ಎಂಪಿ ಅಡಿಗೆಮನೆ:???ಚಿಲಕು (ಹಿದಕು ) ಅವರೆಬೇಳೆ ಮಸಾಲ ತೊವ್ವೆ?

757
Share

???ಚಿಲಕು (ಹಿದಕು ) ಅವರೆಬೇಳೆ ಮಸಾಲ ತೊವ್ವೆ

??
~~~~~~

ಶ್ರೀ ಪ್ರಭಾಕರ ಮೂರ್ತಿ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಮೈಸೂರು
ಗಮನಿಸಿ : ಅವರೆಕಾಳಿಗೆ ದೇಹದಲ್ಲಿ ಇನ್ಸೂಲಿನ್ ತಯಾರಿಸುವ ಶಕ್ತಿ ಇದೆ

ಮಾಗಿ ಕಾಲ..ಸೊನೆ ಅವರೆಕಾಯಿ…ಮನಸ್ಸು ಏನಾದರೂ ಋಚಿಯಾದ ಅಡುಗೆ ಮಾಡಿ ತಿನ್ನುವ ಕಡೆ ಗಮನ. ಆಗ ಅನಿಸಿದ್ದು ಹಿದಕವರೆಬೇಳೆ ಮಸಾಲ ತೊವ್ವೆ…ಬಹು ಮಸಾಲೆ ಹಾಕಿ ಮಾಡಬಹುದಾದ ರುಚಿಯಾದ ಅಜ್ಜಿ ಕಾಲದ ಖಾದ್ಯ.

ಇವಷ್ಟೇ ಬೇಕು ಮತ್ತು ಮಾಡುವ ವಿಧಾನ :
2 ಕೆ ಜಿ ಅವರೆಕಾಯಿಯಿಂದ ತೆಗೆದ ಕಾಳನ್ನು ನೀರಿನಲ್ಲಿ
ಒಂದು ರಾತ್ರಿ ನೆನೆಸಿ ಹಿದುಕ ಬೇಕು;
….ಹಿದುಕಿದ ಅವರೆ ಕಾಳನ್ನು ಸ್ವಲ್ಪ ಉಪ್ಪು ಸೇರಿಸಿ ಬೇಯಲು ಇಡಿ;
….ಕಾಳು ಬೇಯುವ ಸಮಯದಲ್ಲಿ ಮಸಾಲೆ ರೆಡಿ ಮಾಡಿ;

ಮಸಾಲೆ : ಋಚಿಗೆ ತಕ್ಕಷ್ಟು ಬ್ಯಾಡಗಿ ಗುಂಟೂರು ಹಣ್ಣು ಮೆಣಶಿನಕಾಯಿ, ಧನಿಯಾ,ಜೀರಿಗೆ , ಸಾಸವೆ,ಉ ಬೇಳೆ ,ಕ ಬೇಳೆ , ದಾಲ್ಚಿನ್ನಿ, ಗಸಗಸೆ,ಜಾ ಪತ್ರೆ, ಜಾಯಿಕಾಯಿ ….ಎಲ್ಲವನ್ನೂ ಒಂದು ಚಮಚ ಎಣ್ಣೆಯಲ್ಲಿ ಹದವಾಗಿ ಹುರಿದು , ಪುಡಿ ಮಾಡಿ;
….ಈ ಪುಡಿಗೆ ಸ್ವಲ್ಪ ಒಣ ಕೊಬ್ಬರಿ, ಅರಿಶಿಣಪುಡಿ, ಹುಣಿಸೆ ರಸ ಸೇರಿಸಿ ನುಣ್ಣಗೆ ರುಬ್ಬಿ ;
….ನಾಲ್ಕು ಈರುಳ್ಳಿ ಗೆಡ್ಡೆ ಸಣ್ಣಗೆ ಹಚ್ಚಿ ಸ್ವಲ್ಪ ಎಣ್ಣೆಯಲ್ಲಿ ಕೆಂಪಗೆ ಹುರಿಯಿರಿ;
ಎರಡು ಜಾಮ್ ಟೊಮೊಟೊ ಸಣ್ಣಗೆ ಹೆಚ್ಚಿ ಈರುಳ್ಳಿ ಜೊತೆ ಮಿಕ್ಷ್ ಮಾಡಿ ಹುರಿಯಿರಿ;
(ಬೆಲ್ಲುಳ್ಲಿ ಐಚ್ಚಿಕ )
…ಬೆಂದ ಅವರೆಕಾಳಿಗೆ ಮಸಾಲೆ ಮಿಕ್ಸ್ ಮಾಡಿ ಕುದಿಸಿ:
… ಋಚಿಗೆ ತಕ್ಕಷ್ಟು ಉಪ್ಪು ಮತ್ತು ವಿಶೇಷ ರುಚಿಗಾಗಿ ಸ್ವಲ್ಪ ಬೆಲ್ಲ ಸೇರಿಸಿ ;
….ಕಡಲೇಕಾಯಿ ಬೀಜ, ಸಾಸವೆ,ಒಣ ಮೆ ಕಾಯಿ ಒಗ್ಗರಣೆ ಹಾಕಿ;
…..ಚಿಲಕು (ಹಿ ದ ಕು) ಅವರೆ ಕಾ ಳು /ಬೇ ಳೆ ಮಸಾಲ ತೊವ್ವೆ ರೆಡಿ;

?ಅವರೆಕಾಳು ರೊಟ್ಟಿಯೊಂದಿಗೆ ರುಚಿ ಸವಿಯಿರಿ….ಅನುಭವ* ಹಂಚಿಕೊಳ್ಳಿ ?


Share