ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ

655
Share

ಕಲಬುರಗಿ.ಮೇ.03(ಕ.ವಾ)
ಕಲಬುರಗಿ ತಾಲೂಕಿನ ಸಣ್ಣೂರ ಗ್ರಾಮ ಪಂಚಾಯತ ವ್ಯಾಪ್ತಿಯ ಪಾಳಾ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕೆರೆ ಹುಳು ಎತ್ತುವ ಕಾಮಗಾರಿಯನ್ನು ಶನಿವಾರ ಕಲಬುರ್ಗಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ ಅವರು ಭೇಟಿ ನೀಡಿ ವೀಕ್ಷಿಸಿದರು.

ಕಾಮಗಾರಿಯಲ್ಲಿ ನಿರತ 212 ಕಾರ್ಮಿಕರಿಗೆ ಮಾಸ್ಕ್ ಹಾಗು ಹ್ಯಾಂಡ್ ಸ್ಯಾನಿಟೈಜರ ಬಿಡುಗಡೆ ಮಾಡಿ ಎಲ್ಲರ ಆರೋಗ್ಯ ಕ್ಷೇಮ ವಿಚಾರಿಸಿದರು. ಸರ್ಕಾರದಿಂದ ನೀಡಲಾಗುವ ಪಡಿತರ ರೇಷನ್ ಪಡೆದಿರುವ ಬಗ್ಗೆ ಮಾಹಿತಿ ಪಡೆದ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಲು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಇಸ್ಮಾಯೀಲ ಎಂ.ಡಿ., ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ, ಸಣ್ಣೂರ ಪಿ.ಡಿ.ಓ ಹೇಮಾ ದೇಶಮುಖ, ಎಂ.ಐ.ಎಸ್ ಕೋಆರ್ಡಿನೇಟರ್ ರಾಜು ಒಂಟಿ ಇದ್ದರು.


Share