🔯 ಆಧ್ಯಾತ್ಮಿಕ ವಿಚಾರ.📖🔯

*ತ್ರಿಶಕ್ತಿಗಳ ಸಂಗಮ ಕ್ಷಣಾಂಬಿಕಾದೇವಿ..!*

ಶ್ರೀರಂಗಪಟ್ಟಣದಲ್ಲಿರುವ_ಶ್ರೀಚಕ್ರಧಾರಿ_ಕ್ಷಣಾಂಬಿಕಾ_ದೇವಾಲಯ_ಪುರಾತನವಾದುದು_ಹಾಗೂ_ವಿಶೇಷವಾದ್ದು.

ಇಲ್ಲಿರುವ ದೇವಿಯು ಲಕ್ಷ್ಮಿ, ಸರಸ್ವತಿ, ಪಾರ್ವತಿಯರ ಶಕ್ತಿಗಳ ಸಂಗಮ ಎಂಬ ನಂಬಿಕೆಯಿದೆ.

ಕರ್ನಾಟಕದ ಇತಿಹಾಸಪ್ರಸಿದ್ಧ ತಾಣ ಶ್ರೀರಂಗಪಟ್ಟಣದ ಹೆಸರನ್ನು ಕೇಳದ ಕನ್ನಡಿಗರಿಲ್ಲ, ಶ್ರೀರಂಗಪಟ್ಟಣ ಎಂದಾಕ್ಷಣ ಮುಖ್ಯವಾಗಿ ನೆನಪಾಗುವುದು ಶ್ರೀರಂಗನಾಥನ_ಆಲಯ_ನಿಮಿಷಾಂಬ_ದೇವಾಲಯ_ಪಶ್ಚಿಮವಾಹಿನಿ_ಟಿಪ್ಪು_ಸುಲ್ತಾನ್ ಆಳ್ವಿಕೆ ನಡೆಸಿದ ಜಾಗ, ಜಾಮಿಯಾ ಮಸೀದಿ ಮುಂತಾದವು.

ಆದರೆ ಈ ಪಟ್ಟಣದಲ್ಲೇ ಒಂದು ಪ್ರಾಚೀನ ದೇವಾಲಯ ಸಮುಚ್ಚಯವಿದೆ.

ಅದೇ ಶ್ರೀರಂಗಪಟ್ಟಣದ ಜಾಮಿಯಾ_ಮಸೀದಿಯ ಪಕ್ಕದಲ್ಲಿ ನೇರವಾಗಿ ಹೋದರೆ ಆಂಜನೇಯ ದೇವಾಲಯ ಹಾಗೂ ಅದರ ಪಕ್ಕದಲ್ಲೇ ತ್ರಿಶಕ್ತಿ ಸಂಗಮ ಶ್ರೀಚಕ್ರಧಾರಿ ಕ್ಷಣಾಂಬಿಕಾ ದೇವಾಲಯ ಕಾಣಿಸುತ್ತದೆ.

#ಕಾಶಿಯಾತ್ರೆ_ಪುಣ್ಯ

ಹಿಂದೆ ಇಲ್ಲಿ ದಂಡನಾಯಕರಾಗಿದ್ದ #ನಂಜರಾಜಯ್ಯನವರ ವೃದ್ಧ ತಂದೆ-ತಾಯಿಗೆ ಕಾಶೀಯಾತ್ರೆಯ ಆಸೆಯಿತ್ತು. ಆದರೆ ಆ ಕಾಲದಲ್ಲಿ ಕಾಶಿಗೆ ಹೋದವರು ಮರಳಿ ಬರುವ ಸಾಧ್ಯತೆ ಕಡಿಮೆಯಿತ್ತು.

ತಂದೆ-ತಾಯಿಯನ್ನು ಅಷ್ಟು ದೂರ ಕಳಿಸಲು ಒಪ್ಪದ ದಂಡನಾಯಕ ವಾರಾಣಸಿಯಲ್ಲಿರುವ ಎಲ್ಲ ದೇವರನ್ನೂ ಇಲ್ಲೇ ಪ್ರತಿಷ್ಠಾಪಿಸಿ, ತಂದೆ-ತಾಯಿಗೆ ದರ್ಶನ ಮಾಡಿಸಿದ.

ಹೀಗಾಗಿ ಈ ದೇವಾಲಯ ಸಮುಚ್ಚಯದಲ್ಲಿ ಮಹೇಶ್ವರ, ಅನ್ನಪೂರ್ಣೆ, ಸುಬ್ರಹ್ಮಣ್ಯ, ಪಾರ್ವತಿದೇವಿಯ ಮೂರ್ತಿಗಳಿವೆ.

ಇಲ್ಲಿಯ ದೇವರ ದರ್ಶನ ಮಾಡಿದರೆ ಕಾಶೀಯಾತ್ರೆಯ ಪುಣ್ಯ ಬರುತ್ತದೆಂಬ ನಂಬಿಕೆಯಿದೆ.

ಪುರಾತನವಾದ ಈ ದೇವಾಲಯ ಸಮುಚ್ಚಯದಲ್ಲಿ ಚ್ಯೋತಿರ್ಮಹೇಶ್ವರ, ಕ್ಷಣಾಂಬಿಕಾ, ನವಗ್ರಹಗಳ ದೇವಾಲಯಗಳಿವೆ.

ಶ್ರೀರಂಗಪಟ್ಟಣದ ಮಧ್ಯದಲ್ಲಿನ ಈ ಶಿವ ದೇವಾಲಯದಲ್ಲಿ ದೀಪ ಹಚ್ಚಿದರೆ ಊರಿಗೆ ಬೆಳಕು ಕಾಣಿಸುತ್ತಿತ್ತು.

ಹೀಗಾಗಿ ಈ ದೇವಾಲಯದ ಈಶ್ವರನಿಗೆ #ಜ್ಯೋತಿರ್ಮಹೇಶ್ವರ ಎಂಬ ಹೆಸರು ಬಂದಿದೆ.

ಇಲ್ಲಿನ ಶಿವನಿಗೆ ಅಭಿಷೇಕ ಮಾಡುವಾಗ ಏಕಾಗ್ರತೆಯಿಂದ ತದೇಕಚಿತ್ತದಿಂದ ನೋಡಿದರೆ ಲಿಂಗದಲ್ಲಿ ಜ್ಯೋತಿ ಕಾಣಿಸುತ್ತದೆ ಎನ್ನುತ್ತಾರೆ.

ಈ ಕಾರಣದಿಂದಲೂ ಲಿಂಗಕ್ಕೆ ಜ್ಯೋತಿರ್ಮಹೇಶ್ವರ ಲಿಂಗ ಎಂಬ ಹೆಸರು ಬಂದಿದೆ.

ಜ್ಯೋತಿರ್ಮಹೇಶ್ವರನಿಗೆ ಶೈವಾಗಮ ಪದ್ಧತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಗರ್ಭಗುಡಿಯ ಹೊರಾಂಗಣದಲ್ಲಿ ಕಾಲಭೈರವ, ಸಪ್ತಮಾತೃಕೆ, ವರದರಾಜಸ್ವಾಮಿಯ ದರ್ಶನ ಮಾಡಬಹುದು.

ಜ್ಯೋತಿರ್ಮಹೇಶ್ವರನ ಆಲಯದ ಪಕ್ಕದಲ್ಲಿರುವುದೇ ತ್ರಿಶಕ್ತಿಸಂಗಮ ಶ್ರೀಚಕ್ರಧಾರಿ ಕ್ಷಣಾಂಬಿಕಾ ದೇವಿಯ ದೇಗುಲ.

ಹೆಸರೇ ಸೂಚಿಸುವಂತೆ ಭಕ್ತರು ಭಕ್ತಿಯಿಂದ ಬೇಡಿದ ಕ್ಷಣದಲ್ಲಿಯೇ ದೇವಿಯು ವರವನ್ನು ದಯಪಾಲಿಸುತ್ತಾಳೆ.

ಹೀಗಾಗಿ ದೇವಿ ಕ್ಷಣಾಂಬಿಕೆಯಾಗಿದ್ದಾಳೆ ಎಂಬ ನಂಬಿಕೆ ಭಕ್ತರಲ್ಲಿದೆ.

ಪಾರ್ವತಿ, ಸರಸ್ವತಿ ಹಾಗೂ ಲಕ್ಷ್ಮೀ – ಹೀಗೆ ತ್ರಿಶಕ್ತಿಯರು ಕ್ಷಣಾಂಬಿಕೆಯ ರೂಪದಲ್ಲಿ ನೆಲೆಸಿದ್ದಾರೆ.

ಗರ್ಭಗುಡಿಯಲ್ಲಿರುವ ಮೂರ್ತಿಯೂ ಈ ಮಾತನ್ನು ಪುಷ್ಟೀಕರಿಸುವಂತಿದೆ.

ವಿಗ್ರಹದ ಕೆಳಭಾಗದಲ್ಲಿ ಸರಸ್ವತಿಯ ವಾಹನವಾದ ಹಂಸವಿದೆ. ಕೈಯಲ್ಲಿ ಕಮಲ ಹಿಡಿದ ಕಾರಣ ಲಕ್ಷ್ಮೀ ಸ್ವರೂಪಿಣಿಯಾಗಿದ್ದಾಳೆ.

ಇನ್ನು ದೇವಿಯ ಶರೀರ ಪಾರ್ವತಿಯದಾಗಿದೆ.

ಹೀಗಾಗಿ ಇದು ತ್ರಿಶಕ್ತಿ ಸಂಗಮದ ಅಂಶ ಎಂದರೂ ತಪ್ಪಾಗಲಾರದು,

ಇಲ್ಲಿ ಮಾತೆಯ ಪಾದದ ಬಳಿ ಶ್ರೀಚಕ್ರವನ್ನು ಪ್ರತಿಷ್ಠಾಪಿಸಲಾಗಿದ್ದು, ದೇವಿಯ ಕಣ್ಣುಗಳು ಶ್ರೀಚಕ್ರವನ್ನೇ ನೋಡುತ್ತಿರುವಂತಿವೆ.

ಸ್ವತಃ ಆದಿಶಂಕರಾಚಾರ್ಯರೇ ಬೀಜಾಕ್ಷರ ಮಂತ್ರ ಬರೆದು ಇದನ್ನು ಪ್ರತಿಷ್ಠಾಪಿಸಿದ್ದಾರೆ ಎಂಬ ನಂಬಿಕೆಯಿದೆ.

ದೇವಿಗೆ ಮಂಗಳವಾರ, ಶುಕ್ರವಾರ, ನವರಾತ್ರಿ ಮುಂತಾದ ಸಂದರ್ಭಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಚೈತ್ರಮಾಸದ ಕೊನೆಯ ಶುಕ್ರವಾರ ಶ್ರೀಚಕ್ರಕ್ಕೆ ವಿಶೇಷ ಪೂಜೆ ಮಾಡುತ್ತಾರೆ.

ದೇವಾಲಯದ ಸಂಪ್ರದಾಯದ ಪ್ರಕಾರ ಮೊದಲು ಶ್ರೀಜ್ಯೋತಿರ್ಮಹೇಶ್ವರನ ಆಲಯಕ್ಕೆ ಪೂಜೆ ಸಲ್ಲಿಸಿದ ಬಳಿಕವೇ ಕ್ಷಣಾಂಬಿಕೆಗೆ ಪೂಜೆ ಸಲ್ಲಿಸುತ್ತಾರೆ.

ತ್ರಿಶಕ್ತಿಗಳ ಸಂಗಮ ಕ್ಷಣಾಂಬಿಕಾದೇವಿ ಕೃಪೆಯಿಂದ ಎಲ್ಲರಿಗೂ ಶುಭವಾಗಲಿ

*!! ಶ್ರೀಕೃಷ್ಣಾರ್ಪಣಮಸ್ತು !!*