latest,ಗಣೇಶೋತ್ಸವ ಆಚರಣೆಗೆ: ಸರ್ಕಾರ ಅನುಮತಿ ಪರಿಷ್ಕೃತ ಮಾರ್ಗಸೂಚಿ ಪ್ರಕಟ

Share

ಬೆಂಗಳೂರು, ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡುವುದರ ಮೂಲಕ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಸಾರ್ವಜನಿಕ ಸ್ಥಳದಲ್ಲಿ 4 ಅಡಿಗಿಂತ ಹೆಚ್ಚು ಎತ್ತರದ ಗಣಪತಿ ಮೂರ್ತಿಯನ್ನು ಇಡುವ ಹಾಗೆ ಇಲ್ಲ, ಮನೆಯಲ್ಲಿ ಎರಡು ಅಡಿ ಎತ್ತರ ಕ್ಕಿಂತ ಹೆಚ್ಚು ಎತ್ತರದ ಗಣಪತಿ ಇಡುವ ಹಾಗೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ಮಹೋತ್ಸವ ಕಾರ್ಯಕ್ರಮದಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಜನರು ಸೇರುವ ಹಾಗೆ ಇಲ್ಲ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮ ಏರ್ಪಡಿಸುವ ಹಾಗೆ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಇತ್ಯಾದಿ ನಿರ್ಬಂಧ ಹೇರಲಾಗಿದೆ . ಗಣೇಶನ ವಿಸರ್ಜನೆಗೆ ಮೊಹಲ್ಲಾ, ಬಡಾವಣೆಯ ವೃತ್ತಗಳಲ್ಲಿ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲು ಕಡ್ಡಾಯವಾಗಿ ಸೂಚಿಸಲಾಗಿದೆ.


Share