ಇಂದು ಚಾರ್ಲಿ ಚಾಪ್ಲಿನ್ ಅವರ 125ನೇ ಜನ್ಮದಿನ. ನಗುತ್ತಾ ಇರಿ ನಗಿಸುತ್ತಾ ಇರಿ.

299
Share

 

*ವಯೋವೃದ್ದರ ವಿಚ್ಛೇದನ……. ! ತುಂಬಾ ಒಳ್ಳೆಯ ಕಥೆ.*

ಮುಂಬೈನಲ್ಲಿರುವ ವೃದ್ಧರೊಬ್ಬರು ನ್ಯೂಯಾರ್ಕ್‌ನಲ್ಲಿರುವ ತಮ್ಮ ಮಗನಿಗೆ ಕರೆ ಮಾಡಿ ಹೇಳುತ್ತಾರೆ :
ಮಗನೇ ನಿನ್ನ ದಿನವನ್ನು ಹಾಳುಮಾಡಲು ನನಗೆ ಇಷ್ಟವಿಲ್ಲ. ಆದರೆ ಈ ವಿಚಾರವನ್ನು ನಾನು ಹೇಳಲೇಬೇಕು. ನಿಮ್ಮ ತಾಯಿ ಮತ್ತು ನಾನು ವಿಚ್ಛೇದನ ಪಡೆಯುತ್ತಿದ್ದೇವೆ. ಮದುವೆಯಾಗಿ 35 ವರ್ಷ ಆಯ್ತು‌. ಇನ್ನು ಸಾಕು….. ಅಂತಾ ಸುಮ್ಮನಾದರೂ. ಆ ಕಡೆಯಿಂದ ಮಗ ಪೋನ್‌ನಲ್ಲೇ ಆಕ್ರೋಶಗೊಂಡ. ಅಪ್ಪ, ನೀವು ಏನು ಮಾತನಾಡುತ್ತಿದ್ದೀರಿ ?, ಅದಕ್ಕೆ ಅಷ್ಟೇ ಕೂಲಾಗಿ, ಮಗನೇ ನಾವು ಇನ್ನು ಮುಂದೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ನಾವು ಬೇರೆ ಬೇರೆ ಇರುತ್ತೇವೆ. ಈ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ, ಆದ್ದರಿಂದ ನೀನು ಹಾಂಗ್‌ಕಾಂಗ್‌ನಲ್ಲಿರುವ ನಿನ್ನ ಸಹೋದರಿಗೆ ಕರೆ ಮಾಡಿ ಹೇಳಿ ಬಿಡು ಅಂತಾ ಪೋನ್ ಕಟ್ ಮಾಡಿದ್ರು.

ತಕ್ಷಣ ಮಗ ತನ್ನ ಸಹೋದರಿಗೆ ಕರೆ ಮಾಡುತ್ತಾನೆ. ಶಾಕ್ ಆದ ಮಗಳು, ಸಹೋದರನನ್ನು ಸಮಾಧಾನ ಮಾಡುತ್ತಾಳೆ. ಇದನ್ನು ನಾನು ನೋಡಿಕೊಳ್ಳುತ್ತೇನೆ ಅಂತಾ ಹೇಳಿದ ಮಗಳು ತಕ್ಷಣ ಮುಂಬೈಗೆ ಕರೆ ಮಾಡಿ, ತಂದೆಗೆ ಆರ್ಡರ್ ಮಾಡುತ್ತಾಳೆ. ನೀವು ವಿಚ್ಛೇದನ ಪಡೆಯುತ್ತಿಲ್ಲ. ನಾನು ಅಲ್ಲಿಗೆ ಬರುವವರೆಗೂ ಏನು ಮಾತನಾಡಬೇಡಿ. ಅಣ್ಣನಿಗೂ ಹೇಳಿದ್ದೇನೆ. ಮಕ್ಕಳಿಗೆ ರಜೆ ಹಾಕಿಸಿದ್ದೇನೆ. ಇನ್ನೆರೆಡು ದಿನದಲ್ಲಿ ಎಲ್ಲರೂ ಅಲ್ಲಿಗೆ ಬರುತ್ತೇವೆ, ಅಲ್ಲಿಯವರೆಗೆ ಏನೂ ಮಾಡಬೇಡ, ಕೇಳಿಸ್ತಾ ? ಅಂತಾ ಮಗಳು ಅಪ್ಪನ ಮಾತುಗಳನ್ನು ಕೇಳದೆ ಪೋನ್ ಕಟ್ ಮಾಡುತ್ತಾಳೆ.

ಇತ್ತ ವೃದ್ದ ಪೋನ್ ಇಟ್ಟವನೇ ತನ್ನ ಹೆಂಡತಿಯ ಕಡೆಗೆ ತಿರುಗುತ್ತಾನೆ. ನೋಡಿದ, ಹೇಳಲಿಲ್ವಾ ? ಅವರು ಬಂದೇ ಬರ್ತಾರೆ ಅಂತಾ….! ನಡೀ ನಮ್ಮ ವಾರ್ಷಿಕೋತ್ಸವದ ಸಿದ್ದತೆ ಮಾಡೋಣ ಅಂತಾ ನಸು ನಗುತ್ತಾ ಹೊರಡುತ್ತಾರೆ.

*ಮರೆಯದಿರಿ……!*

ಈ ಜಗತ್ತಿನಲ್ಲಿ ಯಾರು ಎಲ್ಲಾ 365 ದಿನಗಳು ಕಾರ್ಯನಿರತವಾಗಿರುವುದಿಲ್ಲ. ನಿಮ್ಮ ಮನೆಯವರು ಅಥವಾ ಅತ್ಮೀಯರಿಗೆ ಕೆಲವು ದಿನಗಳನ್ನು ತೆಗೆದುಕೊಂಡರೆ ಆಕಾಶವು ಕುಸಿಯುವುದಿಲ್ಲ.

ಚಾರ್ಲಿ ಚಾಪ್ಲಿನ್ ಅವರ 3 ಹೃದಯಸ್ಪರ್ಶಿ ಹೇಳಿಕೆಗಳನ್ನು ಯಾವಾಗಲೂ ನೆನಪಿನಲ್ಲಿಡಿ.

1 – ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ನಮ್ಮ ತೊಂದರೆಗಳೂ ಕೂಡಾ.

2 – ನಾನು ಮಳೆಯಲ್ಲಿ ನೆನೆಯಲು ಇಷ್ಟಪಡುತ್ತೇನೆ, ಏಕೆಂದರೆ ನನ್ನ ಕಣ್ಣೀರನ್ನು ಯಾರೂ ನೋಡುವುದಿಲ್ಲ.

3 – ಜೀವನದಲ್ಲಿ ಅತ್ಯಂತ ವ್ಯರ್ಥವಾದ ದಿನ, ನಾವು ನಗದೇ ಇರುವ ದಿನ.

ಇಂದು ಚಾರ್ಲಿ ಚಾಪ್ಲಿನ್ ಅವರ 125ನೇ ಜನ್ಮದಿನ. ನಗುತ್ತಾ ಇರಿ ನಗಿಸುತ್ತಾ ಇರಿ.

*ಹೃದಯವಂತರಾಗಿರಿ – ಖುಷಿಯಾಗಿರಿ*
*???????

ಸಂಗ್ರಹ ವಾಟ್ಸಪ್, ರಾಮ್


Share