ಚುನಾವಣೆ 2023 : ಅಕ್ರಮ ಅಬಕಾರಿ ಚಟುವಟಿಕೆ ನಿಯಂತ್ರಣ ಕೊಠಡಿ ಸ್ಥಾಪನೆ

Share

ನಿಯಂತ್ರಣ ಕೊಠಡಿ ಸ್ಥಾಪನೆ

ಮೈಸೂರು,ಮಾ.21:-
ರಾಜ್ಯ ವಿಧಾನಸಭಾ ಚುನಾವಣೆ-2023ರ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಸಂಬoಧ ಅಕ್ರಮವಾಗಿ ಮದ್ಯ ತಯಾರಿಕೆ, ಶೇಖರಣೆ, ಸಾಗಾಣಿಕೆ, ವಿತರಣೆ ಇನ್ನಿತರೆ ಅಬಕಾರಿ ಅಕ್ರಮದ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು/ಮಾಹಿತಿಗಳನ್ನು ಸ್ವೀಕರಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೆಸ್ ಮತ್ತು ಉಪ ಅಧೀಕ್ಷಕರವರ ಕಛೇರಿಯನ್ನೊಳೊಗೊಂಡoತೆ ಪ್ರತಿ ತಾಲ್ಲೂಕಿನದ್ಯಾಂತ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತದೆ.
ಅಬಕಾರಿ ಇಲಾಖೆಗೆ ಸಂಬoಧಪಟ್ಟoತೆ ಯಾವುದೇ ದೂರುಗಳು, ಮಾಹಿತಿಗಳಿದ್ದರೂ ಕೆಳಕಂಡ ಟೋಲ್ ಫ್ರೀ ದೂರವಾಣಿ ಸಂಖ್ಯೆಗೆ ಅಥವಾ ಸಂಬoಧಪಟ್ಟ ವ್ಯಾಪ್ತಿಯ ನಿಯಂತ್ರಣ ಕೊಠಡಿಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಬಹುಬೇಕಾಗಿ ಜಿಲ್ಲಾ ಅಬಕಾರಿ ಇಲಾಖೆಯು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ.
ತಾಲ್ಲೂಕು ನಿಯಂತ್ರಣ ಕೋಠಡಿಗಳ ದೂರವಾಣಿ ಸಂಖ್ಯೆ:
ಮೈಸೂರು ಗ್ರಾಮೀಣ ವಿಭಾಗದ ಅಬಕಾರಿ ಉಪ ಆಯುಕ್ತರ ಕಛೇರಿ ದೂ.ಸಂ:0821-2529184, 1800-4259184,
ನಂಜನಗೂಡು ಉಪ ವಿಭಾಗದ ಅಬಕಾರಿ ಉಪ ಆಯುಕ್ತರ ಕಛೇರಿ ದೂ.ಸಂ: 08221-200102, 9035444444 ,
ಹುಣಸೂರು ವಿಭಾಗದ ಅಬಕಾರಿ ಉಪ ಆಯುಕ್ತರ ಕಛೇರಿ ದೂ.ಸಂ: 08222-252434 , 9620979070 ,
ನಂಜನಗೂಡು ವಿಭಾಗದ ಅಬಕಾರಿ ನಿರೀಕ್ಷಕರ ಕಛೇರಿ ದೂ.ಸಂ: 08221-200165, 8310675068,
ಟಿ ನರಸೀಪುರ ವಿಭಾಗದ ಅಬಕಾರಿ ನಿರೀಕ್ಷಕರ ಕಛೇರಿ ದೂ.ಸಂ:08227-261674, 9964838903,
ಕೆ.ಆರ್ ನಗರ ವಿಭಾಗದ ಅಬಕಾರಿ ನಿರೀಕ್ಷಕರ ಕಛೇರಿ ದೂ.ಸಂ:08223-264801, 8970171668,
ಪಿರಿಯಾಪಟ್ಟಣ ವಿಭಾಗದ ಅಬಕಾರಿ ನಿರೀಕ್ಷಕರ ಕಛೇರಿ ದೂ.ಸಂ:0822-297373, 9164472271 ,
ಹೆಚ್.ಡಿ ಕೋಟೆ ವಿಭಾಗದ ಅಬಕಾರಿ ನಿರೀಕ್ಷಕರ ಕಛೇರಿ ದೂ.ಸಂ:08228-297195, 9611044444
ಈ ಮೇಲಿನ ಸಂಖ್ಯಗಳನ್ನು ಸಂಪರ್ಕಿಸಬಹುದು ಎಂದು ಮೈಸೂರು ಗ್ರಾಮಾಂತರ ಜಿಲ್ಲಾ ವಿಭಾಗದ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share