ನೇಪಾಳ: ವಿಮಾನ ಪತನ 72 ಪ್ರಯಾಣಿಕರ ದುರ್ಮರಣ ಶಂಕೆ

371
Share

ಕಟಮಂಡು- ಕಟಮಂಡು ಇಂದ ಪೋಕರಾಗೆ   ತೆರಳುತ್ತಿದ್ದ ಪ್ರಯಾಣಿಕ ವಿಮಾನ ಒಂದು ದುರಂತಕ್ಕೆ ಈಡಾಗಿ ಪ್ರಯಾಣಿಸುತ್ತಿದ್ದ ಎಲ್ಲಾ 72 ಜನರು ಅಸುನಿಗಿರಬಹುದೆಂದು ಶಂಕಿಸಲಾಗಿದೆ.

 ಕಟಮಂಡು ಇಂದ  ಪೋಕರಾಗೆ ತೆರಳುತ್ತಿದ್ದ ವಿಮಾನ ಪೋಕರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸೇಟಿ ನದಿಯ ಕಣಿವೆ ಭಾಗದಲ್ಲಿ ಪತನಗೊಂಡಿದ್ದು ಮಿಲ್ಟರಿ ಮತ್ತು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು ಇದುವರೆಗೆ 35ಕ್ಕೂ ಹೆಚ್ಚು ದೇಹಗಳನ್ನು ಹೊರತೆಗೆಯಲಾಗಿದೆ.
 ದಟ್ಟ ಮೋಡ ಹಾಗೂ ಹವಾಮಾನ ವೈಪಿರಿತ್ಯದಿಂದಾಗಿ ವಿಮಾನ  ಪತನಗೊಂಡಿರಬಹುದೆಂದು ಪ್ರಾಥಮಿಕ ವರದಿಗಳು ತಿಳಿಸಿವೆ, 68 ಪ್ರಯಾಣಿಕರು ಹಾಗೂ ನಾಲ್ಕು ಸಿಬ್ಬಂದಿ ವರ್ಗದವರು ಇದ್ದ ಈ ವಿಮಾನದಲ್ಲಿ ನಾಲ್ವರು ಭಾರತದ ಪ್ರಯಾಣಿಕರು ಸಹ ಇದ್ದರೆಂದು ಹೇಳಲಾಗಿದೆ.
ಯತಿ ಏರ್ಲೈನ್ಸ್ ಗೆ ಸೇರಿದ ATR-72 ವಿಮಾನವು ದುರಂತಕ್ಕೆ ಈಡಾಗಿದ್ದು ದಟ್ಟ ಹೊಗೆ ಆವರಿಸಿ ಹೊತ್ತಿ ಉರಿಯುತ್ತಿದೆ ಇದುವರೆಗೆ ದೊರೆತಿರುವ ಎಲ್ಲಾ ದೇಹಗಳು ಗುರುತಿಸಲಾಗದಷ್ಟು ಕರಕಲಾಗಿವೆ ಎಂದು ಹೇಳಲಾಗಿದೆ. ದುರಂತದ ನಿಖರ ಮಾಹಿತಿ ನೀಡಬಲ್ಲ ವಿಮಾನದ ಬ್ಲಾಕ್ ಬಾಕ್ಸ್ ಗೆ ಸಹ ಶೋಧನಾ ಕಾರ್ಯ ತೀವ್ರಗೊಂಡಿದೆ.

Share