ಮೈಸೂರು,ಶ್ರಾವಣ ಮಾಸ-16,ರಿ0ದ ವಚನಾಧಾರಿತ ಉಪನ್ಯಾಸ

 

ಮೈಸೂರು, ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕವು ಶ್ರಾವಣ ಮಾಸದ ಪ್ರಯುಕ್ತ 2023 ಆಗಸ್ಟ್ 16 ರಿಂದ ಸೆಪ್ಟೆಂಬರ್ 15ರವರೆಗೆ ನಗರದ ಬೇರೆ ಬೇರೆ ಬಡಾವಣೆಗಳ ಮನೆಗಳಲ್ಲಿ ಪ್ರತಿನಿತ್ಯ ಸಂಜೆ 5.30 ರಿಂದ ಶರಣರ ವಚನಾಧಾರಿತ ಸ೦ದೇಶ ಕುರಿತು ವಿದ್ವಾಂಸರಿಂದ ಉಪನ್ಯಾಸ ಹಾಗೂ ಪರಿಷತ್ತಿನ ಸದಸ್ಯತ್ವದ ಅಭಿಯಾನವನ್ನು ಏರ್ಪಡಿಸಲಾಗಿದೆ. ಅಲ್ಲದೆ ಶರಣ ಸಂದೇಶದ 31 ವಚನಗಳನ್ನು ಸ್ಕೂಲ ವ್ಯಾಖ್ಯಾನದೊ೦ದಿಗೆ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸದಾನಂದಯ್ಯ ಅವರು ತಿಳಿಸಿದರು.

ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ2000 ಪ್ರತಿ ಮನೆ ಮನೆಗೆ ತಲುಪಿಸಿದ್ದಲ್ಲಿ ಮನೆಯಲ್ಲಿ 4 ಜನ ಇದ್ದರೆ 8000 ಜನಕ್ಕೆ ತಲುಪಿಸಿದ೦ತಾಗುವುದು. ಹೀಗೆ ಶರಣ ತತ್ವ ವಿಶ್ವದ ಎಲ್ಲ ಜನರಿಗೆ ತಲುಪಬೇಕೆಂಬುದು ನಮ್ಮ ಆಶಯ

ಮನೆ ಮನೆಗೆ ಶ್ರಾವಣ ಮಾಸದ ಶರಣ ಸಂದೇಶ 2023 ಆಗಸ್ಟ್ 16ರ ಸಂಜೆ 5.30ಕ್ಕೆ ಮುಕ್ತ ಎಸ್ ಪ್ರಸನ್ನ ನಾಶಿ, ಸಂಕಲ್ಪ, ಟೆಂಪಲ್ ಟ್ರೇ ಅಪಾರ್ಟ್‌ಮೆಂಟ್, ವಿಜಯನಗರ, 4ನೇ ಹಂತ, ರಿಂಗ್ ರಸ್ತೆ ಮೈಸೂರು, ಇಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಾಗ್ರಿಪ್ರೊ. ಕೃಷ್ಣಗೌಡ ಎಂ. ಇವರು ಉದ್ಘಾಟಿಸಿ, ಕಿರುಕೃತಿ (ಆಯ್ದ 31 ವಚನಗಳ) ಲೋಕಾರ್ಪಣೆಗೊಳಿಸಲಿದ್ದಾರೆ. ಅಧ್ಯಕ್ಷತೆ ಶ್ರೀ ಮ.ಗು. ಸದಾನಂದಯ್ಯ, ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ, ಇವರು ವಹಿಸಲಿದ್ದಾರೆ. ವಿವಿಧ ಬಡಾವಣೆಗಳಲ್ಲಿ 30 ದಿನ ಪ್ರತಿದಿನ ಸಂಜೆ 5.30ರ ಶರಣ ಸಂದೇಶದ ಉಪನ್ಯಾಸ ನಡೆದ ನಂತರ 31ನೇ ದಿನ 2023 ಸೆಪ್ಟೆಂಬರ್ 15 ರಂದು ಶ್ರೀಮತಿ ಜಯಾಗೌಡ ಅವರ ಪ್ರಾಯೋಜಕತ್ವದಲ್ಲಿ ಜೆಎಸ್ಎಸ್ ಲಾ ಕಾಲೇಜು, ಕುವೆಂಪುನಗರ, ಮೈಸೂರು, ಇಲ್ಲಿ ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಭಾಷಣವನ್ನು ಶಿಕ್ಷಣ ತಜ್ಞ ಡಾ. ಡಿ.ಎಸ್. ಗುರು ಅವರು ಮಾಡಲಿದ್ದಾರೆ.

ಶ್ರಾವಣ ಮಾಸ ಸಂಜೆ ಜ್ಞಾನದಾಸೋಹದ ಮೂಲಕ ಅರ್ಥಪೂರ್ಣಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಾಗೂ ಪರಿಷತ್ತಿನ ಸದಸ್ಯತ್ವ ಪಡೆದು ಪರಿಷತ್ತಿನ ಎಲ್ಲಾ ಭಾಗವಹಿಸುವಂತೆ ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು