ಹಿರಿ ಜೀವಕ್ಕೆ ಶತ ಕೋಟಿ ಪ್ರಣಾಮ

Share

 

ಹಿರಿ ಜೀವಕ್ಕೆ ಶತ ಕೋಟಿ ಪ್ರಣಾಮಗಳು??

ಈ ಪೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಬಳಿಯಿದ್ದ ಐವತ್ತು ಲಕ್ಷ ಬೆಲೆಬಾಳುವ ಭೂಮಿಯನ್ನು ಸೇವಾಭಾರತಿ ಕೇರಳ ಘಟಕಕ್ಕೆ ದಾನವಾಗಿ ನೀಡಿ, ಮುಗುಳ್ನಗುತ್ತಾ ಸಂತೃಪ್ತ ಭಾವದಿಂದ ನಡೆದು ಹೋಗುತ್ತಿದ್ದಾರೆ.

ಇಲ್ಲಿ ನಮ್ಮೆಲ್ಲರ ಗುರಿ ಒಂದೇ, ಅದು ‘ಭವ್ಯ ಭಾರತ ನಿರ್ಮಾಣ’ ಆದರೆ ಅದರತ್ತ ಸಾಗುವ ದಾರಿ ಅನೇಕ ಇರಬಹುದು.

ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸುವ, ವಾಟ್ಸಾಪ್ ಸ್ಟೇಟಸ್‌ನಲ್ಲಿ ಹುಲಿ, ಸಿಂಹಗಳೊಂದಿಗೆ ಮಿಂಚುವ, ತರತರದ ಕೇಸರಿ ವಸ್ತ್ರ ಅಲಂಕಾರಗಳೊಂದಿಗೆ ಕಂಗೊಳಿಸುವ, ಚುನಾವಣೆ ಸಮಯದಲ್ಲಿ ಮುನ್ನಲೆಗೆ ಬರುವ ಕಟ್ಟರ್ ಹಿಂದುತ್ವವಾದಿಗಳು ಗುರಿಯತ್ತ ಸಾಗುವ ದಾರಿಗಿಂತ, ಸಾಂಘಿಕವಾಗಿ, ಸಂಘಟನೆ ಮೂಲಕ ಸದ್ದಿಲ್ಲದೆ ಗುಪ್ತಗಾಮಿನಿಯಾಗಿ ಸ್ಪಷ್ಟವಾಗಿ, ದೃಢತೆಯಿಂದ, ಸ್ಥಿರತೆಯಿಂದ ಗುರಿಯತ್ತ ಸಾಗುವ ಈ ಸ್ವಯಂಸೇವಕನ ದಾರಿಯೇ ನಮಗೆ ಇಷ್ಟವಾಗೋದು..

ಸಂಘ ಅಂದಮೇಲೆ ಅಲ್ಲಿ ವ್ಯಕ್ತಿ ಪ್ರಧಾನವಿಲ್ಲ, ಅಲ್ಲಿ ಇರೋದು ಬರೀ ಭವ್ಯಭಾರತವೆಂಬ ಗುರಿ ಮಾತ್ರ, 1925 ರಲ್ಲಿ ರೂಪುಗೊಂಡ ನಂತರ ಈ ಸಂಘಟನೆಯನ್ನು ಇಲ್ಲವಾಗಿಸಲು ಪ್ರಯತ್ನಿಸಿದ ಪ್ರಯತ್ನಗಳು ಅದೆಷ್ಟೋ, ಕುಪ್ರಚಾರಗಳು, ನಿಷೇಧಗಳು, ಆಕ್ರಮಣಗಳು, ವ್ಯಂಗ್ಯಗಳು, ಅವಮಾನಗಳು ಹೀಗೆ ಸಂಘ ಎದುರಿಸದ ಸವಾಲುಗಳು ನೂರಾರು..

ಆದರೂ ಸಂಘ ಒಮ್ಮೆ ಕೂಡ ಧೃತಿಗೆಡದೆ ಹೆಮ್ಮರವಾಗಿ ಬೆಳೆದು ನಿಂತದ್ದು ಹೇಗೆ ಅಂದರೆ ಇಂತಹ ಸ್ವಯಂಸೇವಕರ ಕಾರಣದಿಂದಲೇ ಹೊರತು ಯಾವುದೇ ವ್ಯಕ್ತಿ ಪ್ರಾಧಾನ್ಯದಿಂದ ಅಲ್ಲ, ವ್ಯಕ್ತಿ ಪೂಜಕರಿಂದ ಅಲ್ಲವೇ ಅಲ್ಲ..

ಸ್ವಯಂಸೇವಕ..???


Share