ಇ0ದು-ಬುಡಕಟ್ಟು ಉತ್ಸವ 

250
Share

ಡಿಸೆಂಬರ್ 4 ರಂದು ಬುಡಕಟ್ಟು ಉತ್ಸವ
ಮೈಸೂರು, ):- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ 75ನೇ ವರ್ಷದ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ಡಿಸೆಂಬರ್ 4 ರಂದು ಸಂಜೆ 4 ಗಂಟೆಗೆ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಬುಡಕಟ್ಟು ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿಗಳಾದ ಡಾ.ಬಿ.ಎಸ್. ಮಂಜುನಾಥಸ್ವಾಮಿ ಅವರು ಉದ್ಘಾಟಿಸಲಿದ್ದು, ಸಾಹಿತಿಗಳಾದ ಪ್ರೊ.ಕಾಳೇಗೌಡ ನಾಗವಾರ ಅವರು ಅಧ್ಯಕ್ಷತೆ ವಹಿಸುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಪ್ರಭಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮುದಲಿ ಮಾದಯ್ಯ ಅವರು ವಿಶೇಷ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ.
ಮೈಸೂರಿನ ಕು.ಭವತಾರಿಣಿ ಮತ್ತು ತಂಡದಿAದ ಸುಗಮ ಸಂಗೀತ, ಹೆಚ್.ಡಿ.ಕೋಟೆಯ ಜವರನಾಯಕ ಮತ್ತು ತಂಡದಿAದ ಭಕ್ತಿ ಸಂಗೀತ, ಮೈಸೂರು ತಾಲ್ಲೂಕಿನ ಲೋಕೇಶ್ ಡಿ.ಕೆ. ಮತ್ತು ತಂಡದಿAದ ಜಾನಪದ ಗೀತೆ, ಮೈಸೂರಿನ ಕು. ಮಹಾಲಕ್ಷಿö್ಮ ಮತ್ತು ತಂಡದಿAದ ದಶಾವತಾರ ನೃತ್ಯರೂಪಕ, ಹೆಚ್.ಡಿ.ಕೋಟೆ ತಾಲ್ಲೂಕಿನ ಮಡಿಕೆರೆ ಗ್ರಾಮದ ರಾಮನಾಯಕ ಮತ್ತು ತಂಡದಿAದ ರಂಗ ಗೀತೆಗಳು, ಮೈಸೂರಿನ ಕು. ರಮ್ಯ ಮತ್ತು ತಂಡದಿAದ ಡೊಳ್ಳುಕುಣಿತ, ನಾಗರಹೊಳೆ ಗಿರಿಜನ ಸಮಗ್ರ ಅಭಿವೃದ್ಧಿ ಕಲಾಸಂಸ್ಥೆಯ ರಮೇಶ್ ಮತ್ತು ತಂಡದಿAದ ಸೌದೆ ದಿಮ್ಮಿ ನೃತ್ಯ, ಹೆಚ್.ಡಿ.ಕೋಟೆಯ ತಾಲ್ಲೂಕಿನ ಜಾಕನಕೋಟೆ ಹಾಡಿನ ಚಲ್ಲಂ ಮತ್ತು ತಂಡದಿAದ ಬೆಟ್ಟ ಕುರುಬ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಚೆನ್ನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share