ್ತ್ರರಿಸಿಕೊಳ್ಳುವ ಹೊಸ್ತಿಲಲ್ಲಿದೆ.

ಈ ಅದ್ಭುತ ದಾಖಲೆಯ ಸಾಧನೆಗೆ ಸಹಕರಿಸಿದ ಎಲ್ಲಾ ಇಲಾಖೆಗಳನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ಅಭಿನಂದಿಸಿದ್ದಾರೆ.

ದೇಶಕ್ಕೆ ಉತ್ತೇಜಕ ಆರ್ಥಿಕ ಬೆಳವಣಿಗೆಯ ದೃಷ್ಟಿಕೋನ ಮತ್ತು ಹೆಚ್ಚಿನ ಪ್ರಮಾಣದ ಸರಕು ಸಾಗಣೆ ಸೇವೆಗಳ ಬೇಡಿಕೆಯ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಹೊಸ ಹೊಸ ಎತ್ತರಗಳನ್ನು ಏರಲು ಪರಿಶ್ರಮ ಪಡುವಂತೆ ಎಲ್ಲಾ ರೈಲ್ವೆ ಸಿಬ್ಬಂದಿಗಳಿಗೆ ಅವರು ಕರೆ ನೀಡಿದ್ದಾರೆ

 

 


Share