ಮೈಸೂರು ನ್ಯಾಯಾಲಯದ ಮುಂದೆ ಪ್ರತಿಭಟನೆ

Share


ಮೈಸೂರು ಕಾನೂನು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ KSLU ಆದೇಶ ನೀಡಿರುವುದನ್ನು ಖಂಡಿಸಿ. NSUI ಮೈಸೂರು ವತಿಯಿಂದ ಪ್ರತಿಭಟನೆ ನಡೆಸಲಾಯಿತು

 ಮೈಸೂರು, ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಮತ್ತು ಕೊರೊನ ವೈರಸ್ COVID-19 ಹಾವಳಿಯಿಂದಾಗಿ ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಎಷ್ಟು ಅಹಿತಹಕರ ಘಟನೆಗಳು ನಡೆದಿದೆ ಮತ್ತು ಎಷ್ಟೋ ಜೀವಗಳು ಬಲಿಯಾಗಿದೆ ಆದುದರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆತುರದಲ್ಲಿ ಏನೂ ಬೇಕಾದರೂ ಸಂಬವಿಸಬಹುದು, ಮಾನ್ಯ UGC ಮಾರ್ಗಸೂಚಿಯಂತೆ ಎಲ್ಲಾ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದವರ ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಲು ಆದೇಶಿಸೀದೆ,ಆದರೆ KSLU ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಮತ್ತು ಪರೀಕ್ಷೆ ನಡೆಸಲು ತಯಾರಿ ನಡೆಯುತ್ತಿದೆ,ಎಷ್ಟೋ ಕಾನೂನು ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಹೊರ ಜಿಲ್ಲೆಗಳಿಂದ ನಾನ ಕಡೆಯಿಂದ ಆಗಮಿಸುತ್ತಾರೆ. ಈ ಸಮಯದಲ್ಲಿ ಯಾವುದೇ ರೀತಿಯ ಹೆಚ್ಚು ಕಡಿಮೆ ಆದ್ದಲ್ಲಿ ಜವಬ್ದಾರಿ ಯಾರು ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಉಳಿದು ಕೊಳ್ಳುವ ಯಾವುದೇ ರೀತಿಯ ತಯಾರಿ KSLU ಮಾಡಿಲ್ಲ PG ಹಾಸ್ಟೆಲ್ ಎಲ್ಲವೂ ಸಹ ಮುಚ್ಚಿದೆ ಹಾಗೂ ವಿದ್ಯಾರ್ಥಿಗಳಿಗೆ ಕಷ್ಟ ಕೊಡಬಹುದು ಮತ್ತು 50% ಸಹ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮುಗಿಸಿಲ್ಲ ಮತ್ತು ಆನ್ಲೈನ್ ತರಗತಿಗಳು ಎಷ್ಟೋ ವಿದ್ಯಾರ್ಥಿಗಳಿಗೆ ಅರ್ಥಕೂಡ ಆಗಿಲ್ಲ ಆದುದ್ದರಿಂದ ನಮ್ಮ ವಿನಂತಿ ಏನೆಂದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಹಿಂದಿನ ತರಗತಿಯ ಅಂಕಿ ಅಂಶಗಳನ್ನು ಅನುಸರಿಸಿ ಉತ್ತೀರ್ಣಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ ವಿದ್ಯಾರ್ಥಿಗಳು ಭಾರತದ ಮುಂದಿನ ಸ್ವತ್ತು ಅವರ ಜೀವನದಲ್ಲಿ ಚೆಲ್ಲಾಟವಾಡದಿರಿ ಕಾನೂನು ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಿ. ನಗರದ ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
       ವಂದನೆಗಳೊಂದಿಗೆ 

ರಫಿಕ್ ಅಲಿ ಎಚ್ ಎ
NSUI ಜಿಲ್ಲಾ ಅಧ್ಯಕ್ಷರು
ಮೈಸೂರು ಜಿಲ್ಲೆ


Share