ಎಂಪಿ ಅಡುಗೆಮನೆ ?ಹೆರಳೆ ಹಣ್ಣಿನ ಗೊಜ್ಜು?

684
Share

?ಹೆರಳೆ ಹಣ್ಣಿನ ಗೊಜ್ಜು?

ಶ್ರೀಯುತ ಪ್ರಭಾಕರ್ ಮೂರ್ತಿ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು

ಹೆರಳೆ ಹಣ್ಣಿನ ವಿಶೇಷ : 1)ಸಿ ಅನ್ನಾಂಗ ಹೆಚ್ಚಾಗಿ ಇರುವ ಹುಳಿಯಾದ ಹಣ್ಣು.
2)ಇನ್ನೊಂದು ಅಪರೂಪದ ಜಾತಿ ಹೆರಳೆ ಹಣ್ಣು.. Buddha’s Hand (ಬುದ್ದನ ಕೈ) (ಚಿತ್ರ 1)

ಗೊಜ್ಜು ಮಾಡುವ ವಿಧಾನ : ನಮ್ಮ ದೇಶದ ಹೆರಳೆ ಹಣ್ಣಿಗೆ Ginger Citron ಎಂದು ಗುರುತಿಸಲ್ಪಡುತ್ತದೆ… 3 ಹಣ್ಣನ್ನು ಅರ್ಧ ಭಾಗಕ್ಕೆ ಸೀಳಿ ರಸ ತೆಗೆದಿಡಿ…ತಿರುಳು ಸಮೇತ ಸಿಪ್ಪೆಯನ್ನು ಸಣ್ಣಗೆ ತುಂಡು ಮಾಡಿ ಹಬೆಯಲ್ಲಿ ಬೇಯಿಸಿ..ಬೆಂದ ಹಣ್ಣನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿಯಿರಿ…ಭ್ಯಾಡಗಿ ಮೆಣಸಿನ ಕಾಯಿ (10) +ಕಾಳು ಮೆಣಸು (10)+ಸ್ವಲ್ಪ ಜೀರಿಗೆ+1ಚಮಚ ಮೆಂತ್ಯ+2ಚಮಚ ಉ ಬೇಳೆ ಕಡ್ಲೆ ಬೇಳೆ ಕೆಂಪಗೆ ಹುರಿದು ಪುಡಿ ಮಾಡಿದ ಮಸಾಲೆಗೆ, ಒಂದು ಹೋಳು ಒಣ ಕೊಬರಿ ತುರಿ ಸ್ವಲ್ಪ ನೀರು ಸೇರಿಸಿ ರುಬ್ಬಿ,ಹುರಿದ ಹೋಳಿಗೆ ಸೇರಿಸಿ ಕುದಿಸಿ…. ಸ್ವಲ್ಪ ಬೆಲ್ಲ,2ಚಮಚ ಅರಿಶಿನ ಸೇರಿಸಿ…ಸ್ವಲ್ಪ ಹುಣಿಸೆ ಹುಳಿ,ತೆಗೆದಿಟ್ಟ ಹೆರಳೆ ರಸ, ರುಚಿಗೆ ಉಪ್ಪು ಸೇರಿಸಿ ಕುದಿಸಿ…ಸಾಸ್ವೆ ಮತ್ತು ಹಿಂಗು ಒಗ್ಗರಣೆ ಕೊಡಿ …. ರುಚಿ ರುಚಿ ಗಮ ಗಮ ಹೆರಳೆ ಹಣ್ಣಿನ ಗೊಜ್ಜು ರೆಡಿ…ರೊಟ್ಟಿ ಚಪಾತಿ ಅನ್ನ ಎಲ್ಲಕ್ಕೂ ಹೊಂದಿಕೆ ಆಗುತ್ತೆ … ಮಾಡಲು ಪ್ರಯತ್ನಿಸಿ … ತಿನ್ನಿ ….ಅನುಭವ ಹಂಚಿಕೊಳ್ಳಿ


Share