4 ತಿಂಗಳ ಮಗುವಿಗೆ ಕೊರೋನಾ ಪಾಸಿಟಿವ್

4 ತಿಂಗಳ‌ ಮಗು ಸೇರಿ 25 ಜನರಿಗೆ ಕೊರೋನಾ ಪಾಸಿಟಿವ್

ಕಲಬುರಗಿ.ಜೂ.01 4 ತಿಂಗಳ ಮಗು ಸೇರಿ 25 ಜನರಿಗೆ ಕೊಲಾರ ಪಾಸಿಟಿವ್ 4 ತಿಂಗಳ ಮಗುವಿಗೆ ಕೊರನಾ ಪಾಸಿಟಿವ್: ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 4 ತಿಂಗಳ‌ ಗಂಡು‌ ಮಗು ಸೇರಿಸಿ ಜಿಲ್ಲೆಯ 25 ಜನರಿಗೆ ಸೋಮವಾರ ಕೊರೋನಾ ಸೋಂಕು‌ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.

ಇವರೆಲ್ಲರು ಸರ್ಕಾರಿ ಕ್ವಾರಂಟೈನ್ ದಲ್ಲಿದ್ದು, ಸೋಂಕು ಪತ್ತೆಯಾದ ಕೂಡಲೆ ಇವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದರು.

ಅಫಜಲಪುರ ತಾಲೂಕಿನ ರಾಮನಗರ ಗ್ರಾಮದ 4 ತಿಂಗಳ‌ ಗಂಡು‌ ಮಗು (P-3315) ಮತ್ತು ರೇವೂರ ಗ್ರಾಮದ 25 ವರ್ಷದ ಯುವಕ (P-3395) ಮತ್ತು ಚಿತ್ತಾಪುರ ತಾಲೂಕಿನ ಕಿಣ್ಣಿಸುಲ್ತಾನ ತಾಂಡಾದ 45 ವರ್ಷದ ಪುರುಷ (P-3373) ಮತ್ತು ಯಾಗಾಪುರ ತಾಂಡಾದ 16 ವರ್ಷದ ಯುವಕನಲ್ಲಿ (P-3384) ಕೋವಿಡ್-19 ಕಂಡುಬಂದಿದೆ.

ಆಳಂದ ತಾಲೂಕಿನ ಹಿರೋಳಿ ತಾಂಡಾದ 22 ವರ್ಷದ ಯುವತಿ (P-3374) ಮತ್ತು 3 ವರ್ಷದ ಹೆಣ್ಣು ಮಗು (P-3375), ನರೋಣಾ ಗ್ರಾಮದ 65 ವರ್ಷದ ವೃದ್ಧೆ (P-3382)‌ ಮತ್ತು 34 ವರ್ಷದ ಪುರುಷ (P-3383) ಕೊರೋನಾ‌ ಸೋಂಕಿಗೆ ತುತ್ತಾಗಿದ್ದಾರೆ.

ಕಾಳಗಿ‌ ಪಟ್ಟಣದ 35 ವರ್ಷದ ಯುವಕ (P-3385), ಕಾಳಗಿ ತಾಲೂಕಿನ ಮಾಳಗಿಯ 20 ವರ್ಷದ ಯುವಕ (P-3386), ಕಲ್ಲಹಿಪ್ಪರಗಾ ಗ್ರಾಮದ 32 ವರ್ಷದ ಯುವಕ (P-3387), ವಚ್ಚಾ ಗ್ರಾಮದ 30 ವರ್ಷದ ಯುವಕನಿಗೆ (P-3388) ಮಹಾಮಾರಿ‌ ಸೋಂಕು ಅಂಟಿಕೊಂಡಿದೆ.

ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ 26 ವರ್ಷದ ಯುವಕ (P-3389), 20 ವರ್ಷದ ಯುವಕ (P-3390), 20 ವರ್ಷದ ಯುವಕ (P-3391) ಹಾಗೂ ಮುಕರಂಬಾ ಗ್ರಾಮದ 19 ವರ್ಷದ ಯುವಕ (P-3392) ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ.

ಕಲಬುರಗಿ ನಗರದ ನ್ಯೂ ಬ್ಯಾಂಕ್ ಕಾಲೋನಿಯ 25 ವರ್ಷದ ಯುವಕ (P-3396), ಸೇಡಂ ಪಟ್ಟಣದ 54 ವರ್ಷದ ಪುರುಷ (P-3393) ಮತ್ತು 44 ವರ್ಷದ ಪುರುಷನಿಗೆ (P-3394) ಕೊರೋನಾ ವೈರಸ್ ಪತ್ತೆಯಾಗಿದೆ.

ಕಮಲಾಪುರ ತಾಲೂಕಿನ ವಿ.ಕೆ.ಸಲಗರ್ ಗ್ರಾಮದ 7 ವರ್ಷದ ಬಾಲಕ (P-3376), 8 ವರ್ಷದ ಬಾಲಕಿ (P-3377), 12 ವರ್ಷದ ಬಾಲಕಿ (P-3378), 15 ವರ್ಷದ ಬಾಲಕಿ (P-3379), 35 ವರ್ಷದ ಮಹಿಳೆ (P-3380) ಹಾಗೂ 45 ವರ್ಷದ ಪುರುಷನಿಗೆ (P-3381) ಮಹಾಮಾರಿ ಕೊರೋನಾ ಸೋಂಕು ದೃಢವಾಗಿದೆ.

ಇದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 305ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 128 ಜನ ಗುಣಮುಖರಾಗಿ ಈಗಾಗಲೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 170 ಸಕ್ರೀಯ ರೋಗಿಗಳಿದ್ದಾರೆ ಎಂದು ಶರತ್‌ ಬಿ. ವಿವರಿಸಿದರು.