ICMR ನಿಂದ ಕೋವಿದ ಪರೀಕ್ಷೆಗೆ ದರ ನಿಗದಿ ಖಾಸಗಿ ಲ್ಯಾಬ್ಗಳಲ್ಲಿ ನಡೆಸುವ RT-.PCR ಹಾಗೂ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ICMR ದರಗಳನ್ನು ನಿಗದಿ ಪಡಿಸಿದ್ದು ಈ ಕೆಳಕಂಡಂತಿದೆ . .ಕೋವಿದ್ -19 ಪರೀಕ್ಷಾರ್ಥವಾಗಿ ಖಾಸಗಿ ಲ್ಯಾಬ್ಗಳಿಗೆ ಸರ್ಕಾರದಿಂದ ಕಳುಹಿಸಿ ಕೊಡಲ್ಪಡುವ RT-PCR ಟೆಸ್ಟ್ಗಳಿಗೆ ₹2000 ಮಾತ್ರ .ಇದು ಪಿಪಿ ಕಿಟ್ ಬಳಸಿ ಮಾಡಲ್ಪಡುವ ಸ್ಕ್ರೀನಿಂಗ್ ಟೆಸ್ಟ್ ,ದೃಢೀಕರಣ ಪರೀಕ್ಷೆಗಳಿಗೆ ಒಳಗೊಂಡಿರುತ್ತದೆ .ಇದೇ ರೀತಿ ಖಾಸಗಿ ಲ್ಯಾಬ್ಗಳಲ್ಲಿ ತೆಗೆದುಕೊಂಡು ಅಲ್ಲೇ ಪರೀಕ್ಷೆ ನಡೆಸುವಂತ ಪ್ರಕರಣಗಳಿಗೆ ₹3000 ಇವು ಕೂಡ ಪಿಪಿ ಕಿಟ್ ಬಳಸಿ ನಡೆಸುವ ಸ್ಕ್ರೀನಿಂಗ್ ಟೆಸ್ಟ್ ದೃಢೀಕರಣ ಪ್ರಕರಣಗಳಿಗೆ ಮಾತ್ರ ಅನ್ವಯಿಸುವುದು . .ಖಾಸಗಿಯಾಗಿ ತೆಗೆದುಕೊಂಡು ಖಾಸಗಿ ಲ್ಯಾಬ್ಗಳಲ್ಲಿ ನಡೆಸುವ ರ್ಯಾಪಿಡ್ ಟೆಸ್ಟ್ ಪರೀಕ್ಷೆಗಳಿಗೆ ₹700 ಮಾತ್ರ ತೆಗೆದುಕೊಳ್ಳಬೇಕೆಂದು ಐಸಿಎಂಆರ್ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಈ ಹಿಂದೆ ರಾಜ್ಯ ಸರ್ಕಾರವು ಆರ್ಟಿಪಿಸಿಆರ್ ಮತ್ತು ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗಳಿಗೆ ₹2250 ಎಂದು ಕರ್ನಾಟಕ ರಾಜ್ಯ ಸರ್ಕಾರ ನಿಗದಿ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು .ಮೇಲ್ಕಂಡ ಎಲ್ಲಾ ಪರೀಕ್ಷೆಗಳನ್ನು ಐಸಿಎಂಆರ್ ನಿಂದ ದೃಢೀಕರಿಸಲ್ಪಟ್ಟ ಲ್ಯಾಬ್ಗಳಲ್ಲಿ ಮಾತ್ರ ನಡೆಸಬೇಕು ಹಾಗೂ ಐಸಿಎಂಆರ್ ಮತ್ತು ರಾಜ್ಯ ಸರ್ಕಾರಗಳು ತಿಳಿಸಿರುವ ನಿಯಮಾವಳಿ ಪ್ರಕಾರವೇ ಪರೀಕ್ಷೆಗಳನ್ನು ಮಾಡಬೇಕು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ .