ಇಂದು ಭಗತ್ ಸಿಂಗ್ ಪಾಠ ತೆಗೆಯಲಾಗಿದೆ, ನಾಳೆ ಮಹಾತ್ಮಾ ಗಾಂಧಿ‌ ಅವರನ್ನು ತೆಗೆಯಬಹುದು – ಡಿಕೆ ಶಿ

180
Share

 

*ಇಂದು ಭಗತ್ ಸಿಂಗ್ ಪಾಠ ತೆಗೆಯಲಾಗಿದೆ, ನಾಳೆ ಮಹಾತ್ಮಾ ಗಾಂಧಿ‌ ಅವರನ್ನು ತೆಗೆಯಬಹುದು – ಡಿಕೆ ಶಿವಕುಮಾರ್*

ರಾಜ್ಯದಲ್ಲಿ ಪಠ್ಯಪುಸ್ತಕದ ಪರಿಷ್ಕರಣೆಯ ಕುರಿತು ಚರ್ಚೆಗಳು ನಡೆಯುತ್ತಿದ್ದು, ಹತ್ತನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಮಾಡಲಾಗುತ್ತಿರುವ ಬದಲಾವಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

“ಭಗತ್ ಸಿಂಗ್ ಕುರಿತ ಪಾಠವನ್ನು ಪಠ್ಯದಿಂದ ತೆಗೆಯಲು ನಿರ್ಧರಿಸಿರುವುದು ದೇಶವಿರೋಧಿ ಕ್ರಮ.” ಎಂದು ಹೇಳಿರುವ ಡಿ.ಕೆ ಶಿವಕುಮಾರ್, “ಇಂದು ಭಗತ್ ಸಿಂಗ್ ಪಾಠ ತೆಗೆದುಹಾಕುತ್ತಿದ್ದಾರೆ, ನಾಳೆ ಮಹಾತ್ಮ ಗಾಂಧಿ ಅವರನ್ನು ತೆಗೆದುಹಾಕುತ್ತಾರೆ” ಎಂದು ಪಠ್ಯಪುಸ್ತಕ ಪರಿಷ್ಕರಣೆಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

“ಬ್ರಿಟಿಷ್ ವಸಾಹತುಶಾಹಿಯಿಂದ ನಮ್ಮನ್ನು ಮುಕ್ತಗೊಳಿಸಿದವರ ತ್ಯಾಗ, ಬಲಿದಾನವನ್ನು ನಾವು ಎಂದಿಗೂ ಮರೆಯಬಾರದು.” ಎಂದು ಟ್ವೀಟ್‌ನಲ್ಲಿ ತಿಳಿಸಿರುವ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ಕೊಡುಗೆ ನೀಡಿದವರ ಕುರಿತ ಪಾಠವನ್ನು ಪಠ್ಯದಿಂದ ಕೈಬಿಡುವ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share