MP ಕವನ ಸಂಗ್ರಹ : ಸ್ವಾತಂತ್ರೋತ್ಸವ ವಿಶೇಷ – ಯೋಧರಿಗೊಂದು ನಮನ

ಯೋಧರಿಗೊಂದು ನಮನ

ನಮಿಸೋಣ ಎಲ್ಲರೂ ನಮಿಸೋಣ
ಒಮ್ಮನದಿಂದ ನಮಿಸೋಣ
ಭಾರತಾಂಬೆಯ ಹೆಮ್ಮೆಯ ಸುಪುತ್ರರ ನಮ್ಮ ನಾಡ ಸಂರಕ್ಷಕರ
ದೇಶ ಕಾಯ್ವ ದೈವಗಳ ಒಮ್ಮನದಿಂದ ನಮಿಸೋಣ ||1||

ಹಗಲೆನ್ನದ, ಇರುಳೆನ್ನದೆ ಸಮಯದ
ಪರಿವೆ ಇಲ್ಲದೆ, ಸುರಿವ ಮಳೆಯಲ್ಲಿ
ಕೊರೆವಚಳಿಯಲ್ಲಿ, ಬಿಸಿಲು, ಗಾಳಿಗಳ ಲೆಕ್ಕಿಸದೆ, ಶತ್ರುಗಳ ದಾಳಿಗೆ ಅಂಜದೆ, ಅಳುಕದೆ
ದೇಶದ ಹಿತಕ್ಕಾಗಿ ತನ್ನ ಕುಟುಂಬದ
ಹಿತವ ಮರೆತು ನಾಡ ರಕ್ಷಣೆಗಾಗಿ
ಅಹರ್ನಿಷಿ ದುಡಿವ ವೀರ ಯೋಧರ
ಒಮ್ಮನದಿಂದ ನಮಿಸೋಣ ||2||

ಶಿಸ್ತು, ಶೌರ್ಯ, ನಿಷ್ಠೆಗೆ ಹೆಸರಾದ
ಪ್ರಾಮಾಣಿಕತೆ, ಸಹನೆ, ತಾಳ್ಮೆಗಳ ಪ್ರತಿರೂಪವಾದ
ಪ್ರಕೃತಿ ವಿಕೋಪಗಳಿಗೆ ಮಣಿಯದ
ದೇಶದ ಒಳಿತಿಗಾಗಿ ತನ್ನ ಇಡೀ ಬದುಕನ್ನೇ ಮುಡಿಪಾಗಿಡುವ
ಕೆಚ್ಚೆದೆಯ ಕಲಿ ವೀರರ ಒಮ್ಮನದಿಂದ ನಮಿಸೋಣ ||3||

ಯೋಧರೆ ನಮ್ಮ ದೇಶದ ಆಸ್ತಿ,
ಯೋಧರೆ ನಮ್ಮ ದೇಶದ ಶಕ್ತಿ
ಯೋಧರಿಲ್ಲದ ದೇಶವಿಲ್ಲ
ಯೋಧರಿಲ್ಲದೆ ದೇಶಕ್ಕೆ ಉಳಿಗಾಲ ವಿಲ್ಲ, ತಾಯ್ನಾಲಕ್ಕಾಗಿ, ತಾಯ್ನಾಡಿಗಾಗಿ ನಿಸ್ವಾರ್ಥವಾಗಿ ಸೇವೆಗೈವ ತ್ಯಾಗಜೀವಿಗಳ ಒಮ್ಮನದಿಂದ ನಮಿಸೋಣ ||4||

ದೇಶದ ಶಾಂತಿ, ಸೌಹಾರ್ದವ ಕಾಪಾಡುವ
ದೇಶದ ಘನತೆ ಗೌರವವ ಎತ್ತಿ ಹಿಡಿಯುವ
ತಮ್ಮ ಪ್ರಾಣವನ್ನು ಪಣಕ್ಕಿಟ್ಟು
ದೇಹದಲ್ಲಿ ಕೊನೆಉಸಿರಿರುವ
ತನಕ ಅವಿರತ ಹೋರಾಟ ನಡೆಸುವ ಅನನ್ಯ ಜೀವಗಳ
“ದೇಶ ಸೇವೆಯೇ ಈಶ ಸೇವೆ” ಯೆಂದು ಬಾಳ್ವೆ ನಡೆಸುವ ಯೋಧರನ್ನು ರಕ್ಷಿಸೋಣ
ಸಂರಕ್ಷಿಸೋಣ ||5||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ