ಕೃಪೆ ಆದ್ಯಾತ್ಮಿಕ ವಿಚಾರ ಬಳಗ
*ಸ್ಥಿತಪ್ರಜ್ಞ..!*
…
ಯಾರು ಸ್ಥಿತಪ್ರಜ್ಞ ??
ಮನಸ್ಸಿನಲ್ಲಿರುವ ಕಾಮನೆಗಳನ್ನೆಲ್ಲ ಬಿಟ್ಟು, ಯಾವಾಗ #ಆತ್ಮನಲ್ಲಿ ಆತ್ಮನಿಂದಲೇ ಸಂತುಷ್ಟನಾಗಿರುವನೊ ಆಗ ಆತ ಸ್ಥಿತಪ್ರಜ್ಞ ಎನಿಸುತ್ತಾನೆ…
…
ಸ್ಥಿತಪ್ರಜ್ಞನು ಭೋರ್ಗರೆಯುವ ಸಂಸಾರ ಸಾಗರದಿಂದ ಮೇಲೆದ್ದು ನಿಂತಿರುವ ಒಂದು ದ್ವೀಪದಂತೆ ಇರುವನು…
ಅತ್ತ ಅಲ್ಲೋಲ ಕಲ್ಲೋಲ ಸಮುದ್ರ. ಇತ್ತ ದ್ವೀಪದಲ್ಲಿ ಪರಮಶಾಂತಿ….
…
ದುಃಖದಲ್ಲಿ ಉದ್ವೇಗಗೊಳ್ಳದವನು, ಸುಖದಲ್ಲಿ ಆಸೆ ಇಲ್ಲದವನು, ರಾಗ ಭಯ ಕ್ರೋಧಗಳನ್ನು ಗೆದ್ದವನು ಆದ ಮುನಿ ಸ್ಥಿತಪ್ರಜ್ಞ…
ಸ್ಥಿತಪ್ರಜ್ಞನು ನಿತ್ಯ ಸುಖಿ…
ಈ ಪ್ರಪಂಚದಲ್ಲಿ ಅವನಂತಹ ಸುಖಪುರುಷ ಯಾರು ಇಲ್ಲ…
ಅವನ ಸುಖಕ್ಕೆ ಆಧಾರ ಪ್ರೇಮಮಯನಾಗಿರುವ #ಭಗವಂತ….
…
ಅವನಿಗೆ ಗೊತ್ತು ಈ ಪ್ರಪಂಚದ ಎಲ್ಲಾ ಆಗುಹೋಗುಗಳ ಹಿಂದೆ ಭಗವಂತನಿರುವನೆಂದು…
ಹಾಗಾಗಿ ಆತ ಯಾವ ವಿಶೇಷ ವ್ಯಕ್ತಿಯಲ್ಲಾಗಲೀ, ವಸ್ತುವಿನಲ್ಲಾಗಲೀ ಆಸಕ್ತಿ ಹೊಂದಿರುವುದಿಲ್ಲ…
ಅವನ ಮನಸ್ಸಿಗೆ ಯಾವ ವಿಷಯವಾಸನೆಗಳು ಅಂಟುವುದಿಲ್ಲ. ಎಲ್ಲಾವನ್ನೂ ಪ್ರತಿಬಿಂಬಿಸುವನು..
ಹಿಡಿದಿಟ್ಟುಕೊಳ್ಳುವುದಿಲ್ಲ..
ಸ್ಥಿತಪ್ರಜ್ಞನು ಭಯಪಡುವುದಿಲ್ಲ… ಭಯ ಯಾರಿಗೆ ಇರುವುದು ? ಒಂದು ವಸ್ತುವಿಗೆ ಅಂಟಿಕೊಂಡಿದ್ದರೆ ಮಾತ್ರ…
ಆ ವಸ್ತು ಸಿಗದೇ ಹೋದರೆ ಕ್ರೋಧ ಕೂಡ ಉಂಟಾಗುವುದು…
ಆಸಕ್ತಿಯೇ ಇಲ್ಲದ ಮನುಷ್ಯನಿಗೆ ಇನ್ನು ಕೋಪ ಬರುವುದು ಹೇಗೆ ? ಕೋಪದ ಉರಿಗೆ ವಿಷಯಾಸಕ್ತಿಯೇ ಸೌದೆ… ಸೌದೆಯೇ ಇಲ್ಲದಾಗ ಉರಿ ಹೇಗೆ ಬರಲು ಸಾಧ್ಯ…??
…
ಆಸಕ್ತಿ, ಭಯ, ಕ್ರೋಧ ಇವು ಮೂರೇ ನಮ್ಮ ಮಾನಸಿಕ ಶಕ್ತಿಯನ್ನೆಲ್ಲ ವ್ಯಯ ಮಾಡುವುದು…
ಹಾಗಾಗಿ ವ್ಯಯವಾಗುವುದನ್ನೆಲ್ಲ ತಡೆಗಟ್ಟಿ ಅದನ್ನು ಅಂತರ್ಮುಖ ಮಾಡಿ, #ಪರಮಾತ್ಮನ ಕಡೆಗೆ ಹರಿಸುತ್ತಾನೆ #ಸ್ಥಿತಪ್ರಜ್ಞ ….
*!! ಶ್ರೀಕೃಷ್ಣಾರ್ಪಣಮಸ್ತು !!*
*ಮಂತ್ರಾಲಯದ_ಪಂಚಮುಖಿ_ಆಂಜನೇಯ_ದೇವಸ್ಥಾನ..!*
ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನವು ಮಂತ್ರಾಲಯದಿಂದ 20 ಕಿಮೀ ದೂರದಲ್ಲಿರುವ ತುಂಗಭದ್ರಾ ನದಿಯ ಇನ್ನೊಂದು ಬದಿಯಲ್ಲಿದೆ. ಇದು ಕರ್ನಾಟಕದಲ್ಲಿರುವ ಪ್ರಮುಖ ಹಾಗೂ ಶಕ್ತಿಶಾಲಿ ಆಂಜನೇಯ ಸ್ವಾಮಿ ದೇವಾಲಯವಾಗಿದೆ. ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ತೆರಳುವ ಮೊದಲು 12 ವರ್ಷಗಳ ಕಾಲ ಈ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧ್ಯಾನ ಮಾಡಿದ್ದರು ಎಂದು ಹೇಳಲಾಗುತ್ತದೆ. ನೀವು ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಬಂದಾಗ ಭೇಟಿ ನೀಡಲೇಬೇಕಾದ ಆಂಜನೇಯ ಸ್ವಾಮಿ ದೇವಾಲಯವಿದು.
ಗುರು ರಾಘವೇಂದ್ರರು ಪಂಚಮುಖಿ ಆಂಜನೇಯನಿಗಾಗಿ 12 ವರ್ಷಗಳ ಕಾಲ ಇಲ್ಲಿ ತಪಸ್ಸು ಮಾಡಿದರು ಎಂದು ಜನರು ಹೇಳುತ್ತಾರೆ. ಇಲ್ಲಿ ಆಂಜನೇಯನು ವರಾಹ, ಗರುಡ, ನರಸಿಂಹ, ಹಯಗ್ರೀವ ಮತ್ತು ಹನುಮಂತನಿಂದ ಕೂಡಿದ ಪಂಚಮುಖದೊಂದಿಗೆ ಅಂದರೆ 5 ಮುಖದೊಂದಿಗೆ ರಾಘವೇಂದ್ರ ಸ್ವಾಮಿಯ ಮುಂದೆ ಪ್ರತ್ಯಕ್ಷನಾದನು ಎಂದು. ರಾಘವೇಂದ್ರ ಸ್ವಾಮಿಗಳು ಹನುಮಂತನ ದರ್ಶನ ಪಡೆದ ಸ್ವಾಮಿಗಳು ಹಾಡಿ ಹೊಗಳಿದರು ಎಂದು ಪ್ರತೀತಿ..
*!! ಶ್ರೀಕೃಷ್ಣಾರ್ಪಣಮಸ್ತು !!*