ಅಂಗಾಂಗ ದಾನ ಮಾಡಿ 5 ಜನರ ಪ್ರಾಣ ಉಳಿಸಿದ ಮಹಿಳೆ

402
Share

 

 

ಮೈಸೂರು Nagamma’s organs donated saving 5 lives
~ 2 Kidneys, 1 Liver, Heart Valves and Corneas donated
ಮೈಸೂರು,ನಾಗಮ್ಮ ಅವರ ಅಂಗಾಂಗ ದಾನ ಮಾಡಿ 5 ಜನರ ಪ್ರಾಣ ಉಳಿಸಿಲಾಯಿತು
~ 2 ಮೂತ್ರಪಿಂಡಗಳು, 1 ಯಕೃತ್ತು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ-ನಾಗಮ್ಮ ಅವರ ಅಂಗಾಂಗ ದಾನ ಮಾಡಿ 5 ಜನರ ಪ್ರಾಣ ಉಳಿಸಿಲಾಯಿತು ಎಂದು ಮೈಸೂರಿನ ಅಪೋಲೊ ಆಸ್ಪತ್ರೆ ಪ್ರಕಟಣೆ ತಿಳಿಸಿದೆ

 – 2 ಮೂತ್ರಪಿಂಡಗಳು , 1 ಯಕೃತ್ತು , ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ ಮೈಸೂರು , ಜನವರಿ 16 , 2022 : 45 ವರ್ಷ ವಯಸ್ಸಿನ ಶ್ರೀಮತಿ ನಾಗಮ್ಮ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆಗಾಗಿ ಜನವರಿ 13 ರ ಮಧ್ಯರಾತ್ರಿ 2.15 am ಕ್ಕೆ ಗಂಭೀರ ಸ್ಥಿತಿಯಲ್ಲಿ ಅಪೋಲೊ ಬಿ.ಜಿ. ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು .. ನಾಗಮ್ಮ ‘ ಬ್ರೌನ್ ಟುಮೌರ್ ‘ ನಿಂದ ಬಳಲುತ್ತಿದ್ದರು ಮತ್ತು ಜೀವ ಬೆಂಬಲ ಮತ್ತು ತೀವ್ರ ನಿಗಾಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು . ಶ್ರೀಮತಿ ನಾಗಮ್ಮ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿದ್ದಾಗ ಎರಡು ದಿನಗಳ ಕಾಲ ಲೈಫ್ ಸಪೋರ್ಟ್‌ನಲ್ಲಿ ಇರಿಸಲಾಗಿತ್ತು . ಮೂರನೇ ದಿನ ಜನವರಿ 15 ರಂದು ಬೆಳಗ್ಗೆ 11.45 ಗೆ , ಮಾನವ ಅಂಗಾಂಗ ಕಸಿ ಕಾಯಿದೆ 1994 ರ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಮೆದುಳಿನ ನಿಷ್ಕ್ರಿಯ ” ಬೆನ್ ಡೆಡ್ ” ಯಂದು ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯ ಪ್ಯಾನೆಲ್ಲಿಸ್ಟ್ ನಲ್ಲಿರುವ ವೈದ್ಯರು ಘೋಷಿಸಿದರು . ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯು , ಈಗ ಮಲ್ಟಿ ಆರ್ಗನ್ ಟ್ರಾನ್ಸ್ ಪ್ಲಾಂಟ್ ಪರವಾನಗಿ ಪಡೆದ ಕೇಂದ್ರವಾಗಿದೆ . ಈ ಘಟನೆಯ ಮೊದಲು ಶ್ರೀಮತಿ ನಾಗಮ್ಮರವರು ಆರೋಗ್ಯವಾಗಿದ್ದರು ಮತ್ತು ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತ ಪಡಿಸಲಾಯಿತು . ನಿಗದಿತ ಪ್ರೋಟೋಕಾಲ್ಗಳ ಪುಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು , ಈ ಸಂದರ್ಭದಲ್ಲಿ ಶ್ರೀಮತಿ ನಾಗಮ್ಮರವರ ಗಂಡ ಮತ್ತು ಮಕ್ಕಳು ಅವರ ಅಂಗಾಂಗ ದಾನ ಮಾಡಲು ಮುಂದೆ ಬಂದರು . ಅಂಗ ದಾನ ಪ್ರೋಟೋಕಾಲ್‌ಗಳ ಪುಕಾರ , ಮೊದಲು ZCCK ಎಂದು ಕರೆಯಲ್ಪಡುತ್ತಿದ್ದ ಜೀವ ಸಾರ್ಥಕಥೆಯ ಅಧಿಕಾರಿಗಳು ಅಂಗ ಸ್ವೀಕರಿಸುವವರ ಕಾಯುವ ಪಟ್ಟಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು . ನಿನ್ನೆ , ಜನವರಿ 15 ರಂದು ಸಂಜೆ 4.30 ಕ್ಕೆ ಶ್ರೀಮತಿ ನಾಗಮ್ಮ ರವರ ಅಂಗಾಗಗಳನ್ನು ( 2 ಮೂತ್ರಪಿಂಡಗಳು , 1 ಯಕೃತ್ತು , ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಕಾನೂನುಬದ್ಧವಾಗಿ ವರ್ಗಾಯಿಸಿದೆ

Share