ರೈತರಿಂದ ಮುಖ್ಯಮಂತ್ರಿ ಮನೆ ಮುಂದೆ ಚಳುವಳಿ

Share

ಮೈಸೂರು ,ಜಿಲ್ಲೆಯ ಉಸ್ತುವಾರಿ ಸಚಿವರಿಗೆ ನಾಳೆಯಿಂದ ಮಾಡುವ ಚಳುವಳಿಯನ್ನು ಆರಂಭಿಸಲಿದೆ ರೈತ ಸಂಘ ನಿರ್ಧರಿಸಿದೆ, ಎಂದು ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಕುರುಬೂರು ಶಾಂತಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ .ಅವರು ಇಂದು ಬೆಳಗ್ಗೆ ನಗರದ ಜನ ದರ್ಶಿನಿ’ಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ರೈತರಿಗೆ ಮಾರಕವಾಗಿರುವ ಖಾಸಗೀಕರಣ ಮಾಡುವ ತಿದ್ದುಪಡಿ ಕಾಯ್ದೆ’ಯನ್ನು ಪ್ರಬಲವಾಗಿ ವಿರೋಧಿಸಿ ವಿವಿಧ ಸಂಘ ಸಂಸ್ಥೆಗಳು ನಿರ್ಧರಿಸಿದ್ದು ಕರ್ನಾಟಕ ರಾಜ್ಯ ರೈತ ವಿರೋಧಿ ಹೋರಾಟ ಸಮಿತಿ ರಚಿಸಲಾಗಿದೆ ಎಂದರು. 24. 24ರಂದು ಶಾಸಕರ ಮನೆ ಅಥವಾ ಕಚೇರಿ ಮುಂದೆ ಪ್ರತಿಭಟನೆ ಹಾಗೂ 29ರಂದು ರೈತರ ಪ್ರತಿಭಟನೆ ಮೆರವಣಿಗೆ ಮಾಡುವುದರ ಮೂಲಕ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಬಾರ್ ಕೊಲು ಚಳುವಳಿ ಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ರೈತ ಮುಖಂಡರುಗಳು ಮುಖ್ಯಮಂತ್ರಿಗಳ ಮನೆ ಮುಂದೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.


Share