ಮೈಸೂರಿನಲ್ಲಿ ಕೊರೋನಾ ರಣಕೇಕೆ :36 ವರ್ಷದ ವ್ಯಕ್ತಿ ಬಲಿ!

Share

ಮೈಸೂರಿನಲ್ಲಿ ಕೋವಿಡ್‌ ಮೂರನೇ ಬಲಿ ಪಡೆದಿದೆ. ಕೊರೋನಾಗೆ ವಿಧಾನಸೌಧ ನೌಕರರೋರ್ವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

36 ವರ್ಷದ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದು, ಸಾರಿ ಕೇಸ್ ಮೂಲಕ ಕೋವಿಡ್ ಆಸ್ಪತ್ರೆಗೆ ವ್ಯಕ್ತಿ ದಾಖಲಾಗಿದ್ದರು.ರಾತ್ರಿ ಕೋವಿಡ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರು ವಿಧಾನಸೌಧದ ಆರ್‌ಡಿಪಿಆರ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಮೃತ ವ್ಯಕ್ತಿಯ ಟ್ರಾವಲ್ ಹಿಸ್ಟರಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಕೋವಿಡ್ ಮತ್ತಷ್ಟು ಗಂಭೀರ ಸ್ವರೂಪ ತಾಳಿದೆ. ಮೃತ ವ್ಯಕ್ತಿ ಮೈಸೂರು ಜಿಲ್ಲೆ ಕೆಆರ್.ನಗರ ತಾಲೂಕು ಕಂಚಿನ ಕೆರೆ ಗ್ರಾಮದ ನಿವಾಸಿಯಾಗಿದ್ದು, ಮೂರು ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ.


Share