ಉದಯ ಎಕ್ಸ್ ಪ್ರೆಸ್ ಇನ್ನು ಏಳು ದಿನ ಸಂಚಾರ / Uday Express will operate daily

361
Share

 

SOUTH WESTERN RAILWAY

*I. Uday Express will operate daily*

Southern Railway has notified the increase in frequency of Train No. 22665/22666 KSR Bengaluru-Coimbatore-KSR Bengaluru Uday Express from six days a week to daily service, with effect from March 5, 2024. Currently, the Uday Express operates on a six-day-a-week schedule, excluding Wednesdays.

There will be no change in the coach composition, timings, and stoppages of these trains.

*II. Diversion / regulation of trains*

East Central Railway has notified the regulation / diversion of the following trains due to safety related works between Nazirganj-Ujiarpur- Samastipur staions.

1. Train No. 12578 Mysauru-Darbhanga Bagmati Weekly Superfast Express journey commencing on March 1, 2024 will be regulated for 75 minutes.

2. Train No. 15227 Sir M. Visvesvaraya Terminal Bengaluru-Muzaffarpur Express, journey commencing on March 7, 2024, will be diverted to run via Khagaria, Singhiaghat, and Samastipur stations, with skipped stoppages at Begusarai and Barauni Stations.

*I. ಉದಯ ಎಕ್ಸ್ ಪ್ರೆಸ್ ಇನ್ನು ಏಳು ದಿನ ಸಂಚಾರ*

ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುತ್ತಿದ್ದ ಉದಯ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 22665/22666) ರೈಲು ಇನ್ನು ಮುಂದೆ ಬೆಂಗಳೂರು ಮತ್ತು ಕೊಯಮತ್ತೂರು ನಿಲ್ದಾಣಗಳ ನಡುವೆ ಮಾರ್ಚ್ 5, 2024 ರಿಂದ ಅನ್ವಯವಾಗುವಂತೆ ವಾರದ ಏಳು ದಿನವೂ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ.

ಈ ರೈಲಿನ ಬೋಗಿಗಳ ಸಂಯೋಜನೆ, ವೇಳಾಪಟ್ಟಿ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

*II. ರೈಲುಗಳ ಮಾರ್ಗ ಬದಲಾವಣೆ / ನಿಯಂತ್ರಣ*

ನಜೀರಗಂಜ-ಉಜಿಯಾರ್ಪುರ್-ಸಮಸ್ತಿಪುರ ನಿಲ್ದಾಣಗಳ ನಡುವೆ ಸುರಕ್ಷತಗೆ ಸಂಬಂಧಿತ ಕಾಮಗಾರಿಗಳಿಂದಾಗಿ ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲು ಪೂರ್ವ ಮಧ್ಯ ರೈಲ್ವೆಯು ಸೂಚಿಸಿದೆ.

1. ಮಾರ್ಚ್1, 2024 ರಂದು ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12578 ಮೈಸೂರು-ದರ್ಭಂಗಾ ಭಾಗ್ಮತಿ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು 75 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

2. ಮಾರ್ಚ್ 7, 2024 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 15227 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುಜಾಫರ್ಪುರ ಎಕ್ಸ್ ಪ್ರೆಸ್ ರೈಲು ಖಗರಿಯಾ, ಸಿಂಘಿಯಾಘಾಟ್ ಮತ್ತು ಸಮಸ್ತಿಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ ಹೀಗಾಗಿ ಬೇಗುಸರಾಯ್ ಮತ್ತು ಬರೌನಿ ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಿರುತ್ತದೆ.

Dr. Manjunath Kanamadi
Chief Public Relations Officer
South Western Railway, Hubballi


Share