Puc ಫಲಿತಾಂಶ ಪ್ರಕಟ: ಉಡುಪಿಗೆ ಮೊದಲನೇ ಸ್ಥಾನ ಒಟ್ಟಾರೆ ಬಾಲಕಿಯರ ಮೇಲುಗೈ

2020 ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಮೊದಲು ಫಲಿತಾಂಶ ನೀಡುತ್ತಿರುವುದಾಗಿ ಸಚಿವರು ತಿಳಿಸಿದರು. ಪಿಯುಸಿ ಪರೀಕ್ಷೆ ಫಲಿತಾಂಶ ಕಿರುಹೊತ್ತಿಗೆಯನ್ನು ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ದ್ವಿತೀಯ ಪಿಯುಸಿ ಯಾವುದೇ ಹೆಚ್ಚು ಕಡಿಮೆಯಾಗದೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದು ಒಂದು ಹೆಮ್ಮೆಯಾಗಿದೆ ಎಂದು ಅವರು ತಿಳಿಸಿದರು.
70 ಮೌಲ್ಯಮಾಪನ ಕೇಂದ್ರಗಳಲ್ಲಿ ಪರೀಕ್ಷೆಯ ಮೌಲ್ಯಮಾಪನ 11970 ಶಿಕ್ಷಕರಿಂದ ನಡೆದಿದೆ
ಎಂದು ಹೇಳಲಾಗಿದೆ.3.84,947 ಪಾಸಾಗಿದ್ದಾರೆ.69.20 % ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳು 6748 ಪಾಸಾಗಿದ್ದಾರೆ. ಈ ವರ್ಷ ಸೈನ್ಸ್ ಭಾಗದಲ್ಲಿ 76.2%
ಕಾಮರ್ಸ್ ಭಾಗದಲ್ಲಿ 65.52.%
ಆರ್ಟ್ಸ್ ಭಾಗದಲ್ಲಿ 41%. ಈ ವಿಭಾಗದಲ್ಲಿ ಕಡಿಮೆಯಾಗಿದೆ ಪಲಿತಾಂಶ ಎಂದು ಅವರು ಹೇಳಿದರು

ಬಾಲಕಿಯರು 68.73%
ಪರೀಕ್ಷೆಯಲ್ಲಿ ಈ ಬಾರಿಯೂ ಹೆಣ್ಣುಮಕ್ಕಳು ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗಿದೆ. ಪಿಯುಸಿ ಪರೀಕ್ಷೆ ಪ್ರಕ್ರಿಯೆ ನಂಬರಿನಿಂದ ಆರಂಭವಾಗಿದ್ದು ಹಾಲ್ಟಿಕೆಟ್ ವಿತರಣೆಯಲ್ಲಿ ಯಾವುದೇ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿತ್ತು
ಪಿಯುಸಿ ಪರೀಕ್ಷೆಯನ್ನು 6.7 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು ಎಂದು ತಿಳಿಸಲಾಗಿದೆ . ಅನೇಕ ಸವಾಲುಗಳನ್ನು ಎದುರಿಸಿ ಪರಿಕ್ಷಾ ಮೌಲ್ಯಮಾಪನ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಪಿಯುಸಿ ಫಲಿತಾಂಶದ ವಿವರ ಉಡುಪಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದರೆ ವಿಜಯಪುರ ಕೊನೆಯ ಸ್ಥಾನ ಪಡೆದಿದೆ ಉಡುಪಿ ಒಂದು ದಕ್ಷಿಣಕನ್ನಡ ಒಂದು ಕೊಡಗು 2 ಉತ್ತರ ಕನ್ನಡ ಮೂರು ಚಿಕ್ಕಮಗಳೂರು 4 ಬೆಂಗಳೂರು ದಕ್ಷಿಣ 5 ಸ್ಥಾನದಲ್ಲಿದೆ ಎಂದು ಹೇಳಲಾಗಿದೆ.