M.P. ಆಧ್ಯಾತ್ಮಿಕ ಅಂಗಳ:ಧರ್ಮವು* ಒಂದೇ , ಧರ್ಮ ಎಂದರೇನು ?

 

🔯 ಆಧ್ಯಾತ್ಮಿಕ ವಿಚಾರ.📖🔯

🕉️ *ಧರ್ಮವು* ಒಂದೇ , ಧರ್ಮ ಎಂದರೇನು ?
*ದೇವರು ತನ್ನ ಸಂದೇಶದ ಮೂಲಕ ಆತ್ಮಕ್ಕೆ ನೀಡಿರುವುದೇ ಧರ್ಮ* ಅದನ್ನು ಆತ್ಮಧರ್ಮ ಎಂದು ಕರೆಯುತ್ತಾರೆ , ಆತ್ಮವು ಒಂದೇ ಮತ್ತು ಅದರ ಧರ್ಮವೂ ಒಂದೇ . ಹೀಗೆ ಒಂದೇ ಆಗಿರುವ ಆತ್ಮಧರ್ಮ ಎಂದರೇನು ?

*ಆತ್ಮದ ಪರಿಪೂರ್ಣತೆಗೆ ಯಾವುದು ಸಹಕಾರಿಯೋ ಅದೇ ಆತ್ಮಧರ್ಮ,* ವಿವಿಧ ಪರಿಸ್ಥಿತಿ , ಸಂದರ್ಭಗಳಲ್ಲಿ ಈ ಆತ್ಮಧರ್ಮವು ವಿವಿಧ ಕರ್ತವ್ಯ , ಜವಾಬ್ದಾರಿಗಳ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ . ಉದಾಹರಣೆಗೆ :
1 *ಪುತ್ರಧರ್ಮ’-*
ಚಿಕ್ಕವರಾಗಿದ್ದಾಗ ತಂದೆತಾಯಿಯರ ಬಗ್ಗೆ ನಮ್ಮ ಕರ್ತವ್ಯಗಳು .
2. *ಶಿಷ್ಯಧರ್ಮ*
ಶಾಲೆಗೆ ಹೋಗುವಾಗ ಗುರುಗಳು ಮತ್ತು ಶಾಲೆಯ ಬಗ್ಗೆ ನಮ್ಮ ಕರ್ತವ್ಯಗಳು ..
3 *ಕಾರ್ಯಧರ್ಮ*
ಕೆಲಸಕ್ಕೆ ಸೇರಿದಾಗ , ನಮ್ಮ ಸಂಸ್ಥೆಯ ಹಿತಾಸಕ್ತಿಗಾಗಿ ಉತ್ತಮ ಕಾರ್ಯನಿರ್ವಹಣೆ . ಪಾಲಿಸಬೇಕಾದ ಕರ್ತವ್ಯಗಳು , 4 *ಪತ್ನಿ ಧರ್ಮ ‘ ಮತ್ತು ‘ ಪತಿಧರ್ಮ ‘*
ವಿವಾಹದ ನಂತರ ಪತಿ , ಪತ್ನಿಯರಿಬ್ಬರೂ ಸೇರಿ ಪಾಲಿಸಬೇಕಾದ ಕರ್ತವ್ಯ ಗಳು 5.*ಮಾತೃಧರ್ಮ ‘ ಮತ್ತು ‘ ಪಿತೃಧರ್ಮ*-
ಮಕ್ಕಳ ಬಗ್ಗೆ ತಂದೆ , ತಾಯಿಯರ ಕರ್ತವ್ಯಗಳು .
6 ಗೃಹಸ್ಥಾಶ್ರಮದಲ್ಲಿ ಇವುಗಳಲ್ಲದೆ ‘
*ಸಂಬಂಧಿ ಧರ್ಮ*
*ಸಮಾಜ ಧರ್ಮ*
ಮತ್ತು ಕರ್ತವ್ಯಗಳು , ‘
*ರಾಷ್ಟ್ರಧರ್ಮ* ಇವು ನಮ್ಮ ಬಂಧುಗಳು , ಸಮಾಜ ಮತ್ತು ರಾಷ್ಟ್ರಗಳ ಬಗ್ಗೆ ನಮ್ಮಕರ್ತವ್ಯ ಮತ್ತು ಜವಾಬ್ದಾರಿ ಯನ್ನು ತಿಳಿಸುತ್ತದೆ.
7.ಬ್ರಾಹ್ಮಣನಾಗಿದ್ದರೆ – ಅಂದರೆ , ಉತ್ತಮ ಶಿಕ್ಷಣ , ಸಂಸ್ಕೃತಿ , ನಡತೆಗಳ ಮೂಲಕ ಹೋಗಲಾಡಿಸುವ ‘
*ಬ್ರಾಹ್ಮಣ ಧರ್ಮ*
ರಾಷ್ಟ್ರ ನಿರ್ಮಾಣವೇ ಮುಖ್ಯ ಕೆಲಸವಾಗಿದ್ದಲ್ಲಿ – ಅಜ್ಞಾನದ ಕತ್ತಲನ್ನು
8.ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುತ್ತಿದ್ದರೆ , ಅವನದು
*ಕ್ಷತ್ರಿಯ ಧರ್ಮ*
ಇವೆರಡು ಧರ್ಮಗಳ ನಡುವಿನ ವ್ಯತ್ಯಾಸವನ್ನು ಗಮನಿಸಿ , ಬ್ರಾಹ್ಮಣನಾದವನಿಗೆ ಕೊಲ್ಲುವುದು . ಗಾಯಗೊಳಿಸುವುದು ಪಾಪಕಾರ್ಯವಾದರೆ , ದೇಶ , ಧರ್ಮ , ಜನಾಂಗಗಳನ್ನು ನಾಶಗೊಳಿಸುತ್ತಾ , ದೇಶದ ಅಭಿವೃದ್ಧಿಗೆ ತಡೆಯೊಡ್ಡುತ್ತಾ ,ಬ್ರಾಹ್ಮಣ ರ ಕೆಲಸಕ್ಕೆ ಅಡ್ಡಿ ಪಡಿಸುವವರನ್ನು ಕೊಲ್ಲದಿರುವುದು ಕ್ಷತ್ರಿಯ ನಿಗೆ ಪಾಪ.
*!! ಶ್ರೀಕೃಷ್ಣಾರ್ಪಣಮಸ್ತು !!*
⬆️ಇಲ್ಲಿ ಕ್ಲಿಕ್ ಮಾಡಿ.