ಅಭದ್ರತೆಯ ಪರಿಸ್ಥಿತಿಯಲ್ಲಿ ಮನನೊಂದು ಆತ್ಮಹತ್ಯೆ

26
Share

 

ಮೈಸೂರು-ಸಿಂಧನೂರು ತಾಲೂಕಿನ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಶಿವಪುತ್ರಪ್ಪ ಗುಂಡಸಾಗರ ಅವರು ಆರ್ಥಿಕ ಸಂಕಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಃಡಿರುವುದಕ್ಕೆ ಕರ್ನಾಟಕ ರಾಜ್ಯ ಪದವಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ವಿಷಾದಿಂದ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಅವರು ಕಳೆದ ಒಂಬತ್ತು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಣಸಗಿಯಲ್ಲಿ 9 ತಿಂಗಳು, ಸಿಂಧನೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 8 ತಿಂಗಳು ಕಾರ್ಯನಿರ್ವಹಿಸಿದ್ದರು. ಪ್ರಸಕ್ತ ವರ್ಷ ತೆಕ್ಕಲಕೋಟೆ ಸರ್ಕಾರಿ ಕಾಲೇಜಿಗೆ ನೇಮಕಗೊಂಡಿದ್ದರು.
ಕಾರ್ಯಾಭಾರ ಇಲ್ಲದ ಕಾರಣ ನೀಡಿ ಕೆಲಸಕ್ಕೆ ಬರಬೇಡಿ ಬರಬೇಡಿ ಪ್ರಾಚಾರ್ಯರು ಹೇಳುತ್ತಿದ್ದಾರೆ ಎನ್ನಲಾಗಿದೆ. ಪೂರ್ಣಾವಧಿ ಕೆಲಸ ಎಂದು ಹೇಳಿ ಬೇರೆ ಕಡೆ ಕೆಲಸ ಮಾಡಬೇಡಿ ಎಂದು ಹೇಳಿ ಉಪನ್ಯಾಸಕರು ಬದುಕಿನ ಮೇಲೆ ಕಲ್ಲುಹಾಕಿದಂತಾಗಿದೆ. ಅಷ್ಟೇ ಅಲ್ಲದೆ ಕಳೆದ ಮೂರು ತಿಂಗಳಿಂದ ವೇತನವನ್ನು ನೀಡಿಲ್ಲ‌. ಮೃತ ಅತಿಥಿ ಉಪನ್ಯಾಸಕರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಇವರ ದುಡಿಮೆಯಿಂದ ಕುಟುಂಬ ನಿರ್ವಹಣೆ ಆಗುತ್ತಿದೆ. ಇಡೀ ಕುಟುಂಬ ಇವರ ಆದಾಯದ ಮೇಲೆ ಆಧಾರವಾಗಿದೆ. ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಅವರು ಅಭದ್ರತೆಯ ಪರಿಸ್ಥಿತಿಯಲ್ಲಿ ಮನನೊಂದು ಈ ರೀತಿ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿರುವುದು ನೋವಿನ ಸಂಗತಿ. ಇದೇ ರೀತಿಯಲ್ಲಿ ಹಲವಾರು ಜನ ಅತಿಥಿ ಉಪನ್ಯಾಸಕರು ಜೀವನ ತಳ್ಳುತ್ತಿದ್ದಾರೆ. ಇಂತಹ ಇನ್ನೂ ಹಲವು ದುರಂತ ಸಂಭವಿಸುವ ಮುಂಚೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸಮಿತಿಯು ಆಗ್ರಹಿಸುತ್ತದೆ.

ರಾಜ್ಯದಲ್ಲಿ 410ಕ್ಕೂ ಅಧಿಕ ಸರ್ಕಾರಿ ಪದವಿ ಕಾಲೇಜುಗಳಲ್ಲಿ 14 ಸಾವಿರಕ್ಕಿಂತಲೂ ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವತ್ತಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಅವರಿಗೆ ನೀಡಲಾಗುತ್ತಿರುವ ಸಂಬಳವು ಸಾಕಾಗುತ್ತಿಲ್ಲ. ಸಂಬಳಕ್ಕಾಗಿ ಅವರು ತಿಂಗಳಾನುಗಟ್ಟಲೆ ಕಾಯುವ ದುಸ್ಥಿತಿ ಇದೆ. ಈ ಕೂಡಲೇ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು ಹಾಗೂ ವೇತನವನ್ನು ಪ್ರತಿ ತಿಂಗಳು ನೀಡಲು ಕ್ರಮಕೈಗೊಳ್ಳಬೇಕು. ಮೂರು ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಶೈಕ್ಷಣಿಕ ವರ್ಷವಿಡಿ ಕಾರ್ಯ ಬಾಹುಳ್ಯ ನೀಡಬೇಕು ಎಂದು ಕರ್ನಾಟಕ ರಾಜ್ಯ ಪದವಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯು ಸರ್ಕಾರವನ್ನು ಆಗ್ರಹಿಸುತ್ತಿದೆ.

 


Share