MP ಕವನ ಸಂಗ್ರಹ : ವಿಶ್ವ ದಾದಿಯರ ದಿನಾಚರಣೆ ವಿಶೇಷ “ದೀಪ ಧಾರಿಣಿ ” – ಕವಿಯಿತ್ರಿ ಆಶಾಲತ

75
Share

“ವಿಶ್ವ ದಾದಿಯರ ದಿನಕ್ಕಾಗಿ “

(ಫ್ಲಾರೆನ್ಸ್ ನೈಟಿoಗೆಲ್ ಜನುಮ ದಿನಕ್ಕಾಗಿ )

“ದೀಪ ಧಾರಿಣಿ “

ಸ್ಮರಿಸೋಣ ಎಲ್ಲರು ಸ್ಮರಿಸೋಣ
ಒಮ್ಮನದಿಂದ ಸ್ಮರಿಸೋಣ
ನಿರಂತರ ರೋಗಿಗಳ ಸೇವೆಗೈದು
ಜಗದ್ವಿಖ್ಯಾತಿ ಪಡೆದ ನಿಸ್ವಾರ್ಥ ಜೀವಿಯ ಒಮ್ಮನದಿಂದ ಸ್ಮರಿಸೋಣ
ನಿಮ್ಮ ಬದುಕಳಿದು ಶತಮಾನಗಳು ಕಳೆದರೂ
ನಿಮ್ಮ ಸೇವಾ ಕೈಂಕರ್ಯ ದಿಂದ ಇಂದಿಗೂ ಜೀವಂತಿಕೆಯಿಂದಿರುವಿರಿ
ನಮ್ಮ ನಡುವೆ ||1||

ಸಿರಿವಂತ ಕುಟುಂಬದಲ್ಲಿ ಜನಿಸಿದರು
ಬುದ್ಧ ನಂತೆ ಎಲ್ಲಾ ವೈಭೋಗಗಳನ್ನು ತ್ಯೆಜಿಸಿ ಸರ್ವಸಂಗ ಪರೀತ್ಯಾಗಿ ಯಾಗಿ
ಅವಿರತ ರೋಗಿಗಳ ಶುಶ್ರುಷೆ ಮಾಡಿದ ಮಾತೃಸ್ವರೂಪಿನಣಿಯ
ಇಡೀ ಜಗತ್ತಿಗೆ ವಿಶ್ವಭಾತೃತ್ವದ ಸಂದೇಶ ಸಾರಿದ ಜಗದ ಸೋದರಿಯ
ಯುದ್ಧದಲ್ಲಿ ಹೋರಾಡಿ ಗಾಯಗೊಂಡ ಯೋಧರ ಪಾಲಿನ “ಶುಶ್ರುಷಾ ದೇವತೆ”ಯ
ಒಮ್ಮನದಿಂದ ಸ್ಮರಿಸೋಣ ||2||

ತನ್ನ ಇಡೀ ಜೀವನವನ್ನೇ ದಾದಿ ಯಾಗಿ ಸೇವೆಗೈಯಲು ಮುಡು ಪಾಗಿಟ್ಟ ಮಾನವತೆಯ ಪ್ರತಿರೂಪವ
ಹೆತ್ತವರ ವಿರೋಧವನ್ನು ಲೆಕ್ಕಿಸದೆ
ಸಮರದಲ್ಲಿ ಹೋರಾಡಿ ಜರ್ಜರಿತರಾದ ಸೇನಾನಿಗಳ ಹೆತ್ತಮ್ಮನಂತೆ ಆರೈಕೆ ಮಾಡಿದ
ಮಾತೃಸ್ವರೂಪಿಣಿಯ
ಆಧುನಿಕ ನರ್ಸಿಂಗ್ ಶಿಕ್ಷಣ ಪ್ರಗತಿಗೆ
ತಮ್ಮದೇ ಆದ ಕೊಡುಗೆ ನೀಡಿದ ಉದಾತ್ತ ಜೀವಿಯ
ಒಮ್ಮನದಿಂದ ಸ್ಮರಿಸೋಣ ||3||

ಪುರುಷ ಪ್ರಧಾನ ಸಮಾಜದಲ್ಲಿ
ಮಹಿಳೆಯರಿಗೆ “ದಾದಿವೃತ್ತಿಗೆ ” ತಳಪಾಯ ಹಾಕಿದ ಮೇರುವ್ಯಕ್ತಿತ್ವವ
ತಮ್ಮ ‘ಮಾನವೀಯತೆ’ ‘ಮಾತೃತ್ವದ’
ಅನನ್ಯ ಸೇವೆಯಿಂದ
ವಿಶ್ವದಾದ್ಯಂತ ಪ್ರಖ್ಯಾತಿ ಪಡೆದ ಜಗದ ಕುವರಿಯ ಒಮ್ಮನದಿಂದ
ಸ್ಮರಿಸೋಣ
ಶುಶ್ರುಷಾ ವಿಭಾಗದಲ್ಲಿ ವಿಶಿಷ್ಟ ಸೇವೆಗೈದ ದಾದಿಯರಿಗೆ ಪ್ರಧಾನ ಮಾಡುವರು” ರಾಷ್ಟ್ರೀಯ “ಫ್ಲಾರೆನ್ಸ್ ನೈಟಿoಗೆಲ್ ಪ್ರಶಸ್ತಿಯನ್ನು “
ನಿಮ್ಮ ಜನುಮ ದಿನವನ್ನು ಆಚರಿಸುತ್ತಿರುವರು ಪ್ರತಿವರ್ಷ “ವಿಶ್ವ ದಾದಿಯರ ದಿನ”ವಾಗಿ ||4||

ರಾತ್ರಿ ಇಡೀ ದೀಪವಿಡಿದು ರೋಗಿಗಳ ಸೇವೆಗೈದು “ದೀಪ ಧಾರಿಣಿಯೆಂದು ವಿಶ್ವವಿಖ್ಯಾತಿ ಯಾಗಿರುವಿರಿ
ನಿಮ್ಮ ತ್ಯಾಗದ ಬದುಕಿಗೆ ಇಡೀ ಜಗವೇ ನೀಡಿದೆ ಅಮೋಘ ಕೊಡುಗೆಯನ್ನು
ನಿಮ್ಮ ನಡೆ-ನುಡಿಗಳು, ನಿಸ್ವಾರ್ಥ ಬದುಕು ಸರ್ವರಿಗೂ ಆದರ್ಶಪ್ರಾಯ
ನಿಮ್ಮ ಕೀರ್ತಿ, ಸಾಧನೆಗಳು ಅಂದಿಗೂ, ಇಂದಿಗೂ, ಎಂದೆಂದಿಗೂ ಚಿರಸ್ಮರಣೀಯವಾಗಿ ಉಳಿಯುವುವು ಜನ ಮಾನಸದಲ್ಲಿ
ಸ್ಮರಿಸೋಣ ಎಲ್ಲರೂ ಸ್ಮರಿಸೋಣ
ಒಮ್ಮನದಿಂದ ಸ್ಮರಿಸೋಣ ||5!||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share