ಬೆಂಗಳೂರ ಖಾಸಗಿ ಆಸ್ಪತ್ರೆಗಳಲ್ಲಿ 50% ಬೆಡ್ ನೀಡಲು ಒಪ್ಪಿಗೆ. ಸಿಎಂ ಮಾತುಕತೆ ಯಶಸ್ವಿ

363
Share

ಬೆಂಗಳೂರು
ಮುಖ್ಯಮಂತ್ರಿ ಎಚ್ಚರಿಕೆಗೆ ಖಾಸಗಿ ಆಸ್ಪತ್ರೆಗಳು ಮಣಿದು ನಾಳೆಯಿಂದ 50 ರಿಂದ 80 ರಷ್ಟು ಬೆಡ್ ಗಳನ್ನು ಸರ್ಕಾರಕ್ಕೆ ನೀಡಲು ಒಪ್ಪಿದೆ.
ಖಾಸಗಿ ಆಸ್ಪತ್ರೆಯವರ ಜೊತೆ ಮುಖ್ಯಮಂತ್ರಿಗಳು ನಡೆಸಿದ ಮಾತುಕತೆ ಯಶಸ್ವಿಯಾಗಿದೆ, ಆಸ್ಪತ್ರೆಯವರು ಮಾತಿಗೆ ತಪ್ಪದಂತೆ ಅಧಿಕಾರಿಗಳು ನೋಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ಏನಾದರೂ ಮುಚ್ಚುಮರೆ ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯ ಸಮಸ್ಯೆ ಬಗೆಹರಿಸಲು ಸರ್ಕಾರ ಪ್ರಯತ್ನಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರ.


Share