M.P. ಆಧ್ಯಾತ್ಮಿಕ ಅಂಗಳ:ಸಂಪ್ರದಾಯಗಳ ಗುಣಧರ್ಮಗಳು …!

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

🔯 ಆಧ್ಯಾತ್ಮಿಕ ವಿಚಾರ.📖🔯

*ಸಂಪ್ರದಾಯಗಳ ಗುಣಧರ್ಮಗಳು …!*

ಚಿಕ್ಕಂದಿನಲ್ಲಿ ನಮಗೆ ಹೆಚ್ಚಿನ ಎಲ್ಲಾ ಹಿರಿಯರು ಹೇಳುತ್ತಿದ್ದರು: “ಪುಸ್ತಕವನ್ನು ತುಳಿದರೆ ನಮಸ್ಕಾರ ಮಾಡಬೇಕು, ಇಲ್ಲದಿದ್ದರೆ ವಿದ್ಯಾದೇವತೆಯ ಶಾಪ ಸಿಗುತ್ತದೆ” ಎಂದು. ಈ ಕ್ರಮ ಅನೇಕರು ಎಷ್ಟು ಅತಿರೇಕಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದರೆ ಅಪ್ಪಿತಪ್ಪಿಯೂ ಒಮ್ಮೆ ಕಾಲು ತಾಕಿದರೆ ಪ್ರತಿಯಾಗಿ ಕಿವಿ-ಗಲ್ಲ ಮುಟ್ಟಿ ನಮಸ್ಕಾರ ಮಾಡದಿದ್ದರೆ ಅವರಿಗೆ ಭೀತಿಯುಂಟಾಗುತ್ತದೆ, ತೀವ್ರವಾಗಿ ಇರುಸುಮುರುಸುಂಟಾಗುತ್ತದೆ, ಯಾಕೆ? ವಿದ್ಯಾದೇವತೆಯ ಶಾಪ ತಟ್ಟಿದರೆ ಏನು ಗತಿ?
ಪುಸ್ತಕದ ಬಗ್ಗೆ ಗೌರವವಿರಿಸಿಕೊಳ್ಳಬೇಕು, ಅವಗಣನೆ ಸಲ್ಲದು ಎಂಬ ಸದಾಚಾರದಿಂದ ಶುರುವಾದ ಈ ಕ್ರಮ.

ಇನ್ನೂ ಕೆಲವು ಉದಾಹರಣೆಗಳು:

‘ಬೆಕ್ಕು ಅಡ್ಡ ಬಂದರೆ ವಿಘ್ನ’ ಎಂಬುದನ್ನು ಈಗ ಅನೇಕರು ಹಾಸ್ಯವೆಂದು ಪರಿಗಣಿಸುತ್ತಾರೆ, ಆದರೆ ಅನೇಕರ ಜೀವನದಲ್ಲಿ ಹಾಸುಹೊಕ್ಕಾಗಿ ಇನ್ನೂ ಮೆರೆಯುತ್ತಿರುವ ಹಲವು ಉದಾಹರಣೆಗಳನ್ನು ಕೊಡಬಹುದು.

ನಿನಗಿಂತ ದೊಡ್ಡವರಿಗೆ ಕಾಲು ತಾಕಿದರೆ ನಿನ್ನ ಕಾಲಿನಲ್ಲಿ ಹುಳುವಾಗುತ್ತದೆ, ತಪ್ಪಿಸಬೇಕಾದರೆ ನಮಸ್ಕಾರ ಮಾಡಬೇಕು

ದುಡ್ಡನ್ನು ತುಳಿಯಬಾರದು

ಎಡಗೈಯಲ್ಲಿ ದುಡ್ಡು ಕೊಡಬಾರದು

ಇತರರು ನಮಗೆ ಕೊಟ್ಟದ್ದನ್ನು ಎಡಗೈಯಲ್ಲಿ ತೆಗೆದುಕೊಳ್ಳಬಾರದು

ಎಡಗೈಯ ಮೂಲಕ ಇರಿಸಿದ ವಸ್ತು ಕಾಣೆಯಾಗುತ್ತದೆ

ಕೈ-ಕಾಲಿಂದ ಉಗುರು ಕಿತ್ತ ಮೇಲೆ ಅದನ್ನು ಯಾರಿಗೂ ಸಿಗದ ಜಾಗಕ್ಕೆ ಹಾಕಬೇಕು, ಅದನ್ನು ಯಾರಾದರೂ ತುಳಿದು ಬಿಟ್ಟರೆ ಅವರು ನಿನ್ನ ವೈರಿಗಳಾಗುತ್ತಾರೆ

ತಪ್ಪುದಾರಿಗೆಳೆಯುವುದಲ್ಲ ಉದ್ದೇಶ, ತುಂಟ ಮಕ್ಕಳನ್ನು ಅಂಕೆಯಲ್ಲಿಡುವ ಅಸ್ತ್ರ, ಅಷ್ಟೆ:

ಬಹುಷಃ ಈ ಭೀತಿವಾದ ಅನೇಕ ಮನೆಗಳಲ್ಲಿ ಇನ್ನೂ ಎಳೆಯದರಲ್ಲಿಯೇ ಶುರುವಾಗುತ್ತದೆ: ಊಟ ಮಾಡದಿದ್ದರೆ ಕಳ್ಳ ಬಂದು ಎತ್ತಿಕೊಂಡು ಹೋಗುತ್ತಾನೆ, ಹಾಗೆ ಮಾಡದಿದ್ದರೆ ಡಾಕ್ಟ್ರು ಸೂಜಿ ಚುಚ್ಚುತ್ತಾರೆ, ಭೂತ-ರಾಕ್ಷಸ ಕಾಟ ಕೊಡುತ್ತಾನೆ ಎಂದಿತ್ಯಾದಿ ಹೆದರಿಸಿ ಎಳೆಯರನ್ನು ಬಗ್ಗಿಸುವುದು ಕೂಡ ಬಹುಷಃ ನಮಗೆ ತಂದುಕೊಡುವುದು ಕೇವಲ ತಾತ್ಕಾಲಿಕ ವಿಜಯ. ದೂರಗಾಮಿ ದೃಷ್ಟಿಯಿಂದ ನೋಡಿದರೆ ಇದು ಅಂತಹ ಎಳೆಯರನ್ನು ವಿಕೃತಗೊಳಿಸುತ್ತದೆ ಎಂದು ನನಗನಿಸುತ್ತದೆ. ಹಠಮಾರಿ ಮಕ್ಕಳನ್ನು ಈ ರೀತಿಯಲ್ಲಲ್ಲದೆ ಹತೋಟಿಯಲ್ಲಿಡುವುದು ಕಷ್ಟಕರ ಎಂದು ನೀವು ಹೇಳಿದರೆ ಅದಕ್ಕೆ ಮನೋತಜ್ಞರು ಬೇರೆಯೇ ಉತ್ತರಗಳನ್ನು ಕೊಡಬಹುದು.
ಶ್ರೀಕೃಷ್ಣಾರ್ಪಣಮಸ್ತು

*!!