M.P. ಫೋಕಸ್: ಶ್ರಾದ್ಧ ಮತ್ತು ಪಕ್ಷಮಾಸ.

Share

ಶ್ರಾದ್ಧ ಮತ್ತು ಪಕ್ಷಮಾಸ

✍️ #ಪ್ರಿಯಾ_ಪ್ರಾಣೇಶ_ ಹರಿದಾಸ

#ಶ್ರಾದ್ಧದಹಿನ್ನಲೆತಿಳಿದುಕೊಳ್ಳೋಣ .

ಬ್ರಹ್ಮವೈವತ್ವ ಪುರಾಣ , ಹರಿವಂಶ ಪುರಾಣ, ಗರುಡ ಪುರಾಣ,ವಾಯು ಪುರಾಣ, ನಾರದೀಯ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ಇವುಗಳನ್ನೆಲ್ಲಾ ಅಧ್ಯಯನ ಮತ್ತು ವಿಶ್ಲೇಷಣೆ , ಶ್ರೇಷ್ಠ ದಾಸರಾದ ಜಗನ್ನಾಥ ದಾಸರು “ಹರಿಕಥಾಮೃತ ಸಾರದಲ್ಲಿನ “14 ನೇ ಸಂಧಿ ಯಾದ “ಪಿತೃಗಣ” ಸಂಧಿಯಲ್ಲಿ ಬರೆದಿದ್ದಾರೆ .

ಇದರ ಮೂಲ ಪ್ರಾಂಭವಾದದ್ದು ಮಾಹಾಭಾರತದಲ್ಲಿ. ವೇದವ್ಯಾಸರು ಇದರ ವಿವರಣೆಯನ್ನು “ಹರಿವಂಶ” ಪುರಾಣದ , “ವಿಷ್ಣು ಪರ್ವ” ದಲ್ಲಿ 16 ರಿಂದ 24 ಅಧ್ಯಾಯವರೆಗೆ ಹೇಳಿದ್ದಾರೆ .

ಒಮ್ಮೆ ಭೀಷ್ಮಾಚಾರ್ಯರರು ತಂದೆಯಾದ ಶಂತುವಿನ ಶ್ರಾದ್ಧ ಮಾಡಿ ಆಚಾರ್ಯರ ನಿರ್ದೇಶನದಂತೆ ನೆಲಕ್ಕೆ ಪಿಂಡ ಇಡಲು ಮುಂದಾದಾಗ , ಭೂಮಿಯಿಂದ ಆಭರಣ ಸಹಿತ ಕೈಗಳು ಮೇಲೆ ಬಂದವಂತೆ ಆಗ ಭೀಷ್ಮಾಚಾರ್ಯರರು ತಮ್ಮ ತಂದೆಯ ಕೈಗಳನ್ನು ಗುರ್ತಿಸಿದರು , ಅಷ್ಟರಲ್ಲೇ ಅಶರೀರವಾಣಿ ಮೂಲಕ ನಿಮ್ಮ ತಂದೆಯಾದ ಶಂತನು ನಾನು , ಸ್ವತಃಹ ಬಂದಿದ್ದೇನೆ , ಪಿಂಡಗಳನ್ನು ನೆಲಕ್ಕೆ ಇಡದೆ ನನ್ನ ಕೈಗಳಲ್ಲೇ ಕೊಡು ಅಂದಾಗ ,
ಭೀಷ್ಮಾಚಾರ್ಯರರು ಶಾಸ್ತ್ರದ ವಿರುದ್ಧ ನಾನು ಈ ಕೆಲಸ ಮಾಡಲಾರೆ , ನನ್ನನ್ನು ಕ್ಷಮಿಸಿ ಅನ್ನುತ್ತಾನೆ .ಆಗ ಶಂತನು ,
ಭೀಷ್ಮಾಚಾರ್ಯರರಿಗೆ ನಿನ್ನ ಈ ಶ್ರದ್ಧೆಯಿಂದ ಮಾಡಿದ ಶ್ರಾದ್ಧ ನನಗೆ ಬಹಳ ಮೆಚ್ಚಗೆ ಆಯಿತು .ನಾನು ವರಕೋಡಬೇಕೆಂದಿರುವೆ , ಅಂದಾಗ ಭೀಷ್ಮಾಚಾರ್ಯರರು ನನಗೆ ಯಾವ ಮೋಹ , ಲೋಭ ಗಳಿಲ್ಲ , ಆದರೆ ನನಗೆ ಶ್ರಾಧ್ದದ ಹಿಂದಿನ ಉದ್ದೇಶ ಹೇಳಿ ಅನ್ನುತ್ತಾನೆ .ಆಗ ಶಂತನು ಹೇಳಲು ನಾನು ಸಮರ್ಥನಲ್ಲಾ ಇಷ್ಟರಲ್ಲೇಮಾರ್ಕಂಡೇಯ್ಯ ಋಷಿಗಳು ಬರುತ್ತಾರೆ. ಇವರು ಪರಮಾತ್ಮನ ಪ್ರಳಯ ಕಾಲ ನೋಡಿರುವರು , ಜ್ಞಾ ನಿಗಳು , ಅವರಿಗೆ ನಿನ್ನ ಉದ್ದೇಶ ಹೇಳಿ ತಿಳಿದುಕೊ ಎಂದು ಅದೃಶ್ಯನಾಗುತ್ತಾನೆ

ಸ್ವಲ್ಪ ಹೊತ್ತಿನಲ್ಲೇ ಮಾರ್ಕಂಡೇಯ್ಯ ಋಷಿಗಳು ಬಂದರು .ತಮ್ಮ ಮನದ ಇಂಗಿತವನ್ನು ಋಷಿಗಳ ಹತ್ತಿರ ಹೇಳಿದಾಗ , ನನಗೆ ಬ್ರಹ್ಮ ದೇವರು ನಿನ್ನ ಮನದ ಇಂಗಿತ ಹೇಳಿ ಕಳಿಸಿರುವರು ಎಂದು ಹೇಳಿದರು .

#ಶ್ರಾದ್ಧದ_ಏ0ದರೇನು ?

ಪಿತೃ ದೇವತೆಗಳು , ಮೂಲ ಚತುರ್ಮುಖ ಬ್ರಹ್ಮ ದೇವರ ಮಕ್ಕಳು . ದೇವಲೋಕದ ದೇವತೆಗಳು, ಗಂಧರ್ವರು, ಯಕ್ಷರರು, ಕಿನ್ನರರು ಶ್ರದ್ಧೆಯಿಂದ ಅರ್ಚನೆಯನ್ನು ಪಿತೃಗಳ ಅಂತರ್ಯಾಮಿಯಾದ ಪರಮಾತ್ಮನನ್ನು ಪೂಜಿಸುವುದೇ “ಶ್ರಾದ್ಧ” ಎನ್ನುವರು . ಮಾನವರು ಮಾಡಿದಂತಹ ಶ್ರಾದ್ಧದಲ್ಲಿ ಅವರು ಕೊಡತಕ್ಕಂತಹ “ಸ್ವಾಧ್ಧಾ” ವನ್ನು ತಗೆದುಕೊಂಡು ಹೋಗಿ, ತಂದೆ , ತಾತಾ, ಮುತ್ತಾತ , ಅಜ್ಜಿ , ಮುತ್ತಜ್ಜಿ ಇವರಿಗೆ ತಗೆದುಕೊಂಡು ಹೋಗಿ ಮುಟ್ಟಿಸುತ್ತಾರೆ . ಅವರು ಯಾವುದೇ ಯೋನಿಗಳಲ್ಲಿ ಹುಟ್ಟಿದರು , ಅವರು ಹುಟ್ಟಿದ ಯೋನಿಗೆ ಅನುಸಾರವಾಗಿ ಮಾರ್ಪಾಡಿಸಿ ಅನ್ನವನ್ನು ಮುಟ್ಟಿಸುವ ಕಾರ್ಯ ಈ ಪಿತೃ ದೇವತೆಗಳ ಕೆಲಸ . ಇದೆ ಶ್ರಾದ್ಧದ ಅರ್ಥ ಮತ್ತು ಉದ್ದೇಶ .

ಶ್ರಾದ್ಧದಲ್ಲಿಐದುಪ್ರಕಾರಗಳು

1)#ಸಪಿಂಡಿಕರಣಶ್ರಾದ್ಧ :- ಇದು ಮರಣದ 12 ನೇ ದಿನದಲ್ಲಿ ಪಿಂಡದಲ್ಲಿ ಕಾಮ ಮತ್ತು ಕಾಲ ಎಂಬ ದೇವತೆಗಳು ಪ್ರವೇಶ ಪ್ರವೇಶ ಮಾಡುತ್ತಾರೆ . 2) #ನಾಂದಿಶ್ರಾದ್ಧ :-
ಇದು ಮಂಗಳ ಕಾರ್ಯದಲ್ಲಿ ಹಿರಿಯರ ಸ್ಮರಣೆಯಲ್ಲಿ ಮಾಡುವ ಶ್ರಾಧ್ದ. ಸತ್ಯ ಮತ್ತು ವಸು ದೇವತೆಗಳು.
3) #ಇಷ್ಟಶ್ರಾದ್ಧ :- ಜ್ಞಾನಿಗಳು , ಯತಿಗಳು ಬಂದಾಗ ಪಿತೃಗಳಿಗೆ ಉದ್ದೇಶವಾಗಿ ಮಾಡುವ ಶ್ರಾದ್ಧ. ಕ್ರತು ಮತ್ತು ದಕ್ಷ ದೇವತೆಗಳು. 4) #ನೈಮಿತ್ತಿಕಶ್ರಾದ್ಧ :-
ಇದು ಕ್ಷೇತ್ರಗಳಲ್ಲಿ ಮತ್ತು ಪಕ್ಷ ಮಾಸದಲ್ಲಿ ಮಾಡುವ ಶ್ರಾಧ್ದ.ಧೂರಿ ಮತ್ತು ವಿಲೋಚನ ದೇವತೆಗಳು.
5) #ಕಾಲ_ಶ್ರಾದ್ಧ :-
ಪಿತೃಗಳು ಮರಣ ಹೊಂದಿದ ತಿಥಿ ಯನ್ನು, ಪ್ರತಿ ಸಾ0ವತ್ಸರದಲ್ಲಿ ಬರುವ ಅದೇ ತಿಥಿಗೆ ಮಾಡುವಶ್ರಾದ್ಧ .ಪುರೂರವ ಮತ್ತು ಆದ್ರ೯ವ ದೇವತೆಗಳು .

ಮನುಷ್ಯ ತೀರಿ ಹೋದಮೇಲೆ ಅವರ ಸ್ಮರಣೆಯಲ್ಲಿ ಷಣ್ಣವತಿ ಶ್ರಾಧ್ದ ಮಾಡಬೇಕು . “ಷಣ್ಣವತಿ ” ಎಂದರೆ ಸಂಸ್ಕೃತದಲ್ಲಿ 96 ಎಂದರ್ಥ . ಅಂದರೆ ವರ್ಷದಲ್ಲಿ 96 ಶ್ರಾದ್ಧಗಳನ್ನು ಮಾಡಬೇಕು .

ವರ್ಷದಲ್ಲಿ ಬರುವ

*#ಷಣ್ಣವತಿ_ಶ್ರಾದ್ಧಗಳು

1) ಮನ್ವಾದಿಗಳಲ್ಲಿ – 14
2)ಮಹಾಲಯ – 16
3) ಯುಗಾದಿಗಳು – 04
4) ಸಂಕ್ರಮಣ – 12
5) ದರ್ಶಗಳು – 12
6) ವ್ಯತಿಪಾತಗಳು – 13
7) ವೈಧೃತಿಗಳು – 13
8) ತ್ರಿಸ್ರೋಷ್ಟಕಗಳು – 12

ಒಟ್ಟಾರೆಯಾಗಿ ಇವೆ 96 ಷಣ್ಣವತಿ ಶ್ರಾದ್ಧ ಗಳು .
ಆದರೆ ನಾವು ಹಾಗೆ ಮಾಡುವುದಿಲ್ಲ . ಕೇವಲ ವರ್ಷದಲ್ಲಿ ಎರಡು ಶ್ರಾಧ್ದ ಮಾಡುತ್ತೇವೆ .1) ಪ್ರತಿ ಸಂವತ್ಸರದ ತಿಥಿಯಂದು ಮಾಡುವ
“ಕಾಲ್ ಶ್ರಾದ್ಧ ” 2) ಇನ್ನು ಪಕ್ಷಮಾಸದಲ್ಲಿ ಮಾಡುವ ” ಪಿತೃ ಪಕ್ಷ “.

ಇನ್ನು ಪಕ್ಷ ಮಾಸದ ಪೌರಾಣಿಕ ಹಿನ್ನೆಲೆ ತಿಳಿದುಕೊಳ್ಳೋಣ . ಯುದ್ಧದಲ್ಲಿ ಅರ್ಜುನ ಕೈಯಿಂದ ಕರ್ಣನ ಮೃತ್ಯುವಾದಾಗ , ಅವನ ಆತ್ಮ ಸ್ವರ್ಗಕ್ಕೆ ಹೋಗುವಾಗ ಅವನಿಗೆ ಕೇವಲ ಚಿನ್ನ , ಬೆಳ್ಳಿ ಸಿಗುತ್ತೆ ಅನ್ನ ಸಿಗುವದಿಲ್ಲ , ಆಗ ಕರ್ಣನು ನೊಂದುಕೊಂಡು ಯಮಧರ್ಮರಾಯನಿಗೆ ಕೇಳುತ್ತಾನೆ . ನಾನು ಭೂಮಿಯಲ್ಲಿದ್ದಾಗ ಬೇಕಾದಷ್ಟು ದಾನ ಧರ್ಮ ಮಾಡಿರುವೆ ನನಗೇಕೆ ? ಈ ಗತಿ ಎಂದು ಕೇಳಿದಾಗ;ಆಗ ಯಮಧರ್ಮರಾಯ ಹೇಳುತ್ತಾನೆ, ನೀನು ಎಲ್ಲವನ್ನು ದಾನ ಮಾಡಿದ್ದಿಯಾ ಆದರೆ ಅನ್ನದಾನ ಮತ್ತು ಪಿತೃ ಕರ್ಮ ಮಾಡಲಾರದಕ್ಕೆ ಈ ಸ್ಥಿತಿ ನಿನಗೆ ಬಂದಿದೆ ಎಂದು ಹೇಳುತ್ತಾನೆ . ಮಾತ್ತೇನು? ಇದಕ್ಕೆ ಪರಿಹಾರ ಅಂದಾಗ , ನಿನಗೆ ಭಾದ್ರಪದ ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ

( ಮಹಾಲಯ ಅಮಾವಾಸ್ಯೆ) ಸಮಯ ಕೊಡುತ್ತೇನೆ , ಅಷ್ಟರಲ್ಲಿ ನೀನು ಅನ್ನದಾನ , ವಸ್ತ್ರದಾನ ಮಾಡಿ ಮತ್ತು ಪಿತೃ ತರ್ಪಣ ಕೊಟ್ಟು ಬಾ ಆಗ ನಿನಗೆ ಸ್ವರ್ಗದಲ್ಲಿ ಅನ್ನ ಸಿಗುತ್ತೆ ಎಂದು ಹೇಳುತ್ತಾನೆ .ಅದೇ ರೀತಿ ಕರ್ಣನು ಈ ಹದಿನೈದು ದಿನಗಳಲ್ಲಿ ಎಲ್ಲ ಕಾರ್ಯ ಮಾಡಿ ಸ್ವರ್ಗಕ್ಕೆ ಹೋದಾಗ ಅನ್ನ ಸಿಗುತ್ತದೆ .

#ಪಕ್ಷಮಾಸ_ನಿಯಮ .

ಈ ನೈಮಿತ್ತಿಕ ಶ್ರಾಧ್ದದಲ್ಲಿ ಬರುವ ಪಕ್ಷಮಾಸದಲ್ಲಿ ಮಾಡುವ ಶ್ರಾಧ್ದವೆ “ಪಿತೃ ಪಕ್ಷ ” ಅನ್ನುತ್ತಾರೆ . ಇಲ್ಲಿ ಸರ್ವ ಪಿತೃಗಳನ್ನು ಸ್ಮರಿಸಿ ತರ್ಪಣ ಬಿಡುತ್ತಾರೆ . ಇದರ ದೇವತೆ ಧೂರಿ ಮತ್ತು ವಿಲೋಚನ. ಇಲ್ಲಿ ಮೂರು ತಲೆಮಾರಿನ ಪಿತೃಗಳ ಸ್ಮರಣೆ ಮಾಡಿ ಸಾಮುಹಿಕವಾಗಿ ತಿಲ್ ,ಜಲ್, ತರ್ಪಣ , ಪಿಂಡ ಬಿಡುವುದೇ ಪಿತೃ ಪಕ್ಷ ಅಥವಾ ಮಹಾಲಯ ಪಕ್ಷ ಎನ್ನುತ್ತಾರೆ .ಈ ಮೂರು ತಲೆಮಾರಿನವರು ಆತ್ಮಗಳು ಇದು ಸೂಕ್ಷ್ಮ ಶರೀರ ಇರುವದರಿಂದ ಭೂಮಿ ಮತ್ತು ಸ್ವರ್ಗ ದ ಮಧ್ಯದಲ್ಲಿ ಇರುತ್ತಾರೆ . ಈ ಶ್ರಾದ್ಧ ಕಾಲದಲ್ಲಿ ಜನಾರ್ಧನ ರೂಪಿಯಾದ ಪರಮಾತ್ಮನು 3555 ರೂಪಗಳಲ್ಲಿ ಇರುತ್ತಾನೆ .

ಹಾಗೆ ಪರಮಾತ್ಮನ ಪಂಚ ರೂಪಗಳಾದ ಅನಿರುಧ್ದ , ಪ್ರದ್ಯುಮ್ನ , ಸಂಕರ್ಷಣ , ವಾಸುದೇವ , ನಾರಾಯಣ ಹೀಗೆ ಐದು ರೂಪಗಳಲ್ಲಿ ಇರುತ್ತಾನೆ .

ಇನ್ನು ಜಗನ್ನಾಥ ದಾಸರು ಹರಿಕಥಾಮೃತಸಾರ “ಭೋಜನ ಸಂಧಿಯಲ್ಲಿನ 21 ನೇ ನುಡಿಯಲ್ಲಿ ಹೇಳಿರುವಂತೆ ಶ್ರಾಧ್ದಗತ ಭಗವದ್ರೂಪಗಳಲ್ಲಿ “ಅನಿರುಧ್ದ ರೂಪಿಯಾದ ಪರಮಾತ್ಮನು ತ್ರಿನವತಿ (93) ರೂಪಗಳಿಂದ ( ವಸುಗಳು – 08 ರೂಪಗಳು, ರುದ್ರರಲ್ಲಿ – 11ರೂಪಗಳು,, ಆದಿತ್ಯರಲ್ಲಿ – 12 ರೂಪ ಗಳು ಹೀಗೆ ಕೂಡಿಸಿ ಒಟ್ಟಾರೆ 31 ರೂಪಗಳನ್ನು ಆಗುತ್ತದೆ . ಅನಿರುಧ್ದ , ಪ್ರದ್ಯುಮ್ನ , ಸಂಕರ್ಷಣ ಎಂಬ 3 ನಾಮಗಳಿಂದ ಗುಣಿಸಿದಾಗ 93 ರೂಪಗಳು ಆಗುತ್ತದೆ .) ಇದಕ್ಕೆ ತ್ರಿನವತಿ ರೂಪ ಎನ್ನುವರು. ಸಂಸ್ಕೃತದಲ್ಲಿ ತ್ರಿನವತಿ ಎಂದರೆ 93 ಎಂದರ್ಥ . ಶ್ರಾಧ್ದ ಮಾಡುವ ಯಜಮಾನನಲ್ಲಿ ಈ ವಸು,ಆದಿತ್ಯ, ರುದ್ರರ ಮೂಲಕ ಪಿತೃಗಳಿಗೆ ಪ್ರದ್ಯುಮ್ನ ರೂಪದಿಂದ ಅನ್ನನಾಗಿರುತ್ತಾನೆ .
ಸಂಕರ್ಷಣ ರೂಪದಿಂದ ದೇವಭಾಗ ಮತ್ತು ಪಿತೃಭಾಗ ಎಂದು ವಿಭಾಗ ಮಾಡುತ್ತಾನೆ . ನಿತ್ಯಾನಂದನಾದ ಭಗವಂತನು ತುರ್ಯ ನಾಮಕನಾಗಿ ವಾಸುದೇವನ ಮೂಲಕ ತಾನು ಉಂಡು , ಸಕಲರಿಗೂ ಉಣಿಸುವನು .

ಇನ್ನು ಭೋಜನ ಸಂಧಿಯ 22 ನೇ ನುಡಿಯಲ್ಲಿ ಹೇಳಿರುವ ಪ್ರಕಾರ “ಷಣ್ಣವತಿ ” ನಾಮಕನಾಗಿ ವಸು , ಮುಕ್ಕಣ್ಣ(ರುದ್ರ), ಭಾಸ್ಕರಲ್ಲಿ ನಿಂತು ತನಗೆ ಶರಣು ಬಂದವರ ಜನರನ್ನು ನಿತ್ಯದಲ್ಲಿ ಕಾಪಾಡ್ತಾ , ಅವರ ಪುಣ್ಯ ಕರ್ಮ ಸ್ವೀಕರಿಸಿ ಪಿತೃಗಳಿಗೆ ಸುಖವ ನೀಡುತ್ತಾನೆ .

*ಭಗವಂತನ ಷಣ್ಣವತಿ(96) ರೂಪಗಳು :
ವಸುಗಳು 8 , ಏಕಾದಶ ರುದ್ರರು 11,
ದ್ವಾದಶ ಆದಿತ್ಯರು 12 , ಹಾಗೆಯೇ ಒಟ್ಟಾರೆಯಾಗಿ ಕೂಡಿಸಿದಾಗ 31 ರೂಪಗಳನ್ನು , ವೈಕಾರಿಕ , ತೈಜಸ , ತಾಮಸ , ಎಂಬ ಗುಣಗಳಿಂದ ಗುಣಿಸಿದಾಗ 93 ಬರುತ್ತದೆ , ಮತ್ತೆ ಈ ಮೇಲಿನ 3 ಗುಣಗಳು ಕೂಡಿಸಿದಾಗ ಷಣ್ಣವತಿ(96) ಆಗುತ್ತದೆ . ಹೀಗೆ ಭಗವಂತನನ್ನು ಚಿಂತಿಸಬೇಕು .

ಹೀಗೆ ಸಪ್ತಾನ್ನಗಳಾದ ( 7 ತರಹದ ಅನ್ನ )
ಮನಸ್ಸು , ವಾಕ್ , ಪ್ರಾಣ , ಬಲಿ , ಹೋಮ , ಹಾಲು,ಅನ್ನ ಇವೆ ಸಪ್ತಾನ್ನಗಳು .
1* )”ಸ್ವಾಹಾ ಮಾಯಾಪತಿ ” ವಾಸುದೇವ ಅನ್ನ ಕಲ್ಪಿಸಿ ದೇವತೆಗಳಿಗೆ ಬಡಿಸುವನು.
2 ) ” ಸ್ವಾಧ್ಧಾ ಜಯಾಪತಿ ಸಂಕರುಷಣ ಅನ್ನ ಕಲ್ಪಿಸಿ ಪಿತೃಗಳಿಗೆ ತೃಪ್ತಿ ಪಡಿಸುತ್ತಾನೆ.
3 ) ಕೃತಿ ಪತಿ ಪ್ರದ್ಯುಮ್ನ ಚತುರ್ವಿಧ ರಸಗಳಲ್ಲಿ ಅನ್ನ ಕಲ್ಪಿಸಿ ಮನುಷ್ಯರಿಗೆ ತೃಪ್ತಿ
ಪಡಿಸುವನು .
4 ) ಶಾಂತಿ ಪತಿ ಅನಿರುಧ್ದನು ಅನ್ನ ಕಲ್ಪಿಸಿ ಪಶುಗಳಿಗೆ ತೃಪ್ತಿ ಪಡಿಸುವನು .
5 ) ಮಾಯಾಪತಿ ವಾಸುದೇವನಿಂದ
ಈ ಸಪ್ತಾನ್ನಗಳ ಮೂಲಕ ತಾನು ಉಂಡು ಸಕಲರಿಗೂ ಉಣಿಸುವನು .

ಹಾಗೆಯೇ ಈ ಹದಿನೈದು ದಿನಗಳಲ್ಲಿ ಮುತೈದೆ ತೀರಿ ಹೋದಲ್ಲಿ ನವಮಿ ತಿಥಿಯಂದು ” *ಅವಿಧವಾ ನವಮಿ* ” ಅಂತ ವಂಶದಲ್ಲಿ ಯತಿ ಆಗಿ ಹೋದವರಿಗೆ ದ್ವಾದಶಿ ಅಂದು ” *ಯತಿ ದ್ವಾದಶಿ* “ಅಂತಾ ಅಪಘಾತಗಳಲ್ಲಿ ತೀರಿ ಹೋದವರಿಗೆ ಚತುರ್ದಶಿ ತಿಥಿಯಲ್ಲಿ” *ಘಾತ ಚತುರ್ದಶಿ* ” ತರ್ಪಣ ನೀಡಬೇಕಾಗುತ್ತದೆ . ಈ ಮಾಸದೊಳೊಗೆ ಅನಾನುಕೂಲತೆಯಿಂದ ಆಚರಿಸಲಾಗದಿದ್ದರೆ ತುಲಾ ಮಾಸ ಮುಗಿಯುವದೊರೊಳಗೆ ಆಚರಿಸಬೇಕು .

ಹೀಗೆ ಸರ್ವಾಂತರ್ಯಾಮಿಯಾದ ಪರಮಾತ್ಮನು ಎಲ್ಲದರಲ್ಲೂ ಇದ್ದು ಕಾರ್ಯ ಮಾಡಿಸುವನು . ಅವರಅವರ ಸುಕರ್ಮವನ್ನು ಸ್ವೀಕರಿಸಿ ಸಕಲ ಜೀವರಾಶಿಗಳಿಗೂ ಮತ್ತು ಪಿತೃಗಳಿಗೂ,ಸುಖವಿನಿತ್ತು ಎಲ್ಲ ಕಾಲದಲ್ಲಿಯೂ ಕಾರುಣ್ಯ ಸಾಗರನಾದ ಪರಮಾತ್ಮಾ ಕಾಯುತ್ತಿರುವನು .

#ಶ್ರೀಕೃಷ್ಣಾರ್ಪಣಮಸ್ತು


Share