ಸಮುದಾಯದ ಸಂಘಟನೆಗೆ ಯುವಕರು ಮುಂದಾಗಬೇಕು

Share

 

ಸಮುದಾಯದ ಸಂಘಟನೆಗೆ ಯುವಕರು ಮುಂದಾಗಬೇಕು ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ

ವಿಪ್ರ ಸಮುದಾಯದ ಸಂಘಟನೆಗೆ ತಮ್ಮೊಳಗಿನ ಬೇದ ಭಾವಗಳನ್ನು ಮರೆತು ಎಲ್ಲರೂ ಸಮಾನ ಮನಸ್ಕರಾಗಬೇಕು ಹಾಗೂ ವಿಪ್ರ ಯುವಕರು ಸಂಘಟಕರಾಗಿ ಹೆಚ್ಚು ಸಮಯ ತೊಡಗಿಸಿಕೊಳ್ಳಬೇಕು ಎಂದು ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಕಿವಿಮಾತು ಹೇಳಿದರು

ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಗುರುವಾರ ನಡೆದ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷರಾಗಿ ನೇಮಕರಾದ ಮುಳ್ಳೂರು ಗುರುಪ್ರಸಾದ್ ರವರಿಗೆ ಅಭಿನಂದನೆ ಸಲ್ಲಿಸಿ ನಂತರ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನೆಯ ಸಭೆ ಉದ್ದೇಶಿಸಿ ಮಾತನಾಡಿ ನಂತರ ಆಶೀರ್ವಚನ ನೀಡಿದರು

ನಂತರ ಮಾತನಾಡಿದ
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ದೀಪದಿಂದ ದೀಪ ಹಚ್ಚುವ ಕೆಲಸವಾಗಬೇಕು. ಸಂಘಟಕ
ಉತ್ತಮ‌ ಸಂಘಟನೆಗೆ ದೊರೆತ ಅರ್ಹ ಪ್ರತಿಫಲ. ಬ್ರಾಹ್ಮಣ ಧರ್ಮ‌ಸಹಾಯ ಸಭಾದ ಮೂಲಕ ಆರಂಭಗೊಂಡ ಸಂಘಟನೆ ಬಿ.ಎನ್.ವಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ನಡೆದ ಸಂಘಟನೆ ಮೈಸೂರು ವಲಯ ಸಮಾವೇಶ, ಜಿಲ್ಲಾ ಸಮಾವೇಶ, ಸಮಾವೇಶದಿಂದಾಗಿ, ಸರ್ಕಾರದಿಂದ ಉತ್ತಮ‌ ನಿವೇಶನ ದೊರಕಿತು, ತ್ರಿಮತಸ್ಥರು ಒಂದಾಗಬೇಕು ಹಾಗೂ ಬೇರೆಯವರಿಗೆ ಒಗ್ಗಟ್ಟಿನ ಕಾರ್ಯ ತಂತ್ರ ದಾರಿ ಹೇಳಿಕೊಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಸರಿಯಾದ ನಾಯಕತ್ವ ದೊರಕದ ಕಾರಣ ರಾಷ್ಟ್ರಮಟ್ಟದಲ್ಲಿ ಯಶಸ್ವಿಯಾಗಲಿಲ್ಲ, ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನೆಯ ಕೆಲಸವಾಗಬೇಕು ಎಂದು ಹೇಳಿದರು

ನಂತರ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನo ಶ್ರೀಕಂಠ ಕುಮಾರ್ ಒಂದು ಸಂಘಟನೆ ಸಶಕ್ತವಾಗಿ ನಡೆಯಲು ಪದಾಧಿಕಾರಿಗಳು ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು

ಕಾರ್ಯಕ್ರಮಕ್ಕೂ ಮೊದಲು ಇತ್ತೀಚಿಗೆ ನಿಧನರಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಿರಿಯಣ್ಣ ಸ್ವಾಮಿ ರವರಿಗೆ ಸಂತಾಪ ಸಲ್ಲಿಸಲಾಯಿತು

ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಬ್ರಾಹ್ಮಣ ಹಿರಿಯ ಮುಖಂಡರಾದ ಕೆ.ರಘುರಾಂ ವಾಜಪೇಯಿ, ಹೊಯ್ಸಳ ಕರ್ನಾಟಕದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ
ನO ಶ್ರೀಕಂಠ ಕುಮಾರ್,
ಎಂ ಆರ್ ಬಾಲಕೃಷ್ಣ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ‌ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ವೆಂಕಟ ಸುಬ್ಬಯ್ಯ, ಹಿರಿಯ ಪತ್ರಕರ್ತರಾದ ರಂಗನಾಥ್, ಸಚಿಂದ್ರ, ಚಕ್ರಪಾಣಿ, ಶ್ರೀಕಾಂತ್ ಕಶ್ಯಪ್,
ಹೊಯ್ಸಳ ಕರ್ನಾಟಕದ ಸಹಕಾರ್ಯದರ್ಶಿ ವಿಜಯಕುಮಾರ್, ನಿರ್ದೇಶಕರಾದ ರಂಗನಾಥ್, ಸುಧೀಂದ್ರ, ಅಶ್ವಿನ್, ಎಸ್ ಎನ್ ರಾಜೇಶ್, ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು


Share