ಬೆಂಗಳೂರು .15 ಜನ ಪೊಲೀಸರನ್ನು ಕ್ವಾರಂಟೈನ್ ಗೆ ಹಾಕಿರುವ ಘಟನೆ ಬೆಂಗಳೂರು ನಗರದಲ್ಲಿ ವರದಿಯಾಗಿದೆ .ಕಳ್ಳನನ್ನು ಹಿಡಿದು ವಿಚಾರಣೆಗೊಳಸಿದ್ದ ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿದೆ . ಕಳ್ಳ ಬೆಂಗಳೂರಿನ ಪಾದರಾಯನಪುರದ ನಿವಾಸಿ ಎಂದು ಹೇಳಲಾಗಿದ್ದು ಕಬ್ಬಿಣವನ್ನು ಕದಿಯುತ್ತಿದ್ದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಕೊಟ್ಟಿದ್ದರು ಎಂದು ಹೇಳಲಾಗಿದೆ .ಆರೋಪಿಯನ್ನು ನ್ಯಾಯಾಲಯಕ್ಕೆ ಕಳಿಸುವ ಮುನ್ನ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಕೊರೋನ ಸೋಂಕು ಇರುವುದು ಕಂಡು ಬಂದಿದೆ ಹೀಗಾಗಿ ಸದರಿ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಲಾಗಿದೆ .