ಇರ್ವಿನ್ ರಸ್ತೆ ಕಾಮಗಾರಿ ಹಿನ್ನೆಲೆ ವಾಹನಗಳಿಗೆ, ಬದಲಿ ಮಾರ್ಗ

440
Share

ಇರ್ವಿನ್ ರಸ್ತೆ ಕಾಮಗಾರಿ ಹಿನ್ನೆಲೆ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ
ಮೈಸೂರು.ಸೆಪ್ಟೆಂಬರ್.21- ಮೈಸೂರಿನ ಇರ್ವಿನ್ ರಸ್ತೆಯ ಆಗಲೀಕರಣ ಕಾಮಗಾರಿ ಹಿನ್ನೆಲೆ ಇರ್ವಿನ್ ರಸ್ತೆಯಲ್ಲಿನ ನೆಹರು ವೃತ್ತದಿಂದ ಪಶ್ಚಿಮಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದವರೆಗೆ ಎರಡು ದಿಕ್ಕುಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಬರ್ಂಧಿಸಿದ್ದು, ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಇರ್ವಿನ್ ರಸ್ತೆಯಲ್ಲಿ ನೆಹರು ವೃತ್ತದಿಂದ ಪಶ್ಚಿಮಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದವರೆಗೆ ಸಂಚರಿಸುತ್ತಿದ್ದ ಎಲ್ಲಾ ನಗರ ಸಾರಿಗೆ ಬಸ್ಸುಗಳು ಬಿ.ಎನ್ ರಸ್ತೆಯಲ್ಲಿ ನೇರವಾಗಿ ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ವೃತ್ತ)- ಚರ್ಚ್ ರಸ್ತೆ- ಸೇಂಟ್ ಫಿಲೋಮಿನಾ ಚರ್ಚ್ ವೃತ್ತ- ಅಶೋಕ ರಸ್ತೆ,- ಗುಂಚಿ ಜಂಕ್ಷನ್- ಎಡತಿರುವು ಪುಲಿಕೇಶಿ ರಸ್ತೆ ಮೂಲಕ ನ್ಯೂ ಎಸ್.ಆರ್ ರಸ್ತೆಯನ್ನು ತಲುಪಿ ಮುಂದೆ ಸಾಗಬೇಕು.
ಇರ್ವಿನ್ ರಸ್ತೆಯಲ್ಲಿ ನೆಹರು ವೃತ್ತದಿಂದ ಪಶ್ಚಿಮಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದವರೆಗೆ ಸಂಚರಿಸುತ್ತಿದ್ದ ಭಾರಿ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮಾದರಿಯ ವಾಹನಗಳು ನೆಹರು ವೃತ್ತದಲ್ಲಿ ಉತ್ತರಕ್ಕೆ ಅಶೋಕ ರಸ್ತೆ ಮೂಲಕ ಸಾಗಿ ಕಬೀರ್ ರಸ್ತೆ ಜಂಕ್ಷನ್‍ನಲ್ಲಿ ಪಶ್ಚಿಮಕ್ಕೆ ತಿರುವು ಪಡೆದು ಕಬೀರ್ ರಸ್ತೆ ಮೂಲಕ ನ್ಯೂ ಎಸ್ ಆರ್ ರಸ್ತೆಯನ್ನು ತಲುಪಿ ಮುಂದೆ ಸಾಗಬೇಕು.
ಇರ್ವಿನ್ ರಸ್ತೆಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಿಂದ ಪೂರ್ವಕ್ಕೆ ನೆಹರೂ ವೃತ್ತದವರಿಗೆ ಸಾಗುತ್ತಿದ್ದ ಎಲ್ಲಾ ಮಾದರಿಯ ವಾಹನಗಳು ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ದಕ್ಷಿಣಕ್ಕೆ ತಿರುವು ಪಡೆದು ಎಸ್.ಆರ್ ರಸ್ತೆ, ಸರ್ದಾರ್ ವಲ್ಲಭಬಾಯಿ ಪಟೇಲ್ ರಸ್ತೆ-ಗಾಂಧಿ ವೃತ್ತ-ಮಹಾವೀರ ವೃತ್ತ- ಬಲತಿರುವು ಪಡೆದು (ದಕ್ಷಿಣಕ್ಕೆ) ಪುರಭವನದ ಬೊಂಬೆಯಾಗಿ ಮುಂದೆ ಸಾಗಬೇಕು.
ಈ ಕಾಮಗಾರಿಯನ್ನು ಸೆಪ್ಟೆಂಬರ್ 21 ರಿಂದ 45 ದಿನಗಳ ಅವಧಿಯ ಒಳಗಾಗಿ ಪೂರ್ಣಗೊಳಿಸಲು ಆದೇಶಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Share